Advertisement

ಈ ಇಬ್ಬರು ಯುವ ಆಟಗಾರರು ಭಾರತದ World Cup ತಂಡದ ಭಾಗವಾಗಬಹುದು: ರವಿ ಶಾಸ್ತ್ರಿ

06:14 PM May 19, 2023 | Team Udayavani |

ಮುಂಬೈ: ಈ ವರ್ಷದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ ನ ಭಾಗವಾಗಬಹುದಾದ ಐಪಿಎಲ್‌ ನಲ್ಲಿ ತನ್ನನ್ನು ಮೆಚ್ಚಿಸಿದ ಯುವ ಬ್ಯಾಟರ್‌ಗಳನ್ನು ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಬಹಿರಂಗಪಡಿಸಿದ್ದಾರೆ.

Advertisement

ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಉದಯೋನ್ಮುಖ ಶುಬ್ಮನ್ ಗಿಲ್ ಅವರಂತೆ ಭಾರತವು ಈಗಾಗಲೇ ಬಲಿಷ್ಠ ಅಗ್ರ ಕ್ರಮಾಂಕದ ಆಟಗಾರರನ್ನು ಹೊಂದಿದೆ ಎಂದು ಶಾಸ್ತ್ರಿ ನಂಬಿದ್ದಾರೆ. ಯುವ ಬ್ಯಾಟರ್‌ ಗಳೂ ಮುಂದಿನ ಹೆಜ್ಜೆ ಇಡಲು ಸಿದ್ಧವಾಗಿದ್ದಾರೆ ಎನ್ನುತ್ತಾರೆ ಶಾಸ್ತ್ರಿ. ಪ್ರಮುಖ ಆಟಗಾರರಿಗೆ ಗಾಯಗಳಾದರೆ 50-ಓವರ್ ವಿಶ್ವಕಪ್ ನಲ್ಲಿ ಅವರ ಜಾಘ ತುಂಬಬಲ್ಲ ಸಮರ್ಥರಿದ್ದಾರೆ ಎಂದರು.

ಇದನ್ನೂ ಓದಿ:RamaNagar: ಗುರುವಿನಂತೆ ಶಿಷ್ಯನಿಗೂ ಮುಖ್ಯಮಂತ್ರಿ ಹುದ್ದೆ ಕೈಜಾರಿತಾ?

ಯುವ ಎಡಗೈ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಐಪಿಎಲ್‌ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳೊಂದಿಗೆ ಒಟ್ಟು 575 ರನ್‌ಗಳನ್ನು ಗಳಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ನ ರಿಂಕು ಸಿಂಗ್ (13 ಪಂದ್ಯಗಳಲ್ಲಿ 407 ರನ್) ಕೂಡಾ ಶಾಸ್ತ್ರಿಯವರ ಕಣ್ಣಿಗೆ ಬಿದ್ದ ಮತ್ತೋರ್ವ ಪ್ರತಿಭೆ.

ಜೈಸ್ವಾಲ್ ಮತ್ತು ರಿಂಕು ಇಬ್ಬರೂ ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ತಮ್ಮ ಫಾರ್ಮ್ ಪರಿವರ್ತನೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದರು ಶಾಸ್ತ್ರಿ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next