Advertisement
ಡಿಸೆಂಬರ್ 19ರಂದು ದುಬೈನಲ್ಲಿ ಐಪಿಎಲ್ ಮಿನಿ ಹರಾಜು ನಡೆಯಲಿದೆ. ಇದೇ ಮೊದಲ ಬಾರಿಗೆ ಭಾರತದಿಂದ ಹೊರಗಡೆ ಐಪಿಎಲ್ ಹರಾಜು ಮಾಡಲಾಗುತ್ತಿದೆ.
Related Articles
Advertisement
ಇಂಗ್ಲೆಂಡ್ ವೇಗಿ ಆರ್ಚರ್ ತನ್ನ ಕ್ರಿಕೆಟ್ ವೃತ್ತಿಜೀವನದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಗಾಯಗಳಿಂದ ಬಳಲುತ್ತಿದ್ದಾರೆ. ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡ ಸೇರಿದ್ದ ಜೋಫ್ರಾ ಆರ್ಚರ್ ಮೊದಲ ಸೀಸನ್ ನಲ್ಲಿ ಆಡಿರಲಿಲ್ಲ. 2023ರ ಐಪಿಎಲ್ ನಲ್ಲಿ ಆರ್ಚರ್ ಕೆಲವು ಪಂದ್ಯಗಳನ್ನು ಆಡಿದ್ದರು. ಈ ಬಾರಿ ಮುಂಬೈ ಆರ್ಚರ್ ಅವರನ್ನು ಕೈಬಿಟ್ಟಿದೆ. ಆದರೆ ಹರಾಜಿಗೆ ಅವರು ಹೆಸರು ನೋಂದಾಯಿಸಿಕೊಂಡಿಲ್ಲ.
ಕೇಧಾರ್ ಜಾಧವ್
ಹರಾಜು ಪಟ್ಟಿಯಲ್ಲಿ ಇರದ ಮತ್ತೊಬ್ಬ ಪ್ರಮುಖರೆಂದರೆ ಕೇಧಾರ್ ಜಾಧವ್, ಇವರು ಕಳೆದ ಋತುವಿನಲ್ಲಿ ಆರ್ ಸಿಬಿ ತಂಡದ ಪರವಾಗಿ ಕೂಟದ ಕೊನೆಯಲ್ಲಿ ಕಾಣಿಸಿಕೊಂಡಿದ್ದರು. ಅವರು ತಮ್ಮ ಹೆಸರನ್ನು ಎರಡು ಕೋಟಿ ಮೂಲಬೆಲೆಯ ಬ್ರಾಕೆಟ್ ನಲ್ಲಿ ಹಾಕುತ್ತಾರೆ ಎಂದು ವರದಿಗಳಾಗಿದ್ದವು. ಆದರೆ ಅಧಿಕೃತ ಪಟ್ಟಿ ಹೊರಬಂದ ನಂತರ ಅವರ ಹೆಸರು ಕಾಣೆಯಾಗಿದೆ.
ಶಕಿಬ್ ಅಲ್ ಹಸನ್
ಬಾಂಗ್ಲಾದೇಶ ಆಲ್ ರೌಂಡರ್ ಶಕಿಬ್ ಅಲ್ ಹಸನ್ ಅವರು ಈ ಬಾರಿಯ ಐಪಿಎಲ್ ನಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡಲು ಶಕಿಬ್ ಟಿ20 ಟೂರ್ನಿಗಳಲ್ಲಿ ಆಡಲಿರದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಸೋಮವಾರ ಬಿಸಿಸಿಐ ಪ್ರಕಟಿಸಿದ ಐಪಿಎಲ್ 2024 ರ ಹರಾಜು ಪಟ್ಟಿಯಲ್ಲಿ ಅವರ ಹೆಸರಿಲ್ಲ.