ಹೊಸದಿಲ್ಲಿ: ಜಾಗತಿಕ ತಾಪಮಾನದ ದುಷ್ಪರಿಣಾಮ ಗಳ ಬಗ್ಗೆ ವಿಶ್ವಸಂಸ್ಥೆಯ 195 ಪರಿಸರ ತಜ್ಞರ ಸಮಿತಿ, ಸೋಮವಾರ ಬಿಡುಗಡೆ ಮಾಡಿರುವ ಎಚ್ಚರಿಕೆಯ ವರದಿಯನ್ನು (ಐಪಿಸಿಸಿ ವರದಿ) ಅವಲೋಕನ ಮಾಡಿರುವ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ), ಭಾರತಕ್ಕೆ ಮುನ್ನೆಚ್ಚರಿಕೆ ನೀಡಿದೆ.
ಮಂಗಳೂರು ಸೇರಿದಂತೆ ಭಾರತದ ಕರಾವಳಿ ತೀರಗಳಲ್ಲಿರುವ 12 ನಗರ ಗಳು ಈ ಶತಮಾನದ ಅಂತ್ಯಕ್ಕೆ ಮುಳು ಗಲಿವೆ ಎಂಬ ಎಚ್ಚರಿಕೆಯನ್ನೂ ನೀಡಿದೆ.
ಐಪಿಸಿಸಿ ವರದಿ ಹಾಗೂ ತನ್ನ ಉಪಗ್ರಹಗಳು ನೀಡಿರುವ ಮಾಹಿತಿ ಗಳನ್ನು ತಾಳೆ ಹಾಕಿರುವ ನಾಸಾ, 1988 ರಿಂದೀಚೆಗೆ, ಜಾಗತಿಕ ತಾಪಮಾನ ಗಣ ನೀಯವಾಗಿ ಹೆಚ್ಚಾಗಿದ್ದರಿಂದ ಹಿಮ ಚ್ಛಾ ದಿತ ಪ್ರದೇಶಗಳಲ್ಲಿ ಹಿಮಕರಗಿ ಸಮುದ್ರ ಸೇರುತ್ತಿದೆ. ಈ ಹಿಂದೆ ಪ್ರತೀ 100 ವರ್ಷಗಳಿಗೊಮ್ಮೆ ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಈಗ ಹತ್ತಾರು ವರ್ಷಗಳಿಗೊಮ್ಮೆ ಏರಿಕೆಯಾ ಗು ತ್ತಿದೆ. 2050ರೊಳಗೆ ಸಮುದ್ರದ ನೀರಿನ ಮಟ್ಟ ಪ್ರತೀ 5ರಿಂದ 7 ವರ್ಷದಲ್ಲಿ ಹೆಚ್ಚಾಗಬಹುದು. ಇದರಿಂದ ಈ ಶತ ಮಾ ನದ ಅಂತ್ಯಕ್ಕೆ ಮಂಗಳೂರು, ಮುಂಬಯಿ, ಚೆನ್ನೈ, ಕೊಚ್ಚಿ, ವಿಶಾಖ ಪಟ್ಟಣ ಸೇರಿ ದಂತೆ ದೇಶದ 12 ಕರಾವಳಿ ನಗರಗಳು ಮುಳುಗಡೆಯಾಗುತ್ತವೆ ಎಂದಿದೆ.
ಇದಲ್ಲದೆ, ತಗ್ಗುಪ್ರದೇಶಗಳಿಗೆ ಸಾಗರ ನೀರು ನುಗ್ಗುವುದು, ಪ್ರತೀ 100 ವರ್ಷಕ್ಕೊಮ್ಮೆ ಆಗುತ್ತಿದ್ದ ಕರಾವಳಿ ಭೂ ಸವಕಳಿ ಇನ್ನು ಪ್ರತೀ ವರ್ಷ ಘಟಿಸುವುದು ಜರಗುತ್ತವೆ. ಕರಾವಳಿಯಲ್ಲಾಗುವ ಈ ಬದಲಾವಣೆ, ಗುಡ್ಡಗಾಡು ಪ್ರದೇಶ, ಬಯ ಲು ಸೀಮೆಗಳಲ್ಲಿನ ಹವಾಗುಣದ ಮೇಲೂ ದುಷ್ಪರಿಣಾಮ ಬೀರಿ, ಅತೀ ಶೀತ ಗಾಳಿ, ಅತ್ಯುಷ್ಣ ಗಾಳಿಯ ಹಾವಳಿ ಜಾಸ್ತಿ ಯಾಗುತ್ತದೆ ಎಂದು ನಾಸಾ ವಿವರಿಸಿದೆ.