Advertisement
ಜುಲೈ 1 ರಿಂದ ಈ ಕೆಳಗಿನ ಬದಲಾವಣೆಯ ಕಾರಣದಿಂದಾಗಿ ನಮ್ಮ ಜೇಬಿಗೆ ಕತ್ತರಿ ಬೇಳು ಸಾಧ‍್ಯತೆ ಇದೆ. ಜೀವನ ಶೈಲಿ ದುಬಾರಿ ಆಗಲಿದೆ ಎನ್ನುವುದನ್ನು ಈ ಬದಲಾವಣೆ ತೋರಿಸುತ್ತದೆ. ಪ್ರಮುಖ 5 ಬದಲಾವಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
Related Articles
Advertisement
ಎಸ್ ಬಿ ಐ ಚೆಕ್ ಬುಕ್ ಇನ್ಮುಂದೆ ದುಬಾರಿ
ಎಸ್ ಬಿ ಐ ಜುಲೈ 1 ರಿಂದ ಬದಲಾವಣೆ ಮಾಡುತ್ತಿರುವ ಪ್ರಮುಖ ಬದಲಾವಣೆಯಲ್ಲಿ ಚೆಕ್ ಬುಕ್ ಬದಲಾವಣೆಯು ಕೂಡ ಒಂದು 10 ಚೆಕ್ ಗಳಿಗೆ ಬಿ ಎಸ್ ಬಿ ಡಿ ಖಾತೆದಾರರಿಗೆ ಯಾವ ಶುಲ್ಕವನ್ನೂ ವಿಧಿಸುವುದಿಲ್ಲ. ಆದರೆ 10 ಚೆಕ್ ಗಳ ನಂತರ 40 ರೂ ಮತ್ತು ಜಿಎಸ್‌ಟಿ ವಿಧಿಸಲಾಗುತ್ತದೆ ಎಂದು ಎಸ್ ಬಿ ಐ ಮಾಹಿತಿ ನೀಡಿದೆ. ಅದೇ ಸಮಯದಲ್ಲಿ, 25 ಚೆಕ್ ಹೊಂದಿರುವ ಚೆಕ್ ಬುಕ್ ಮೇಲೆ 75 ತುರ್ತು ಚೆಕ್ ಬುಕ್ ಬೇಕಾದಲ್ಲಿ 50 ರು ಶುಲ್ಕ ಪಾವತಿಸಬೇಕಾಗುತ್ತದೆ. ಹಿರಿಯ ನಾಗರಿಕರಿಗೆ ಚೆಕ್ ಬುಕ್ ನಲ್ಲಿನ ಹೊಸ ಸೇವಾ ಶುಲ್ಕದಿಂದ ವಿನಾಯಿತಿ ನೀಡಲಾಗುವುದು ಎಂದು ಬ್ಯಾಂಕ್ ಹೇಳಿದೆ.
LPG ನೂ ದುಬಾರಿ..?
ಕಚ್ಚಾ ತೈಲ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನೂ ಹೆಚ್ಚಿಸಬಹುದೆಂಬ ಆತಂಕ ಎದುರಾಗಿದೆ. ಜುಲೈ 1 ರಿಂದ ಎಲ್ ಪಿ ಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಲಾಗುವುದು ಎಂದು ಹೇಳಲಾಗಿದೆ. ಇನ್ನು, ತೈಲ ಕಂಪನಿಗಳು ಜೂನ್ ತಿಂಗಳಲ್ಲಿ ಬೆಲೆಗಳನ್ನು ಹೆಚ್ಚಿಸಿಲ್ಲ. ಎಲ್ ಪಿ ಜಿ ಸಿಲಿಂಡರ್ ಗಳ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನದಂದು ನಿಗದಿಪಡಿಸಲಾಗುತ್ತದೆ. ಆದರೇ, ಜೂನ್ ನಲ್ಲಿ ಹೆಚ್ಚಿಸದಿದ್ದ ಕಾರಣ ಜುಲೈ ನಲ್ಲಿ ದುಬಾರಿ ಆಗಬಹುದು ಎಂದು ಹೇಳಲಾಗುತ್ತಿದೆ.
ಟಿಡಿಎಸ್, ಟಿಸಿಎಸ್ ಕಡಿತದಲ್ಲೂ ಬದಲಾವಣೆ
ಜುಲೈ 1 ರಿಂದ ಹೆಚ್ಚಿನ ಟಿಡಿಎಸ್ ಟಿಸಿಎಸ್ ಶುಲ್ಕ ವಿಧಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದವರ ಮೇಲೆ ಕಳೆದ ಎರಡು ವರ್ಷಗಳಿಂದ ಆದಾಯ ತೆರಿಗೆ ರಿಟರ್ನ್ ಸಲ್ಲಿಸದವರನ್ನು ಈಗ ಕಟ್ಟುನಿಟ್ಟಾಗಿ ಪರಿಗಣಿಸಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದೆ ಎಂದು ವರದಿಯಾಗಿದೆ.
ಸಿಂಡಿಕೇಟ್ ಬ್ಯಾಂಕಿನ ಐ ಎಫ್ ಎಸ್ ಸಿ ಕೋಡ್ ಬದಲಾವಣೆ
ಜುಲೈ 1 ರಿಂದ ಸಿಂಡಿಕೇಟ್ ಬ್ಯಾಂಕಿನ ಐ ಎಫ್ ಎಸ್ ಸಿ ಕೋಡ್ ಬದಲಾವಣೆಯಾಗಲಿದೆ. ಕೆನರಾ ಬ್ಯಾಂಕ್ ನೊಂದಿಗೆ ಸಿಂಡಿಕೇಟ್ ಬ್ಯಾಂಕ್ ವಿಲೀನಗೊಂಡಿರುವುದರಿಂದ ಸಿಂಡಿಕೇಟ್ ಬ್ಯಾಂಕ್ ಖಾತೆದಾರರು ಹೊಸ ಐ ಎಫ್ ಎಸ್ ಸಿ ಕೋಡ್ ಗಳನ್ನು ಪಡೆಯುತ್ತಾರೆ. ಕೆನರಾ ಬ್ಯಾಂಕ್, ಈಗಾಗಲೇ ಹೊಸ ಐ ಎಫ್ ಎಸ್ ಸಿ ಕೋಡ್ ಪಡೆಯಲು ಸಿಂಡಿಕೇಟ್ ಬ್ಯಾಂಕಿನ ಎಲ್ಲಾ ಖಾತೆದಾರರಿಗೆ ಮನವಿ ಮಾಡಿದೆ. ಹೊಸ ಐಎಫ್‌ಎಸ್‌ಸಿ ಕೋಡ್ ಇಲ್ಲದೆ, ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಯಾವುದೇ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಇನ್ನು, ಜುಲೈ 1 ರಿಂದ ಹಳೆಯ ಚೆಕ್ ಬುಕ್ ಗಳ ಬದಲಿಗೆ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಹೊಸ ಚೆಕ್ ಬುಕ್ ಗಳನ್ನು ಸಹ ನೀಡಲಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಇದನ್ನೂ ಓದಿ : ತನ್ನ ಬಳಕೆದಾರರಿಗೆ ಮತ್ತೆರಡು ವಿಶೇಷತೆಗಳನ್ನು ನೀಡುತ್ತಿದೆ ವಾಟ್ಸ್ಯಾಪ್ ..!