Advertisement

ಆಮಂತ್ರಣವಿಲ್ಲದೆ ಆಗಮಿಸುವ ಅಪರೂಪದ ಅತಿಥಿಗಳು ಇವರು!

12:12 AM Apr 09, 2019 | sudhir |

ಕುಂಬಳೆ: ಇದೀಗ ವಿವಿಧೆ ದೇವಸ್ಥಾನ, ದೈವಸ್ಥಾನ, ಜಾತ್ರೆ, ಮದುವೆ ಮುಂಜಿ,ಉತ್ತರಕ್ರಿಯೆ, ಪೂಜೆಗಳು ಜರಗುವ ಕೇÒತ್ರಗಳಿಗೆ ಮತ್ತು ಮನೆಗೆಳಿಗೆ ಒಮ್ಮೆಲೇ ಸುಮಾರು ಹತ್ತಿಪ್ಪತ್ತರಷ್ಟು ಮಂದಿ ಆಗಂತುಕರಾಗಿ ನುಗ್ಗುವರು.ಅದರರಲ್ಲಿ ಓರ್ವರು ಶಾಲು ಹಾಕಿ ಪರಿಚಿತರಂತೆ ಎಲ್ಲರ ಮುಂದೆ ಹಲ್ಲು ಗಿಂಜಿ ಕೈಕುಲುಕಿ ತಾನು ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸುತ್ತಿರುವೆನು. ನನ್ನನ್ನು ಆಶೀರ್ವದಿಸಿ ಗೆಲ್ಲಿಸಬೇಕೆಂಬುದಾಗಿ ಅತ್ಯಂತ ವಿನಮ್ರವಾಗಿ ತಲೆಬಾಗಿ ವಿನಂತಿಸುವರು.ಇನ್ನೂ ಒಂದುಹೆಜ್ಜೆ ಮುಂದುವರಿದು ಪ್ರಾಯದವರ ಕಾಲಿಗೆರಗಿ ಅವರ ಕೈಗಳನ್ನು ಹಿಡಿದು ತನ್ನ ತಲೆಮೇಲಿರಿಸಿ ಗೆಲ್ಲಲು ಆಶೀರ್ವದಿಸಬೇಕೆನ್ನುವರು.

Advertisement

ಇದು ಪ್ರಕೃತ ಲೋಕಸಭಾ ಚುವಾವಣೆ ಘೋಷಣೆಯಾದ ಬಳಿಕ ಹೆಚ್ಚಿನೆಲ್ಲೆಡೆ ಕಂಡು ಬರುವ ದೃಶ್ಯವಾಗಿದೆ.ಈ ಆಗಮಿಸುವ ಅಪರೂಪದ ಅತಿಥಿಗಳಿಗೆ ಚುನಾವಣೆಗೆ ಮುನ್ನ ಆಮಂತ್ರಣ ನೀಡಿದರೂ ಸಾರ್ವಜನಿಕ ಕಾರ್ಯಕ್ರಮಗಳಿಗೆ,ಖಾಸಗೀ ಸಮಾರಂಭಗಳಿಗೆ ಬರಲು ಸಮಯವಿರುವುದಿಲ್ಲ.ಆದರೆ ಈಗ ಆಮಂತ್ರಣವಿಲ್ಲದೆ ಆಗಮಿಸುವ ಅತಿಥಿಗಳಾಗಿರುವರು. ಮಾತ್ರವಲ್ಲದೆ ಚುನಾವಣೆಯ ಭಾರೀ ಬ್ಯುಸಿಯಲ್ಲಿದ್ದರೂ ಇವರು ಖಾಸಗೀ ಸಮಾರಂಭಗಳಲ್ಲಿ ಹೆಚ್ಚುಕಾಲ ಕಳೆಯುವರು. ಇನ್ನಷ್ಟು ಜನರಸಂಪರ್ಕವಾಗಿ ಅವರ ಸಿಂಪತಿ ದೊರಕಿ ತನಗೆ ಮತ ಹೆಚ್ಚಾಗಬಹುದೆಂಬ ನೀರೀಕ್ಷೆ ಇವರದು.

ಆದರೆ ಮತದಾರರು ಭಾರೀ ಬುದ್ಧಿವಂತರಾಗಿದ್ದು ಇವರು ಎಲ್ಲಾ ಪಕ್ಷಗಳ ಅಭ್ಯìರ್ಥಿಗಳ ಮುಂದೆ ವಿರೋಧಿ ನಿಲುವನ್ನು ವ್ಯಕ್ತಪಡಿಸದೆ ನನ್ನ ಮತ ನಿಮಗೇ ಕೊಡುತೇ¤ವೆ.ನೀವು ಗೆಲ್ಲುವಿರೆಂಬುದಾಗಿ ಅಭಯದ ಭರವಸೆ ನೀಡುವರು.ಇದರಿಂದ ಅಭ್ಯರ್ಥಿಗಳು ಇವರ ಮತ ನನಗೇ ದೊರೆಯುವುದೆಂಬ ವಿಶ್ವಾಸದಲ್ಲಿ ಮುಂದುವರಿಯುವರು.

ನಾಸ್ತಿಕರೂ ಆಸ್ತಿಕರು ?
ಆಸ್ತಿಕರು ಭಯಭಕ್ತಿಯಿಂದ ಧಾರ್ಮಿಕ ಕೇÒತ್ರ ಸಮಾರಂಭಗಳಲ್ಲಿ ಬೆಂಬಲಿಗರೊಂದಿಗೆ ಮುಕ್ತವಾಗಿ ಭಾಗವಹಿಸುವರು. ಆದರೆ ನಾಸ್ತಿಕ ಪಕ್ಷದ ನಾಯಕರೂ ಇದೀಗ ಚುನಾವಣೆಯ ಸಂದರ್ಭದಲ್ಲಿ ಆಸ್ತಿಕರಂತೆ ನಟಿಸಿ ಕೆಲವರೊಂದಿಗೆ ಕೇÒತ್ರಗಳಿಗೆ ಮನೆಯ ಪೂಜಾ ಕಾರ್ಯಕ್ರಮಗಳಿಗೆ ಗುಟ್ಟಿನಲ್ಲಿ ತೆರಳುವರು. ಪೂಜೆಯ ಗಂಧ, ಕುಂಕುಮ ಪ್ರಸಾದವನ್ನು ಸೀÌಕರಿಸಿ ಹಣೆಗೆ ಹಾಕದೆ ಕದ್ದುಮುಚ್ಚಿ ಪ್ರಸಾದವನ್ನು ಜೇಬಿಗಿಳಿಸುವರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಫೂಟೊಗಳನ್ನು ಪತ್ರಿಕೆಗೆ ಕಳುಹಿಸಬಾರದೆಂಬುದಾಗಿ ಬೆಂಬಲಿಗರಲ್ಲಿ ಗುಪ್ತವಾಗಿ ಸೂಚಿಸುವರು.

ಒಟ್ಟಿನಲ್ಲಿ ಚುನಾವಣೆ ಕಳೆಯುವ ತನಕ Êಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಯಾವ ವೇಷ ಬೇಕಾದರೂ ಹಾಕಬಹುದು.ಆದರೆ ಗೆದ್ದ ಬಳಿಕ ಇವರು ನಮ್ಮಿಂದ ಬಲುದೂರ ಅಂತರ ಕಾಯ್ದುಕೊಳ್ಳುವರು.ಅಗತ್ಯದ ವಿಚಾರಗಳಿಗೆ ಇವರಲ್ಲಿ ಮಾತನಾಡಲೂ ಸಿಗರೆಂಬ ಅರೋಪ ಹೆಚ್ಚಿನ ಮತದಾರದು.ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ಝಳಕ್ಕೆ ಚುನಾವಣೆಯ ರಂಗು ಕಾವೇರುತ್ತಿದೆ.ಎ.23 ಕಳೆದರೆ ಸಾಕಿತ್ತೆನ್ನುವ ಅಭಿಪ್ರಾಯ ರಾಜಕೀಯ ನಾಯಕರದು ಮತ್ತು ಪಕ್ಷದ ಕಾರ್ಯಕರ್ತರದು.

Advertisement
Advertisement

Udayavani is now on Telegram. Click here to join our channel and stay updated with the latest news.

Next