Advertisement
ಅಶ್ವಿನಿ ಅಶೋಕನ್
Related Articles
Advertisement
ದೇಬ್ ಜಾನಿ ಘೋಷ್
ಇವರು ವ್ಯಾವಹಾರಿಕ ಕ್ಷೇತ್ರದ ಸಮರ್ಥ ನಾಯಕಿ. ಇಂಟೆಲ್ ಸೇಲ್ಸ್ ಹಾಗೂ ಮಾರಾಟ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿರುವ ಇವರು ಸುಮಾರು 17 ವರ್ಷಗಳ ಕಾಲ ದಕ್ಷಿಣ ಏಷಿಯಾದ ಕಾರ್ಯಾಚರಣೆಯ ಮುಖ್ಯಸ್ಥರಾಗಿದ್ದರು. ಕಾರ್ಫೋರೇಟ್ ಸಂಸ್ಥೆಯ ಹಂತಗಳನ್ನು ಏರುವ ಹಾಗೂ ಸ್ವಂತ ಉದ್ಯಮ ಸ್ಥಾಪಿಸುವ ಯಾವುದೇ ಕನಸನ್ನಾದರೂ ಮುಕ್ತವಾಗಿ ಕಾಣಿ ಮತ್ತು ನನಸು ಮಾಡಿಕೊಳ್ಳುವತ್ತ ಪ್ರಯತ್ನಿಸಿ. ಇದು ದೇಬ್ ಜಾನಿ ಭಾರತೀಯ ಮಹಿಳೆಯರಿಗೆ ಉಪದೇಶಿಸುವ ಮಂತ್ರ. ಮಹಿಳೆಯರ ಸರ್ವಾಂಗಿಣ ಅಭಿವೃದ್ಧಿಗೆ ಇಂಟೆಲ್ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಂಡರು. ಯಾವುದೇ ಉದ್ಯಮ ಬೆಳೆಯಬೇಕೆಂದರೆ ಅಲ್ಲಿ ಲಿಂಗಬೇಧವಿರಬಾರದು ಎನ್ನುತ್ತಾರೆ. ಈ ಎಲ್ಲಾ ಕಾರಣದಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ.
ಗೀತಾಕಣ್ಣನ್
ಭಾರತದಲ್ಲಿರುವ ಮಹಿಳಾ ಉದ್ಯಮಿಗಳಿಗೆ ಪ್ರೇರಣೆಯಾಗಬಲ್ಲ ಪರಿಸರವನ್ನು ನಿರ್ಮಾಣ ಮಾಡಲು ‘ದಿ ಅನಿತಾ ಬೊರ್ಗ್ ಇನ್‍ಸ್ಟಿಟ್ಯೂಟ್’ ಶ್ರಮಿಸುತ್ತಿದೆ. ಇದಕ್ಕಾಗಿ ಸರ್ಕಾರಿ ಸಂಸ್ಥೆಗಳಾದ, ‘ನ್ಯಾಶನಲ್ ಸೈನ್ಸ್ & ಟೆಕ್ನಾಲಜಿ ಎಂಟರ್ ಪ್ರಿನರ್ ಶಿಪ್ ಡೆವಲಪ್‍ಮೆಂಟ್ ಬೋರ್ಡ್’, `ಗವರ್ನ್‍ಮೆಂಟ್ ಆಫ್ ಇಂಡಿಯಾ & ದಿ ಇಂಡೋ-ಯುಎಸ್ ಸೈನ್ಸ್ & ಟೆಕ್ನಾಲಜಿ ಫೋರಮ್’ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ. `ವುಮೆನ್ ಎಂಟರ್ ಪ್ರಿನರ್ ಕ್ವೆಸ್ಟ್ ಪ್ರೋಗ್ರಾಮ್’ ಮೂಲಕ ಅಂತಹ ಪರಿಸರ ನಿರ್ಮಾಣಕ್ಕೆ `ಎಬಿಐ’ ಯೋಜನೆ ರೂಪಿಸಿದೆ. ಭಾರತದ ಶಕ್ತಿಯುತ ಆರ್ಥಿಕತೆಗೆ ಪೂರಕವಾಗುವಂತೆ ತಳಮಟ್ಟದಿಂದ ಅವರನ್ನು ಪ್ರೋತ್ಸಾಹಿಸುವುದು ಅತ್ಯಂತ ಕಷ್ಟಕರ. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಮುನ್ನಡೆಸುತ್ತಿರುವ ಉದ್ಯಮಗಳ ಸಂಖ್ಯೆ ಹೆಚ್ಚಾಗಿದೆ, ಇದು ನಿಜಕ್ಕೂ ಉತ್ತಮ ಬೆಳವಣಿಗೆ” ಎಂದು ಅನಿತಾ ಬೊರ್ಗ್ ಇನ್‍ಸ್ಟಿಟ್ಯೂಟ್‍ನ ಇಂಡಿಯಾ ಎಂಡಿ ಗೀತಾ ಕಣ್ಣನ್ ಹೇಳುತ್ತಾರೆ. ಈ ಮೂಲಕ ಪ್ರತಿವರ್ಷ ವೂ ಹೊಸ ಮಹಿಳಾ ಉದ್ಯಮಿಗಳನ್ನು ತಂತ್ರಜ್ಞಾನ ಕ್ಷೇತ್ರಕ್ಕೆ ಪರಿಚಯಿಸುತ್ತಿದ್ದಾರೆ.
ದೀಪಾ ಮಾಧವನ್
ದೀಪಾ ಮಾಧವನ್ ಪೇ ಪಾಲ್ ಸಂಸ್ಥೆಯನಲ್ಲಿ ನಿರ್ದೇಶಕಿಯಾಗಿದ್ದಾರೆ. ಇವರು ಮೂಲತಃ ಚೆನ್ನೈನವರು. ಪೇ ಪಾಲ್ ನಲ್ಲಿ ಮಹಿಳೆಯರನ್ನು ಮರಳಿ ಉದ್ಯೋಗದತ್ತ ಕರೆತರುವ ರೀಚಾರ್ಜ್ ಕಾರ್ಯಕ್ರಮ ಹಿಂದೆ ಇವರದ್ದೇ ಶ್ರಮವಿದೆ. ಈ ಮೊದಲು ಡೆಲಾಯಿಟಿಯಲ್ಲಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಇವರು ತಮ್ಮ ಮಕ್ಕಳಿಗೆ ಸಮಯ ನೀಡಲಾಗುತ್ತಿಲ್ಲ ಎಂಬ ಕಾರಣ ನೀಡಿ ಉದ್ಯೋಗ ತೊರೆದಿದ್ದರು. ಆದರೆ ಮತ್ತೆ ಉದ್ಯೋಗದತ್ತ ಹೊರಳಿದಾಗ, ತನ್ನ ಮಾದರಿಯಲ್ಲೇ ಅನೇಕ ಮಹಿಳೆಯರು ಉದ್ಯೋಗ ಅರುಸುವವರಿರುತ್ತಾರೆ ಎಂದು ಅರಿತು ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಿದರು. ಪೇ ಪಾಲ್ ಮೂಲಕ ‘ಗರ್ಲ್ಸ್ ಇನ್ ಟೆಕ್’ಮತ್ತು ‘ಯೂನಿಟಿ’ಹೆಸರಿನ ಕಾರ್ಯಕ್ರಮಗಳ ಮೂಲಕ ಮಹಿಳಾ ಜಾಲವನ್ನು ಕಟ್ಟಿದರು. ನಾಯಕತ್ವದ ಕೌಶಲ್ಯಗಳು ಬೆಳೆಸಿಕೊಳ್ಳಲು ಅಗತ್ಯವಾದ ನೆರವನ್ನು ಪೂರೈಸಿದರು.