Advertisement

ಇನ್ಮುಂದೆ ಯಾರಿಗೂ ವಿಶ್ರಾಂತಿ ಇಲ್ಲ, ಅತ್ಯುತ್ತಮ ತಂಡವನ್ನೇ ಆಡಿಸುತ್ತೇವೆ: ಕೋಚ್ ದ್ರಾವಿಡ್

11:11 AM Sep 04, 2022 | Team Udayavani |

ದುಬೈ: ಟಿ20 ವಿಶ್ವಕಪ್ ಕೂಟಕ್ಕೆ ಕೆಲವೇ ವಾರಗಳು ಬಾಕಿ ಇರುವಂತೆ, ಇನ್ನು ಮುಂದೆ ತಂಡದಲ್ಲಿ ವರ್ಕ್ ಲೋಡ್ ಮ್ಯಾನೇಜ್ ಮೆಂಟ್ ಇರುವುದಿಲ್ಲ. ನಮ್ಮ ಅತ್ಯುತ್ತಮ ತಂಡವನ್ನೇ ಪ್ರತಿ ಪಂದ್ಯದಲ್ಲೂ ಆಡಿಸುತ್ತೇವೆ ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

Advertisement

ಏಷ್ಯಾ ಕಪ್ ಸೂಪರ್ 4 ಹಂತದ ಪಾಕಿಸ್ಥಾನ ವಿರುದ್ಧದ ಪಂದ್ಯದ ಮುನ್ನಾದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ಎದುರಾಳಿ ತಂಡ ಯಾವುದೇ ಇದ್ದರೂ ನಮ್ಮ ಅತ್ಯುತ್ತಮ ತಂಡವನ್ನೇ ಆಡಿಸುತ್ತೇವೆ ಎಂದರು.

“ಯಾವುದೇ ಗಾಯದ ಸಮಸ್ಯೆ, ನಿಗಲ್ ಹೊರತುಪಡಿಸಿದರೆ, ಉಳಿದಂತೆ ನಾವು ಉತ್ತಮ ತಂಡವನ್ನೇ ಆಡಿಸುತ್ತೇವೆ, ಟಿ20 ವಿಶ್ವಕಪ್ ಗೆ ಕೆಲವೇ ದಿನಗಳು ಬಾಕಿ ಇರುವ ಕಾರಣ ಪ್ರಮುಖ ಆಟಗಾರರು ಹೆಚ್ಚು ಪಂದ್ಯಗಳನ್ನ ಆಡಬೇಕಿದೆ” ಎಂದಿದ್ದಾರೆ.

ಏಷ್ಯಾ ಕಪ್ ನಲ್ಲಿ ನಮ್ಮ ಮುಂದಿನ ನಾಲ್ಕು ಪಂದ್ಯಗಳಲ್ಲಿ ಯಾರೆಲ್ಲಾ ಆಯ್ಕೆಗೆ ಲಭ್ಯರಿದ್ದಾರೆಂದು ನೋಡಿಕೊಂಡು ಉತ್ತಮ 11 ಮಂದಿಯನ್ನು ಆಡಿಸುತ್ತೇವೆ ಎಂದು ದ್ರಾವಿಡ್ ಹೇಳಿದರು.

ಇದನ್ನೂ ಓದಿ:ಗಂಗಾವತಿ : ಪ್ರಾಣಿಗಳನ್ನು ಹಿಂಸಿಸದಂತೆ ಬೆಳ್ಳಂಬೆಳಗ್ಗೆ ಬೀದಿಗಿಳಿದ ಪ್ರಾಣಿಪ್ರಿಯರು

Advertisement

ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ನಡುವಿನ ಆಯ್ಕೆಯ ಬಗ್ಗೆ ಮಾತನಾಡಿದ ಕೋಚ್, “ ಪಾಕಿಸ್ಥಾನ ವಿರುದ್ಧದ ಮೊದಲ ಪಂದ್ಯದಲ್ಲಿ ದಿನೇಶ್ ಉತ್ತಮ ಆಯ್ಕೆ ಎಂದು ನಮಗನಿಸಿತು. ಇಬ್ಬರಲ್ಲಿ ಒಬ್ಬರನ್ನು ಕೈಬಿಡುವುದು ಕಷ್ಟದ ಕೆಲಸ. ಒಂದು ವೇಳೆ ನಾವು ಪಂತ್ ರನ್ನು ಆಡಿಸಿ, ಕಾರ್ತಿಕ್ ರನ್ನು ಕೈಬಿಟ್ಟಿದ್ದರೆ ಅದಕ್ಕೂ ಜನರು ಟೀಕೆ ಮಾಡುತ್ತಿದ್ದರು. ನಾವು ಅದರ ಮೇಲೆ ತಂಡ ಕಟ್ಟಲು ಸಾಧ್ಯವಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next