Advertisement
ಮನೆಯೇ ಚಿಕ್ಕದು. ಅಂದ ಮೇಲೆ ಅಂಗಳ ಹೇಗೆ ಇರಲು ಸಾಧ್ಯ? ವಾಸ್ತವದಲ್ಲಿ ವಾಸ್ತು ಶಿಸ್ತು ಅಂಗಳವನ್ನು ಬಯಸುತ್ತದೆ. ಅಂಗಳವು ಶನಿರಾಯರನ್ನು ಸಾಂಕೇತಿಸಿ ಶನೈಶ್ಚರ ಸಿದ್ಧಿಗೆ ಕಾರಣವಾದರೆ, ಅಂಗಳದ ಹೂಗಿಡಗಳು, ಲಾನ್‌ಗಳು, ಖಾಲಿ ಪ್ರದೇಶದ ಸೊಗಸುಗಳು ಬುಧ ಹಾಗೂ ಶುಕ್ರಗ್ರಹಗಳ ಮೂಲಕ ವಾದ ಸಂಪನ್ನತೆಯನ್ನು ಸಂಕೇತಿಸುತ್ತವೆ. ಈ ರೀತಿಯ ಅಂಗಳವು ಮನೆಯ ಪೂರ್ವ, ಉತ್ತರ/ ಈಶಾನ್ಯಗಳನ್ನು ಸಮಾವೇಶಗೊಳಿಸಿಕೊಳ್ಳಬೇಕು.
Related Articles
Advertisement
ಆನಂದಮಯನಾದ ಸೂರ್ಯನು ಸೂರ್ಯೋದಯದ ಸಮಯದಲ್ಲಿ ಧನ್ವಂತರಿ ಸ್ವರೂಪಿಯಾಗಿ ಔಷಧಮಯ ಅಂಗ ವಿಶೇಷಗಳನ್ನು ಪಡೆದಂತಿರುತ್ತಾನೆ. ಜೊತೆಗೆ ಅಶ್ವಿನೀ ದೇವತೆಗಳ ಸ್ವರೂಪವೂ ಲಭಿಸಿ ಅವನಿಂದ ಶುಶ್ರೂಷೆಗೆ ಆಸ್ವದವಿರುತ್ತದೆ. ನರರು, ಉರಗಗಳು, ಪಶು, ಪಕ್ಷಿ, ಅಷ್ಟೇ ಅಲ್ಲ, ಸೂಕ್ಷ್ಮ ಅಣುಗಳೂ ಕೂಡ ತಮ್ಮ ಬಲವನ್ನು ಧಂಡಿಯಾಗಿ ಪಡೆದು ಬೆಳೆದು ಸೊಗಸನ್ನುಕ್ಕಿಸಲು ಅವಕಾಶ ಹೊಂದುತ್ತವೆ.
ಸಾಯಂಕಾಲದ ಹೊತ್ತೂ ಅಂಗಳವು ಬೆಳಗಿನ, ಮಧ್ಯಾಹ್ನದ, ಸಾಯಂಕಾಲಕ್ಕೆ ಪೂರ್ವದ ಸೂರ್ಯನ ಗತಿಯ ಶಕ್ತಿ ಶಾಖವನ್ನು ಪೂರ್ವದತ್ತ ಕಟುವಾಗಿ ತ್ರಾಸದಾಯಕವಾಗದಂತೆ ಪಸರಿಸುತ್ತ ಇರಲು ಸಫಲವಾಗುತ್ತದೆ. ಅಂಗಳದಲ್ಲಿ ಹೂಗಿಡ, ಸಣ್ಣ ಪ್ರಮಾಣದ ತರಕಾರಿ, ತುಳಸಿ, ಔಷಧಿಯ ಸಸ್ಯ ಇತ್ಯಾದಿ ತರಹೇವಾರಿ ಫಸಲುಗಳನ್ನು ಪಡೆಯಲು ತೊಡಗಿಕೊಳ್ಳಬಹುದು. ದೈಹಿಕ ದಾಢತೆಗೆ, ಈ ಪ್ರಕ್ರಿಯೆಯಲ್ಲಿನ ಓಡಾಟಗಳಿಂದ, ನೀರು ಹೊಯ್ಯಲು ಬೇಕಾದ ಸಮಯದ ಓಡಾಟಗಳಿಂದ ಪಡೆಯಬಹುದಾಗಿದೆ.
ವ್ಯಾಯಮಕ್ಕೆ ಸಮವಾದದ್ದು ಇಂಥ, ಈ ಓಡಾಟಗಳು. ಕುಳಿತು ಓದುವ ಪರಿಪಾಠಗಳೂ ಇಲ್ಲಿ ಉತ್ತಮವೇ. ಹಾರುವ, ಓಡುವ, ಎಡತಾಕುವ ಪುಟ್ಟ ಪಕ್ಷಿಗಳ ಕಲರವ ನಿಮ್ಮ ಮನೆಕ್ಕೆ ಒಂದು ವಿಧವಾದ ಶಾಂತಿಯನ್ನು ದಯಪಾಲಿಸುತ್ತದೆ. ಬೆಳಗಿನ ಬಿಸಲನ್ನೂ ಗಮನಿಸಿ. ಇಳಿ ಹೊತ್ತಿನ ಸೂರ್ಯ ಮುಳುಗುವ ಸಂದರ್ಭದ (ನಾಲ್ಕು ಐದು ಘಂಟೆಯ ಹೊತ್ತಿಗಿನ ಬಿಸಿಲು) ಬಿಸಿಲೂ ಗಮನಿಸಿ. ಈ ಬಿಸಿಲುಗಳು ಸೂರ್ಯ ದೇವನ ಕೊಡುಗೆಯಾದರೂ ಬೆಳಗಿನ ಬಿಸಿಲಿನ ಅನುಭವ ದಿವ್ಯ.
ಅಂತೂ ಅಂಗಳದ ಸೌಭಾಗ್ಯವು ಎಳೆ ಬಿಸಿಲಿನ ಛಾಯೆಯೊಂದಿಗೆ, ಅಲ್ಲಿನ ಪಕ್ಷಿ, ಚಿಟ್ಟೆ ಪತಂಗಗಳ ಓಡಾಟದೊಂದಿಗೆ, ಹೂ ಹಣ್ಣು ಬೆಳೆಸಿದ, ಗಿಡಬಳ್ಳಿ ಬೆಳೆದು ಪಸರಿಸಿದ ಹಸಿರಿನ ಹಿನ್ನೆಲೆಯಲ್ಲಿ ಮನಸ್ಸಿನ ಜಡತ್ವವನ್ನು ನಿವಾರಿಸುವ, ಜೊತೆಗೆ ಒಂದು ತೆರನಾದ ಮಾನಸಿಕ ಸ್ತಿಮಿತತ್ವಕ್ಕೂ ಉಲ್ಲಾಸ ಮೂಡಿಸುವ ಸಂಜೀವಿನಿಯಂತೆ ಅರಳಿಕೊಳ್ಳುತ್ತದೆ. ಮುದುಡುವ ಜಾಯಮಾನ ಅಲ್ಲಿರಲಾರದು. ಅರಳುವುದು ಸಂವರ್ಧನೆಗೆ ಯಾವಾಗಲೂ ಅಪೇಕ್ಷಣೀಯ ಅಂಶವಾಗಿದೆ. ಭಾರತೀಯ ವಾಸ್ತು ಶಾಸ್ತ್ರ ಈ ಹಿನ್ನೆಲೆಯಲ್ಲಿ ಅಂಗಳವನ್ನು ಪ್ರಧಾನವಾಗಿಸಿದೆ.
ಅನಂತಶಾಸ್ತ್ರಿ, ಮೊ: 8147824707