Advertisement

ಟ್ರೋಲಿಗರ ವಿರುದ್ಧ ಗುಡುಗಿದ ಊರ್ಮಿಳಾ: ಎಲ್ಲದಕ್ಕೂ ಒಂದು ಲಿಮಿಟ್ ಇರುತ್ತದೆ ಎಂದ ನಟಿ !

07:19 PM Dec 20, 2020 | Adarsha |

ನವದೆಹಲಿ: ರಾಜಕಾರಣಿ ಹಾಗೂ ನಟಿ  ಊರ್ಮಿಳಾ ಮಾತೋಂಡ್ಕರ್ , ತಮ್ಮ ಪತಿಯನ್ನು ಪಾಕಿಸ್ಥಾನಿ ಹಾಗೂ ಭಯೋತ್ಪಾದಕ ಎಂದು ಎಗ್ಗಿಲ್ಲದೆ ಟ್ರೋಲ್ ಮಾಡಿದವರ ವಿರುದ್ಧ ಗರಂ ಆಗಿದ್ದಾರೆ. ಈ ರೀತಿ ಮಾತನಾಡುವುದಕ್ಕೂ ಒಂದು ಲಿಮಿಟ್ ಇರುತ್ತದೆ ಎಂದು ಗುಡುಗಿದ್ದಾರೆ.

Advertisement

2016 ಮಾರ್ಚ್ ನಲ್ಲಿ ಊರ್ಮಿಳಾ, ಕಾಶ್ಮೀರ ಮೂಲದ ಮೋಹ್ಸಿನ್ ಖಾನ್ ಎಂಬುವವರನ್ನು ವಿವಾದವಾಗಿದ್ದರು. ಕೆಲವೇ  ಕೆಲವು ಜನರ ಸಮ್ಮುಖದಲ್ಲಿ ಇವರ ವಿವಾಹ ಮಹೋತ್ಸವ ನಡೆದಿತ್ತು. ಇದಾದ ಬಳಿಕ ಹಲವಾರು ಟ್ರೋಲಿಗರು ಇವರ ಕುರಿತಾಗಿ ಟ್ರೋಲ್ ಗಳನ್ನು ಮಾಡಿದ್ದರು ಎಂದು ವರದಿಯಾಗಿದೆ.

ನನ್ನ ಪತಿ ಕೇವಲ ಮುಸ್ಲಿಂ ಅಲ್ಲ ಬದಲಾಗಿ ಕಾಶ್ಮೀರಿ ಮುಸ್ಲಿಂ. ನಾವಿಬ್ಬರೂ ನಮ್ಮ ಧರ್ಮವನ್ನು ಪಾಲಿಸುತ್ತೇವೆ. ಹಾಗಾಗಿ ಹಲವರು ನನ್ನ ಕುರಿತಾಗಿ ಟ್ರೋಲ್ ಮಾಡುತ್ತಿದ್ದಾರೆ. ಅಷ್ಟೆ ಅಲ್ಲದೆ ನನ್ನ ಪತಿ ಹಾಗೂ ಕುಟುಂಬವನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ. ಇದು ನಿಜಕ್ಕೂ ಸಹಿಸಲು ಅಸಾಧ್ಯವಾದದ್ದು ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಈ ನಡುವೆ ತಮ್ಮ ವಿಕಿಪೀಡಿಯಾ ಪೇಜ್ ನಲ್ಲಿರುವ ಮಾಹಿತಿಗಳನ್ನು ತಿರುಚಿರುವ ಬಗ್ಗೆ ಮಾತನಾಡಿದ್ದು, ನನ್ನ ತಂದೆ-ತಾಯಿ ಹೆಸರನ್ನು ಬದಲಿಸಿದ್ದಾರೆ. ನನ್ನ ತಂದೆ ತಾಯಿ ನಿಜವಾದ ಹೆಸರು ಶ್ರೀಕಾಂತ್ ಮಾತೋಂಡ್ಕರ್, ಹಾಗೂ ತಾಯಿ ಸುನೀತಾ ಮಾತೋಂಡ್ಕರ್ ಎಂದಿದ್ದಾರೆ.

ಇದನ್ನೂ ಓದಿ:2ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜದಿಂದ ರಕ್ತದಾಸೋಹ ಚಳವಳಿ: ಸಂಗಮೇಶ

Advertisement

ಬಾಲ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಊರ್ಮಿಳಾ, ನರಸಿಂಹ ಸಿನಿಮಾದ ಮೂಲಕ ಗುರುತಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next