ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ನಡುವೆಯೇ ಸುಪ್ರೀಂಕೋರ್ಟ್ ಗುರುವಾರ (ಮಾರ್ಚ್ 21), ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ತಡೆ ನೀಡಲು ನಿರಾಕರಿಸಿದೆ. ಅಲ್ಲದೇ ಈ ಹಂತದಲ್ಲಿ ತಡೆ ನೀಡಿದರೆ ಅದು ಅವ್ಯವಸ್ಥೆಗೆ ಕಾರಣವಾಗಲಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಇದನ್ನೈ ಓದಿ;Loksabha Election; ಕಾಂಗ್ರೆಸ್ ಸೇರುವುದಿಲ್ಲ, ಬಿಜೆಪಿ ಶುದ್ಧ ಮಾಡುತ್ತೇನೆ: ಸದಾನಂದ ಗೌಡ
ಕೇಂದ್ರ ಚುನಾವಣಾ ಆಯೋಗಕ್ಕೆ ನೂತನವಾಗಿ ಆಯ್ಕೆಯಾದ ಆಯುಕ್ತರ ಮೇಲೆ ಯಾವುದೇ ದೋಷಾರೋಪಗಳಿಲ್ಲ ಎಂಬುದನ್ನು ವಿಚಾರಣೆ ವೇಳೆ ಗಮನಿಸಿರುವುದಾಗಿ ಸುಪ್ರೀಂ ಪೀಠ ಹೇಳಿದೆ.
ಹೊಸ ಕಾಯ್ದೆಯಂತೆ ಆಯ್ಕೆ ಸಮಿತಿಯಲ್ಲಿ ಬದಲಾವಣೆ ಮಾಡಿದ ನಂತರ ಜ್ಞಾನೇಶ್ ಕುಮಾರ್ ಮತ್ತು ಸುಖ ಬೀರ್ ಸಿಂಗ್ ಸಂಧು ಅವರನ್ನು ಆಯುಕ್ತರನ್ನಾಗಿ ಆಯ್ಕೆ ಮಾಡಲಾಗಿತ್ತು.
ನೇಮಕಗೊಂಡ ಆಯುಕ್ತರಗಳ ವಿರುದ್ಶ ಯಾವುದೇ ಆರೋಪಗಳಿಲ್ಲ. ಚುನಾವಣೆಯೂ ಕೂಡಾ ಸನ್ನಿಹಿತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರಿದೂಗಿಸಿಕೊಂಡು ಹೋಗುವುದು ತುಂಬಾ ಮುಖ್ಯವಾದ ವಿಚಾರವಾಗಿದೆ ಎಂದು ತಿಳಿಸಿದೆ.
ಇತ್ತೀಚೆಗಷ್ಟೇ ನೂತನವಾಗಿ ರಚನೆಗೊಂಡಿದ್ದ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಲ್ಲಿ ಸಿಜೆಐ ಅವರನ್ನು ಕೈಬಿಡಲಾಗಿತ್ತು. ಸಮಿತಿಯಲ್ಲಿ ಪ್ರಧಾನಿ, ಕೇಂದ್ರ ಸಚಿವರು ಮತ್ತು ವಿಪಕ್ಷ ನಾಯಕರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿತ್ತು.