Advertisement

ತಪ್ಪಿದ್ದವು ಮೂರು “ಟೈಟಾನಿಕ್‌” ಅನಾಹುತ

10:59 PM Jun 26, 2023 | Team Udayavani |

ವಾಷಿಂಗ್ಟನ್‌: ಟೈಟಾನಿಕ್‌ ಹಡಗಿನ ಅವಶೇಷಗಳನ್ನು ನೋಡಲು ಹೋದಂಥ ಸಬ್‌ಮರ್ಸಿಬಿಲ್‌ (ಜಲಾಂತರ್ಗಾಮಿ ಮಾದರಿ) ಸಮುದ್ರದ ಆಳದಲ್ಲಿ ಸ್ಫೋಟಗೊಂಡು ಐವರು ಅಸುನೀಗಿದ್ದರು. ಇಂಥ ಘಟನೆ ನಡೆಯುವುದು ಹಿಂದಿನ ಮೂರು ಸಂದರ್ಭಗಳಲ್ಲಿ ನಡೆಯುವುದು ತಪ್ಪಿತ್ತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

Advertisement

ಅಂಥವರ ಪೈಕಿ ಒಬ್ಬರು ಟೈಟಾನಿಕ್‌ ಸಿನಿಮಾದ ನಿರ್ದೇಶಕ ಜೇಮ್ಸ್‌ ಕ್ಯಾಮ್ರಾನ್‌! 1995ರಲ್ಲಿ ಜೇಮ್ಸ್‌ ತೆರಳಿದ್ದ ನೌಕೆಯು ಸಮುದ್ರ ತಳದಲ್ಲಿ ಮರಳಿನ ಅಲೆಗಳಿಗೆ ಸಿಕ್ಕಿತ್ತು. ಇದರಿಂದನೌಕೆಯ ಬ್ಯಾಟರಿಗಳು ನಿಷ್ಕ್ರಿಯಗೊಂಡು, ನೌಕೆ ತಳ ಸೇರಲಾರಂಭಿಸಿತ್ತು. ಬಳಿಕ ಪೈಲಟ್‌ನ ಸಮಯಪ್ರಜ್ಞೆಯಿಂದ ಅದೃಷ್ಟ ವಶಾತ್‌ ನೌಕೆ ಸಾಗರದ ಮೇಲ್ಭಾಗಕ್ಕೆ ತೇಲಿತು ಎಂದು ಸ್ವತಃ ಜೇಮ್ಸ್‌ ಅವರ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. 1991ರಲ್ಲಿ ಕೆನಡಾ ಮೂಲದ ವೈದ್ಯರು ತೆರಳಿದ್ದ ನೌಕೆ, 2000 ದಲ್ಲಿ ಪತ್ರಕರ್ತರೊಬ್ಬರು ತೆರಳಿದ್ದ ನೌಕೆ ಸಮುದ್ರ ತಳದಲ್ಲಿ ಸಿಲುಕಿದ್ದರೂ ಅಪಾಯದಿಂದ ಪಾರಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next