Advertisement

ಪರಮೇಶ್ವರ್‌ ಜೊತೆ ಕಿತ್ತಾಟ ಬಿಡಿ, ಮಾತೇ ಆಡಿಲ್ಲ:ಸಿದ್ದರಾಮಯ್ಯ ಕಿಡಿ 

12:35 PM Dec 27, 2018 | |

ಬೆಂಗಳೂರು: ಗೃಹ ಖಾತೆಯ ವಿಚಾರಕ್ಕೆ ಸಂಬಂಧಿಸಿ  ಡಾ.ಜಿ.ಪರಮೇಶ್ವರ್‌ ಅವರೊಂದಿಗೆ ಯಾವುದೇ ಚರ್ಚೆ, ವಾಗ್ವಾದ ನಡೆದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರ ಬಳಿ ಹೇಳಿಕೊಂಡಿದ್ದು ಮಾತ್ರವಲ್ಲದೆ ಸರಣಿ ಟ್ವೀಟ್‌ಗಳ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. 

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ಯಾವುದೇ ಸಮಸ್ಯೆಗಳಿಲ್ಲ. ಗೃಹ ಖಾತೆಗೂ ಇಲ್ಲ ಯಾವುದಕ್ಕೂ ಕಿತ್ತಾಟ ಇಲ್ಲ ರಾಹುಲ್‌ ಅವರ ಅನುಮತಿ ಪಡೆಯಲು ದೆಹಲಿಗೆ ಹೋಗಿದ್ದಾರೆ. ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ ಎಂದರು.

ನನಗೂ ಪರಮೇಶ್ವರ್‌ ಅವರಿಗೂ ಮಾತುಕತೆನೇ ನಡೆದಿಲ್ಲ.ಇನ್ನು ವಾಗ್ವಾದ ಎಲ್ಲಿಂದ ಎಂದು ಪ್ರಶ್ನಿಸಿದರು. 

ಜಾರಕಿಹೊಳಿ ಮೂಲ ಕಾಂಗ್ರೆಸಿಗ ಅವರು ಎಲ್ಲಿಗೂ ಹೋಗಲ್ಲ, ಸ್ವಲ್ಪ ಬೇಸರ ಆಗಿದೆ. ಯಾರಿಗೂ ಸಿಕ್ಕದೆ ಇರಬಹುದು, ಅವರನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ ಎಂದರು. 

ಸಿದ್ದರಾಮಯ್ಯ ಅವರು ಮಾಡಿರುವ ಸರಣಿ ಟ್ವೀಟ್‌ಗಳು 

Advertisement

ರಾಜ್ಯದಲ್ಲಿರುವ ನಿಜವಾದ ಅತೃಪ್ತ ಆತ್ಮಗಳೆಂದರೆ ಅಧಿಕಾರವಿಲ್ಲದೆ ಹತಾಶರಾಗಿರುವ ಯಡಿಯೂರಪ್ಪ, ಉಮೇಶ್ ಕತ್ತಿ, ಈಶ್ವರಪ್ಪ ಮೊದಲಾದವರು. ಈ ಅತೃಪ್ತಿ, ಹತಾಶೆಗಳಿಂದಲೇ ಇವರೆಲ್ಲ ಇತರರ ವಿರುದ್ಧ ಆರೋಪ ಮಾಡುತ್ತಿದ್ದಾರೆ.

ಶಾಸಕ ಉಮೇಶ್ ಕತ್ತಿಯವರ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ. ಅವರ ಅಧ್ಯಕ್ಷರಾದ ಯಡಿಯೂರಪ್ಪನವರೇ ಕತ್ತಿಯವರಿಗೆ ಬುದ್ದಿ ಹೇಳಿದ್ದಾರೆ. ಸರ್ಕಾರ ಪತನದ ಕನಸು ಕೈ ಬಿಟ್ಟು, ಮೊದಲು ಅವರೊಳಗಿನ ಭಿನ್ನಾಭಿಪ್ರಾಯವನ್ನು ಸರಿಮಾಡಿಕೊಳ್ಳಲಿ.

ರಮೇಶ್ ಜಾರಕಿಹೊಳಿ ಮಾತ್ರವಲ್ಲ ಅವರ ಇಡೀ ಕುಟುಂಬ ಹಲವಾರು ವರ್ಷಗಳಿಂದ ನನಗೆ ಗೊತ್ತು. ರಮೇಶ್ ಅಪ್ಪಟ ಕಾಂಗ್ರೆಸಿಗ, ಅವರು ಪಕ್ಷ ಬಿಟ್ಟುಹೋಗುವುದಿಲ್ಲ. ಬಿಜೆಪಿ ಪ್ರಯತ್ನ ಯಶಸ್ಸಾಗುವುದಿಲ್ಲ.

ನಾನು ಮುಖ್ಯಮಂತ್ರಿಯಾಗಿದ್ದ 5 ವರ್ಷಗಳ ಕಾಲ ನನ್ನ ಮತ್ತು ಡಾ.ಪರಮೇಶ್ವರ್ ಸಂಬಂಧ ಕೆಡಿಸುವ ಪ್ರಯತ್ನವನ್ನು ವಿರೋಧ ಪಕ್ಷಗಳ ನಾಯಕರು ಮಾಡುತ್ತಲೇ ಇದ್ದರು. ಅದು ಈಗಲೂ ಮುಂದುವರಿದಿದೆ. ಅಂತಹ ಯಾವ ಪ್ರಯತ್ನವೂ ಯಶಸ್ವಿಯಾಗುವುದಿಲ್ಲ. ಇಂತಹ ಸುದ್ದಿಗಳನ್ನು ಕೇಳಿ ನಾವಿಬ್ಬರೂ ನಕ್ಕು ಸುಮ್ಮನಾಗುತ್ತೇವೆ.

ಸಚಿವ ಖಾತೆ ಮರುಹಂಚಿಕೆ ಬಗ್ಗೆ ನಿನ್ನೆ ನಡೆದ ಸಭೆಯಲ್ಲಿ ಎಲ್ಲ ನಾಯಕರಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಕೆ.ಸಿ.ವೇಣುಗೋಪಾಲ್ ಅವರು ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರುತ್ತಾರೆ. ಅಂತಿಮ ತೀರ್ಮಾನವನ್ನು ರಾಹುಲ್ ಗಾಂಧಿ ಕೈಗೊಳ್ಳುತ್ತಾರೆ.

ಸಚಿವ ಖಾತೆ ಮರು ಹಂಚಿಕೆ ಬಗ್ಗೆ ನಿನ್ನೆಯ ಸಭೆಯಲ್ಲಿ ಚರ್ಚೆ ಸೌಹಾರ್ದತಯುತವಾಗಿಯೇ ನಡೆದಿದೆ. ಸಭೆಯಲ್ಲಿದ್ದ ನಾಯಕರೆಲ್ಲ ಹಿರಿಯರು, ಅನುಭವಿಗಳು, ಈ ರೀತಿ ಜಗಳವಾಡಲು ನಮ್ಮಲ್ಲಿ ಯಾರೂ ಮಕ್ಕಳಿಲ್ಲ. ಕಪೋಲ ಕಲ್ಪಿತ ಸುದ್ದಿಗಳನ್ನು ನಂಬಬೇಡಿ, ಹರಡಬೇಡಿ.

ಡಾ.ಜಿ.ಪರಮೇಶ್ವರ್ ಮತ್ತು ನನ್ನ ನಡುವೆ  ಭಿನ್ನಾಭಿಪ್ರಾಯವೇ ಇಲ್ಲ, ನಿನ್ನೆಯ ಸಭೆಯಲ್ಲಿ ಆ ರೀತಿಯ ಯಾವುದೇ ಚರ್ಚೆ ವಾಗ್ವಾದ ನಡೆದಿಲ್ಲ. ಇದನ್ನು ಹೇಳಿದವರು ಯಾರು? ವಿರೋಧ ಪಕ್ಷಗಳ ಕೆಲವು ನಾಯಕರು ಹತಾಶರಾಗಿ ಹರಡುತ್ತಿರುವ ಸುದ್ದಿಗಳನ್ನು ಮಾಧ್ಯಮಗಳು ವರದಿ ಮಾಡುವ ಮೊದಲು ಪರಾಮರ್ಶಿಸಿದರೆ ಒಳ್ಳೆಯದು.

Advertisement

Udayavani is now on Telegram. Click here to join our channel and stay updated with the latest news.

Next