Advertisement

ಲಾಕ್ ಡೌನ್ ವಾಪಸ್ ಪಡೆಯುವ ಅವಶ್ಯಕತೆ ಇರಲಿಲ್ಲ:  ರಾಮಲಿಂಗ ರೆಡ್ಡಿ

03:10 PM Aug 04, 2020 | keerthan |

ಬಳ್ಳಾರಿ: ವಿದೇಶದಲ್ಲಿ ಕೋವಿಡ್-19 ಸೋಂಕು ಇದ್ದಾಗ ನಮ್ಮಲ್ಲಿ ಪ್ರಕರಣಗಳು ಇರಲೇ ಇಲ್ಲಾ. ಈಗ ದೇಶ ಮತ್ತು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಲಾಕ್ ಡೌನ್ ಮಾಡುವ ಸಮಯದಲ್ಲಿ ಕೋವಿಡ್-19 ಕಂಟ್ರೋಲ್ ಇತ್ತು. ಲಾಕ್ ಡೌನ್ ಓಪನ್ ಆದಾಗ ಪ್ರಕರಣಗಳು ಹೆಚ್ಚಾದವು. ಲಾಕ್ ಡೌನ್ ವಾಪಸ್ ಪಡೆಯುವ ಅವಶ್ಯಕತೆ ಇರಲಿಲ್ಲ ಎಂದು ಮಾಜಿ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.

Advertisement

ನಗರದಲ್ಲಿ ಮಾತನಾಡಿದ ಅವರು ಲಾಕ್ ಡೌನ್ ನಲ್ಲಿ ಬಡವರಿಗೆ, ವಲಸೆ ಕಾರ್ಮಿಕರಿಗೆ ಊಟ ಸಿಗಲೇ ಇಲ್ಲಾ.  ಆಹಾರದ ಕಿಟ್ ಗಳು ಕೂಡ ಹೆಚ್ಚು ಅವರಿಗೆ ಸೇರಲಿಲ್ಲ. ಜನರು ಸಂಕಷ್ಟದಲ್ಲಿದ್ದಾಗ ಸಹಾಯ ಮಾಡುವುದು ಕರ್ತವ್ಯ. ಆದರೆ ಸರ್ಕಾರ ಇದೇ ನೆಪ ಮಾಡಿಕೊಂಡು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಟೀಕಿಸಿದರು.

ಕೋವಿಡ್ ಕುರಿತ ಭ್ರಷ್ಟಾಚಾರದ ತನಿಖೆಗೆ ನಾವು ಆಗ್ರಹಿಸಿದ್ದೇವೆ. ಇವರು ತಪ್ಪು ಮಾಡದೇ ಇದ್ದಾಗ, ತನಿಖೆಗೆ ಯಾಕೆ ಹಿಂದೇಟು ಹಾಕುತ್ತಾರೆ. ಬಿಜೆಪಿಯ ರವಿಕುಮಾರ್ ಅವರು ನಮಗೆ ಲೀಗಲ್ ನೋಟಿಸ್ ನೀಡಿದ್ದಾರೆ. ವಿರೋಧ ಪಕ್ಷಗಳು ಆರೋಪ ಮಾಡುವಾಗ, ಅದಕ್ಕೆ ಲೀಗಲ್ ನೋಟಿಸ್ ಕೊಡಲು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಯಾರು? ಹಾಗಾದರೆ ಅವರ ಬಿಜೆಪಿ ಪಕ್ಷಕ್ಕೂ ಪಾಲು ಹೋಗಿದೆಯೇ ಎಂದು ಪ್ರಶ್ನಿಸಿದರು.

ಬಿಜೆಪಿ ಹೆದರಿಸುವ ಕೆಲಸ ಮಾಡುತ್ತಿದೆ. ಅವರು ಲೀಗಲ್ ನೋಟಿಸ್ ಕೊಟ್ಟರೆ, ನಾವು ಉತ್ತರ ಕೊಡ್ತೆವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next