ಮಣಿಪಾಲ: ಗುರುವಾರ ಸಂಜೆ ಸುಮಾರು 7 ಗಂಟೆಗೆ ಪಾಕಿಸ್ಥಾನ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಭಾರತೀಯ ಸೇನೆಯ ವಾಯುದಾಳಿಯ ಸುದ್ದಿ ದೇಶಾದ್ಯಂತ ಪ್ರಸಾರವಾಗಿತ್ತು.
ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾದ ಈ ಸುದ್ದಿ ಒಂದರೆಕ್ಷಣ ಬಹುದೊಡ್ಡ ಬ್ರೇಕಿಂಗ್ ಸುದ್ದಿ ಎಂದೇ ಅನಿಸಲಾರಂಭಿಸಿತು. ಆದರೆ 10-15 ನಿಮಿಷಗಳಲ್ಲಿ ವೈಮಾನಿಕ ದಾಳಿಯ ಸುದ್ದಿಯನ್ನು ಪ್ರಸರಣದಿಂದ ತೆಗೆದು ಹಾಕಲಾಯಿತು.
ಸುಮಾರು ಅರ್ಧ ಗಂಟೆಯ ಅನಂತರ, ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಸಂಜೆಯ ವೇಳೆ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ಸೇನೆಯು ಹೇಳಿಕೆ ನೀಡಿತು. ಜತೆಗೆ ಪಿಒಕೆ ಕ್ರಾಸಿಂಗ್ ಎಲ್‌ಒಸಿಯಲ್ಲಿ ಯಾವುದೇ ಏರ್‌ಸ್ಟ್ರೈಕ್ ನಡೆದಿಲ್ಲ ಎಂದು ಸೇನೆ ಹೇಳಿದೆ.
ವಾಸ್ತವವಾಗಿ, ಈ ತಪ್ಪಿಗೆ ಕಾರಣ ಸಂಜೆ ಏಳು ಗಂಟೆಗೆ ಬಂದ ವರದಿ ಕಾರಣವಾಗಿದೆ. ಪಿಒಕೆಯಲ್ಲಿ ನೀಡಲಾದ ಸೇನೆಯ ಪಿನ್‌ಪಾಯಿಂಟ್ ಸ್ಟ್ರೈಕ್ ಅನ್ನು ಸೂಚಿಸುತ್ತದೆ. ಈ ಸೇನಾ ಕಾರ್ಯಾಚರಣೆಗಳು ಕೆಲವು ದಿನಗಳಿಂದ ನಡೆಯುತ್ತಿವೆ. ಅನೇಕ ಸ್ಥಳಗಳಲ್ಲಿ ಈ ಪಿನ್‌ಪಾಯಿಂಟ್ ಕಾರ್ಯಾಚರಣೆಯನ್ನು ಏರ್‌ಸ್ಟ್ರೈಕ್ ಎಂದು ಸುದ್ದಿಯಲ್ಲಿ ಕರೆಯಲಾಯಿತು.
Related Articles
ಸೇನೆಯು ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳನ್ನು ನಾಶಪಡಿಸಿದೆ ಎಂದು ಪಿಟಿಐ ಸುದ್ದಿ ಉಲ್ಲೇಖಿಸಿತ್ತು. ಕಳೆದ ಕೆಲವು ವಾರಗಳಿಂದ ಪಾಕಿಸ್ಥಾನ ಸೇನೆಯು ನಿಯಂತ್ರಣ ರೇಖೆಯ ಮೇಲೆ ಚುರುಕಾಗಿದೆ. ಭಾರತದ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ. ಭಾರೀ ಫಿರಂಗಿಗಳಿಂದ ಶೆಲ್ ದಾಳಿಯ ಮೂಲಕ ಭಯೋತ್ಪಾದಕರು ಒಳನುಸುಳಲು ಸಹಾಯ ಮಾಡುತ್ತಿದೆ ಎಂದು ಸುದ್ದಿಯಲ್ಲಿ ಹೇಳಲಾಗಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಅಸ್ಥಿರತೆಯನ್ನು ತರಲು ಪಾಕಿಸ್ಥಾನ ಈಗ ಹೊಸ ಮಾದರಿಯನ್ನು ಅನುಸರಿಸುತ್ತಿದೆ. ಯುವಕರಿಗೆ ಶಸ್ತ್ರಾಸ್ತ್ರಗಳನ್ನು ನೀಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ಥಾನದ ಮೇಲೆ ಹೆಚ್ಚು ಒತ್ತಡಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಗಡಿಯಲ್ಲಿರುವ ಭಾರತೀಯ ಗ್ರಾಮಸ್ಥರನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಲಾಗಿತ್ತು. ಆದರೆ ಬಳಿಕ ಈ ಸುದ್ದಿ ಸತ್ಯಕ್ಕೆ ದೂರವಾಗಿರುವುದಾಗಿ ಸೇನಾ ಮೂಲಗಳು ಹೇಳಿವೆ.