Advertisement

Viral Video; ಹೆಲ್ಮೆಟ್ ನೊಳಗೆ ಅವತಿತ್ತು ಹಾವು; ಭಾರೀ ವೈರಲ್ ಆದ ವಿಡಿಯೋ

11:43 AM Nov 30, 2023 | keerthan |

ಹೊಸದಿಲ್ಲಿ: ನೀವು ಎಲ್ಲಿಗೋ ಹೊರಟಿರುತ್ತಿರಿ, ಮನೆಯ ಮುಂದಿರುವ ಬೈಕ್ ನಲ್ಲಿ ಕುಳಿತು, ಹೆಲ್ಮೆಟ್ ಎತ್ತಿಕೊಂಡಾಗ ಅದರೊಳಗೆ ಹಾವಿದ್ದರೆ ಹೇಗಾಗಬೇಡ…? ಈ ಪರಿಸ್ಥಿತಿ ಯೂಟ್ಯೂಬರ್ ಒಬ್ಬರಿಗೆ ಆಗಿದೆ. ಇದರ ವಿಡಿಯೋ ವೈರಲ್ ಆಗಿದೆ.

Advertisement

ದೇವ್ ಶ್ರೇಷ್ಠ ಎಂಬ ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ಭಯಾನಕ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಹೆಲ್ಮೆಟ್ ಒಳಗೆ ಹಾವು ಅವಿತು ಕುಳಿತ ವಿಡಿಯೋ ಕ್ಲಿಪ್ ನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಆದರೆ ಸ್ಥಳ ಸೇರಿದಂತೆ ಬೇರೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ನಾಲ್ಕು ಮಿಲಿಯನ್ ಗೂ ಹೆಚ್ಚಿನ ವೀಕ್ಷಣೆ ಪಡೆದಿದೆ.

ಕಳೆದ ತಿಂಗಳು, ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ಅವರು ಮಹಿಳೆಯ ಶೂನಲ್ಲಿ ಮರಿ ನಾಗರಹಾವು ಕಾಣಿಸಿಕೊಂಡಿದ್ದ ಇದೇ ರೀತಿಯ ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಹಾವು ತನ್ನ ಹೆಡೆಯನ್ನು ಮೇಲಕ್ಕೆತ್ತಿ ಘಟನೆಯನ್ನು ಚಿತ್ರೀಕರಿಸುವ ವ್ಯಕ್ತಿಯ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next