Advertisement
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠದ ಮಂದೆ ಈ ವಿಚಾರ ಪ್ರಸ್ತಾಪಿಸಿದ ಹಿರಿಯ ವಕೀಲ ಸಿ.ಎಸ್. ವೈದ್ಯ ನಾಥನ್, ವಿವಾದಿದ ಸ್ಥಳದಲ್ಲಿ ದೇಗುಲವಿ ದ್ದುದ್ದನ್ನು ಇದೇ ಪ್ರಕರಣದಲ್ಲಿ ತೀರ್ಪು ನೀಡಿದ್ದ ಅಲಹಾಬಾದ್ ಹೈಕೋರ್ಟ್‌ನ ನ್ಯಾಯ ಮೂರ್ತಿ ಎಸ್.ಯು. ಖಾನ್ ಕೂಡ ಉಲ್ಲೇ ಖೀಸಿದ್ದರು ಎಂದು ತಿಳಿಸಿದರು.
ರಾಜಸ್ಥಾನದ ಮೇವಾಡ ರಾಜಮನೆತನದವರಾದ ಅರವಿಂದ್ ಸಿಂಗ್ ಮೇವಾಡ್ ಎಂಬುವರು, ತಮ್ಮನ್ನು ತಾವು ಶ್ರೀರಾಮನ ವಂಶಸ್ಥರು ಎಂದು ಟ್ವೀಟ್ ಮಾಡಿದ್ದಾರೆ. ಶುಕ್ರವಾರ ನಡೆದ ರಾಮಜನ್ಮಭೂಮಿ ಪ್ರಕರಣದ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್‌ನ ನ್ಯಾಯ ಪೀಠ, ಭಾರತದಲ್ಲಿ ಯಾರಾದರೂ ಶ್ರೀರಾಮನ( ರಘುವಂಶಸ್ಥರು) ವಂಶಸ್ಥರಿದ್ದಾರೆಯೇ ಎಂದು ಕೇಳಿತ್ತು. ಈ ಹಿನ್ನೆಲೆಯಲ್ಲಿ, ಟ್ವೀಟ್ ಮಾಡಿರುವ ಸಿಂಗ್, ನಮಗೆ ರಾಮಜನ್ಮಭೂಮಿಯ ಮೇಲೆ ಹಕ್ಕು ಸಾಧಿಸುವ ಆಸೆಯೇನೂ ಇಲ್ಲ. ಆದರೆ, ವಿವಾದಿತ ಪ್ರದೇಶದಲ್ಲಿ ರಾಮನ ದೇಗುಲ ನಿರ್ಮಾಣವಾಗ ಬೇಕೆಂಬುದೇ ನಮ್ಮ ಅಭಿಲಾಷೆ ಎಂದಿದ್ದಾರೆ. ಮೂರು ದಿನಗಳ ಹಿಂದೆ, ಬಿಜೆಪಿ ಸಂಸದೆ ಹಾಗೂ ಜೈಪುರ ರಾಜವಂಶಸ್ಥೆ ದಿಯಾ ಕುಮಾರಿ, ‘ತಮ್ಮ ಕುಟುಂಬ ಶ್ರೀರಾಮನ ಪುತ್ರ ಕುಶನಿಂದ ಮುಂದುವರಿದ ಸಂತತಿ’ ಎಂದಿದ್ದರು.