Advertisement

“ತಿನ್ನಾಕ್‌ ಅನ್ನ ಇಲ್ಲ, ಅಕ್ಕಿ  ಹಾಕಬ್ಯಾಡ್ರಿ..’

11:45 AM Mar 19, 2017 | Team Udayavani |

ಬಾಗಲಕೋಟೆ: ತಿನ್ನಾಕ್‌ ಅನ್ನ ಇಲ್ಲ, ಮೈ ಮೇಲೆ ಅಕ್ಕಿ ಹಾಕಬ್ಯಾಡ್ರಿ…-ಹೀಗೆ ಹೇಳಿದವರು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ. ತಾಲೂಕಿನ ಬೆಣ್ಣೂರ ಗ್ರಾಮದಲ್ಲಿ ಡಾ|ಅಂಬೇಡ್ಕರ್‌ ವಿದ್ಯಾವರ್ಧಕ ಶಿಕ್ಷಣ ಸಮಿತಿಯ ಬೆಳ್ಳಿ ಮಹೋತ್ಸವ, ಡಾ|ಬಿ.ಆರ್‌.ಅಂಬೇಡ್ಕರವರ 125ನೇ ಜನ್ಮ ವರ್ಷಾಚರಣೆ ನಿಮಿತ್ತ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ವೇಳೆ ಅವರು ಈ ಸಲಹೆ ನೀಡಿದರು.

Advertisement

ನೂತನ ವಧು-ವರರು ತಾಳಿ ಕಟ್ಟಿದ ಬಳಿಕ,ಜನರೆಲ್ಲ ಅಕ್ಕಿಕಾಳು ಹಾಕುತ್ತಿದ್ದರು. ಇದನ್ನು ಕಂಡ ಸಚಿವ ಆಂಜನೇಯ, “ತಿನ್ನಾಕ್‌ ಅನ್ನ ಸಿಗದ ಜನ ನಾವು. ಅಕ್ಕಿ ಹಾಕಬೇಡಿ. ಅದರ ಬದಲು ಹೂವು ಹಾಕಿ’ ಎಂದು ಹೇಳಿ, ಜನರಿಗೆ ಅಕ್ಕಿ ಕಾಳು ಕೊಡುತ್ತಿರುವುದನ್ನು ನಿಲ್ಲಿಸಿದರು.

ಸಾಮೂಹಿಕ ವಿವಾಹದಲ್ಲಿ 25 ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅದರಲ್ಲಿ 23 ಜೋಡಿ ದಲಿತ ವರ್ಗದವರು. ಅವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ತಲಾ 50 ಸಾವಿರ ಸಹಾಯಧನ ನೀಡುವ ಜತೆಗೆ  ಗಂಗಾ ಕಲ್ಯಾಣ ಯೋಜನೆಯಡಿ ಹೊಲದಲ್ಲಿ ಕೊಳವೆ ಬಾವಿ ಕೊರೆಸಿ ಕೊಡಲಾಗುವುದು.

ಹಿಂದುಳಿದ ವರ್ಗದ ಎರಡು ಜೋಡಿ ದಾಂಪತ್ಯಕ್ಕೆ ಕಾಲಿರಿಸಿದ್ದು, ಅವರಿಗೆ ವೈಯಕ್ತಿಕವಾಗಿ ತಲಾ 25 ಸಾವಿರ ನಗದು, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಹಾಗೂ ದೇವರಾಜ ಅರಸು ಹಿಂದುಳಿದ ನಿಗಮದಿಂದ50 ಸಾವಿರ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next