Advertisement

Sirsi: ರಾಜಕಾರಣದಲ್ಲಿ ಧರ್ಮ ಇರಬೇಕು ಹೊರತು ರಾಜಕಾರಣಕ್ಕಾಗಿ ಧರ್ಮದ ಉಪಯೋಗ ಆಗಬಾರದು

11:53 AM Jan 14, 2024 | Team Udayavani |

ಶಿರಸಿ: ಭಟ್ಕಳದಲ್ಲಿ ಸಂಸದ ಅನಂತಕುಮಾರ್ ಹೆಗಡೆ ಅವರು ಎಂದಿನಂತೆ ಧರ್ಮ ವೈಷಮ್ಯದ ಹೇಳಿಕೆಗಳಿಂದ ಶಾಂತಿ ಕದಡಲು ಪ್ರಾರಂಭ ಮಾಡಿಕೊಂಡಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ಕೇವಲ ಹಿಂದುತ್ವ ಮೋದಿ ಎಂದು ಮತ ಕೇಳುವ ಸಂಸದರು ಎಂದಾದರೂ ಅಭಿವೃದ್ದಿಯ ಆಧಾರದಲ್ಲಿ ಮತ ಕೇಳಿದ್ದಾರ? ಎಂದು ಕೆಪಿಸಿಸಿ ಮೀನುಗಾರರ ವಿಭಾಗದ ಕಾರ್ಯದರ್ಶಿ ರಾಜು ಉಗ್ರಾಣಕರ್ ಪ್ರಶ್ನಿಸಿದ್ದಾರೆ.

Advertisement

ಸ್ಥಳೀಯ ಸಮಸ್ಯೆಗಳನ್ನು ಚರ್ಚಿಸುವುದು ಸಂಸದರ ಕೆಲಸವಲ್ಲ ಎಂದು ಹತ್ತಾರು ಬಾರಿ ಹೇಳಿರುವ ಸಂಸದರು ತಮ್ಮ ಅಧಿಕಾರದ ಅವಧಿಯಲ್ಲಿ ಅಜ್ಞಾತರಾಗಿರುವುದೆ ಹೆಚ್ಚು. ಅವರು ಪರೇಶ್ ಮೆಸ್ತಾ ಸಾವು ಆದಾಗ ಘಟ್ಟದ ಕೆಳಗೆ ಇಳಿದು ಅಬ್ಬರಿಸಿದ್ದು ಬಿಟ್ಟರೆ ಪುನಃ ಈಗ ಘಟ್ಟದ ಕೆಳಗೆ ಇಳಿದಿದ್ದಾರೆ. ಈಗ ಅವರು ಅನಾರೋಗ್ಯದ ಕಾರಣ ಕೊಟ್ಟರೂ ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಅಂತಹ ಯಾವುದೇ ಗುರುತಿಸುವ ಕೆಲಸ ಮಾಡಿಯೇ ಇಲ್ಲ ಎಂದಿದ್ದಾರೆ.

ವಿಶ್ವವೇ ಕೊರೊನಾದಿಂದ ತತ್ತರಿಸಿದಾಗ ಜನರನ್ನು ಕಣ್ಣೆತ್ತಿಯೂ ನೋಡದ ಇವರು ಸಮಾಜದ ಕುರಿತು ಚಿಂತಿಸಲು ಸಾಧ್ಯವೇ ಇಲ್ಲ. ವಿವಾದಾತ್ಮಕ ಹೇಳಿಕೆಯಿಂದ ಹಾಲುಂಡವರು ಯಾರು? ಪ್ರಶ್ನಿಸಿಕೊಳ್ಳುವ ಸಮಯ ಇದಾಗಿದೆ ಎಂದ ಅವರು, ಅವರವರ ಧರ್ಮ ಆಚರಣೆ ಅವರ ವಿಚಾರಕ್ಕೆ ಬಿಟ್ಟಿದ್ದು. ರಾಜಕಾರಣದಲ್ಲಿ ಧರ್ಮ ಇರಬೇಕು ಹೊರತು ರಾಜಕಾರಣಕ್ಕಾಗಿ ಧರ್ಮದ ಉಪಯೋಗ ಆಗಬಾರದು ಎಂದರು.

ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಇಂತಹ ಧರ್ಮ ವೈಷಮ್ಯದ ಪ್ರಚೋದಕ ಹೇಳಿಕೆಯನ್ನು  ಸರಿಯಾಗಿ ಅರ್ಥೈಸಿಕೊಂಡು ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಬೇಕಾಗಿದೆ. ನಮ್ಮ ಮೆದಳನ್ನು ಇನ್ನೊಬ್ಬರು ಉಪಯೋಗಿಸಲು ಕೊಟ್ಟರೆ ಆಗುವ ಅನಾಹುತಗಳ ಅರಿವು ಉತ್ತರಕನ್ನಡದ ಜನತೆಗೆ ಆಗಿದೆ. ಪ್ರತಿಯೊಬ್ಬರೂ ತಮ್ಮ ಬದುಕನ್ನು ಅಕಾರಣವಾಗಿ ಸಂಕಷ್ಟಕ್ಕೆ ಸಿಲುಕಿಸದೆ ಜಾಗೃತರಾಗಬೇಕಾಗಿದೆ. ಇಂತಹ ಪ್ರಚೋದನೆಯಿಂದ ಮಕ್ಕಳು ದಾರಿತಪ್ಪದಂತೆ ತಂದೆ-ತಾಯಿ ಜಾಗ್ರತೆ ವಹಿಸಬೇಕಾಗಿದೆ ಎಂದು ಪ್ರಕಟನೆಯಲ್ಲಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next