ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕು ಬೈರಕೂರು ಗ್ರಾಪಂ ವತಿಯಿಂದ ಕಸ ವಿಲೇವಾರಿ ಮಾಡಲು ಇರಗಮುತ್ತನಹಳ್ಳಿ ಮತ್ತು ಕೋನಕುಂಟೆ ಗ್ರಾಮದ ಮಧ್ಯೆ ಜಾಗ ಗುರ್ತಿಸಿರುವುದನ್ನು ಕೈಬಿಟ್ಟು ಬೇರೆ ಜಾಗದಲ್ಲಿ ಕಸ ವಿಲೇವಾರಿ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರೈತ ಸಂಘದ ಮುಖಂಡ ವೀರಭದ್ರಸ್ವಾಮಿ ಮಾತನಾಡಿ, ಮುಳಬಾಗಿಲು ತಾಲೂಕು ಬೈರಕೂರು ಗ್ರಾಪಂ ವತಿಯಿಂದ ಕಸ ವಿಲೇವಾರಿ ಮಾಡಲು ಇರಗಮುತ್ತ ನಹಳ್ಳಿ ಮತ್ತು ಕೋನಕುಂಟೆ ಗ್ರಾಮದ ಮಧ್ಯೆ ಜಾಗ ಗುರ್ತಿಸಿರುವುದು ಸರಿಯಲ್ಲ ಎಂದರು.
ಸದರಿ ಈ ಜಾಗವು ಇರಗಮುತ್ತನಹಳ್ಳಿ ಮತ್ತು ಕೋನಕುಂಟೆ ಗ್ರಾಮದಲ್ಲಿರುವ ಶಾಲೆಗಳ ಮಧ್ಯಭಾಗದಲ್ಲಿರುತ್ತದೆ. ಇಲ್ಲಿ ಕಸ ವಿಲೇವಾರಿ ಮಾಡಿದರೆ ಸದರಿ ಎರಡು ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಗ್ರಾಮಗಳಲ್ಲಿ ಯಥೇತ್ಛವಾಗಿ ರೇಷ್ಮೆ ಕೃಷಿ ಮಾಡುತ್ತಿರುತ್ತಾರೆ. ಕಸದಿಂದ ಹೊರ ಹೊಮ್ಮುವದುರ್ವಾಸನೆಯಿಂದಾಗಿ ರೇಷ್ಮೆ ಬೆಳೆಯು ಬರದೇ ರೈತರು ಸಂಕಷ್ಟಕ್ಕೆ ಒಳಗಾಗ ಬೇಕಾಗುತ್ತದೆ ಎಂದರು.
ಇದನ್ನೂ ಓದಿ:ಸರ್ಕಾರದ ಸೌಲಭ್ಯ ಬಳಸಿಕೊಳ್ಳಲಿ
ಕೂಡಲೇ ಇರಗಮುತ್ತನಹಳ್ಳಿ- ಕೋನಕುಂಟೆ ಜಾಗದಲ್ಲಿ ಕಸ ವಿಲೇವಾರಿ ಮಾಡುವು ದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಹಲವಾರು ಮುಖಂಡರು ಹಾಜರಿದ್ದರು.