Advertisement

ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆ ಇರಲಿ

12:45 PM Jul 15, 2019 | Suhan S |

ತುಮಕೂರು: ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಗುರುತಿಸಿಕೊಂಡಾಗ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.

Advertisement

ನಗರದ ಶ್ರೀ ಭೈರವೇಶ್ವರ ಸಹಕಾರ ಬ್ಯಾಂಕ್‌ ಆವರಣದಲ್ಲಿ ಶ್ರೀ ಭೈರವಿ ಮಹಿಳಾ ಸಂಘ ಮತ್ತು ಶ್ರೀ ಭೈರವಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕೋತ್ಸವದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಆಶೀರ್ವಚನ ನೀಡಿದರು.

ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಮುಖ್ಯ ಕರ್ತವ್ಯವಾಗಬೇಕು. ಆಗ ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಪ್ರತಿಫ‌ಲ ದೊರಕುತ್ತದೆ. ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜ, ದೇಶಕ್ಕೆ ಕೀರ್ತಿ ತರುವಂತೆ ಆಗಬೇಕು. ಮಕ್ಕಳನ್ನು ಶೈಕ್ಷಣಿಕವಾಗಿ ಸಾಧನೆ ಮಾಡಲು ಪೋಷಕರು ಉತ್ತೇಜಿಸಬೇಕು ಎಂದರು.

ಹೆಣ್ಣು ಮಕ್ಕಳು ಇಂದು ಓದುವಂತಹ, ಪ್ರಜ್ಞಾವಂತಿಕೆ ಬೆಳೆಸಿಕೊಂಡು ಬದುಕು ಕಟ್ಟಿಕೊಳ್ಳುವ ಕಡೆ ಹಾತೊರೆಯುತ್ತಿದ್ದಾರೆ. ಇದರ ಜೊತೆಗೆ ಶಿಸ್ತು ಅಳವಡಿಸಿಕೊಂಡಾಗ ಬದುಕು ಇನ್ನೂ ಉತ್ತಮ ರೀತಿಯಲ್ಲಿ ಸಾಗುತ್ತದೆ ಎಂದು ಕಿವಿಮಾತು ಹೇಳಿದರು.

ಮಕ್ಕಳ ಮೇಲೆ ಒತ್ತಡ ಸಲ್ಲ: ಮಕ್ಕಳು ಎಂಬಿಬಿಎಸ್‌, ಇಂಜಿನಿಯರ್‌, ಐಎಎಸ್‌, ಐಪಿಎಸ್‌ ಆಗಬೇಕೆಂದು ಪೋಷಕರು ಓದಲು ಒತ್ತಡ ಹಾಕುವುದನ್ನು ಬಿಟ್ಟು, ಮಕ್ಕಳ ಆಸಕ್ತಿ ಕ್ಷೇತ್ರ ಯಾವುದು ಎಂಬುದನ್ನು ತಿಳಿದುಕೊಂಡು ಪ್ರೋತ್ಸಾಹ ನೀಡಬೇಕು. ಸಾಧನೆಗೆ ಯಾವುದೇ ಕ್ಷೇತ್ರದಲ್ಲಿ ಮೇಲು-ಕೀಳು, ಬೇಧವಿರಬಾರದು. ಆ ನಿಟ್ಟಿನಲ್ಲಿ ಮುನ್ನಡೆದಾಗ ಸಾಧನೆ ಸಾಧ್ಯ. ಸಾಧನೆ ಸಾಧಕನ ಸ್ವತ್ತು ಹೊರತು, ಯಾರ ಸ್ವತ್ತೂ ಅಲ್ಲ. ಇದನ್ನು ಅರಿತು ವಿದ್ಯಾರ್ಥಿಗಳು ಮುನ್ನಡೆಯಬೇಕೆಂದು ಕಿವಿಮಾತು ಹೇಳಿದರು.

Advertisement

ಮೇಯರ್‌ ಲಲಿತಾ ರವೀಶ್‌ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಂಡು ಸಮಾಜ ಸೇವಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.

ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಭೈರವಿ ಮಹಿಳಾ ಸಂಘದ ಅಧ್ಯಕ್ಷೆ ಸುಜಾತ ನಂಜೇಗೌಡ ಮಾತನಾಡಿ, ಆಧುನಿಕ ಕಾಲದಲ್ಲಿ ವಿದ್ಯಾರ್ಥಿಗಳು ಪಠ್ಯ ಪುಸ್ತಕ ಹೆಚ್ಚು ಅಭ್ಯಾಸ ಮಾಡುವುದನ್ನು ಬಿಟ್ಟು ಮೊಬೈಲ್ನಲ್ಲಿ ಕಾಲ ಕಳೆದು ಹಲವಾರು ಮಾನಸಿಕ ಒತ್ತಡಗಳಿಗೆ ಒಳಗಾಗುತ್ತಾರೆ. ಪೋಷಕರು ಮಕ್ಕಳಿಗೆ ಮೊಬೈಲ್ ನೀಡದೆ ವಿದ್ಯಾಭ್ಯಾಸದಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು. ಸ್ವಾಮಿ ವಿವೇಕಾನಂದ ವಿದ್ಯಾರ್ಥಿ ಹಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶ್ರೀಹರಿ ಜೆ.ಗೌಡ ಉಪನ್ಯಾಸ ನೀಡಿದರು. ಈ ವೇಳೆ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶ್ರೀ ಭೈರವಿ ಮಹಿಳಾ ಸಂಘದಿಂದ ಪುಸ್ತಕ ಬಿಡುಗಡೆ ಮಾಡಲಾಯಿತು.

ಶ್ರೀ ಭೈರವಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಸುಧಾಕುಮಾರ್‌, ಕಾರ್ಯಾಧ್ಯಕ್ಷೆ ಎಲ್.ಸುನಂದ ಗೌಡ, ಉಪಾಧ್ಯಕ್ಷೆ ನೇತ್ರ ಜಗದೀಶ್‌, ಕಾರ್ಯದರ್ಶಿ ಸುಮಂಗಳ ಅಪ್ಪಣ್ಣ, ಸಹ ಕಾರ್ಯದರ್ಶಿ ಪಾರ್ವತಿ ನಂಜುಂಡಯ್ಯ, ಖಜಾಂಚಿ ಶಿವಲಕ್ಷ್ಮಮ್ಮ, ಸಂಘಟನಾ ಕಾರ್ಯದರ್ಶಿ ರತ್ನ ನಾಗರಾಜು, ಮಂಜುಳಾ ಲೋಕೇಶ್‌, ಮಹಾನಗರ ಪಾಲಿಕೆ ಸದಸ್ಯರಾದ ಧರಣೇಂದ್ರ ಕುಮಾರ್‌, ಕುಮಾರ್‌, ದೇವು ಪ್ರಕಾಶ್‌, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು, ಕಮಲ ಕೃಷ್ಣಮೂರ್ತಿ, ಲಲಿತಾ ಹನುಮಂತರಾಯಪ್ಪ, ಬೆಳ್ಳಿ ರಕ್ತನಿಧಿ ಕೇಂದ್ರದ ಬೆಳ್ಳಿ ಲೋಕೇಶ್‌, ಎಸ್‌ಎಸ್‌ಐಟಿ ಪ್ರಾಂಶುಪಾಲ ಡಾ.ವೀರಯ್ಯ, ನಳಿನಾ ಲೋಕೇಶ್‌, ತಾರಾದೇವಿ, ನರಸಿಂಹಮೂರ್ತಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next