Advertisement
ಮೀನಾಕ್ಷಿಯ ಸಂಸಾರ ಹಠಾತ್ತಾಗಿ ಸಾಲದಿಂದ ಕಂಗಾಲಾಗಿತ್ತು. ಪ್ರಾಮಾಣಿಕರಾದ ಯಜಮಾನರು ಕೆಲಸದಿಂದ ವಜಾ ಆಗಿದ್ದರು. ಮಗಳ ಮದುವೆಯ ಖರ್ಚು ತೂಗಿಸುವುದಿತ್ತು. ಮಗನದ್ದು ಕಾಲೇಜಿನಲ್ಲಿ ಪೇಮೆಂಟ್ ಸೀಟು. ಆದರೂ, ಧೃತಿಗೆಡದ ಮೀನಾಕ್ಷಿ ಮನೆಯ ಖರ್ಚನ್ನು ಸರಿದೂಗಿಸಲು ಉದ್ಯೋಗಕ್ಕೆ ಸೇರಿದಳು.
Related Articles
Advertisement
ಹಣ ಮತ್ತು ಅಧಿಕಾರದ ಪ್ರಭಾವದಿಂದ ಸಂಸಾರಗಳನ್ನು ಮೊದಲಿಗೆ ತಮ್ಮ ಕಡೆಗೆ ಓಲೈಸಿಕೊಂಡ ಬಾಸ್, ಎಲ್ಲರಿಗೂ ಆಪತ್ಭಾಂಧವನಾಗುತ್ತಾನೆ. ಯಾರ ಕಣ್ಣಿಗೂ ಆತ ಕಾಮುಕನಾಗಿ ತೋರುವುದಿಲ್ಲ. ಹೆಂಗಸರಿಗೆ, ಮದುವೆಯ ಪವಿತ್ರತೆಯಲ್ಲಾದ ಸೆಕ್ಸ್ ಮಕ್ಕಳನ್ನು ಕೊಟ್ಟಿರುತ್ತದೆ. ಸುಖ ಕೊಟ್ಟಿಲ್ಲದಿರಬಹುದು. ವಾಣಿಜ್ಯ ಪ್ರವಾಸಗಳಲ್ಲಿ, ಮೈ ಮನಗಳು ಬಾಸ್ ನೀಡಿದ ಸುಖಕ್ಕೆ ಒಪ್ಪಿಕೊಂಡುಬಿಡುತ್ತವೆ. ಜೊತೆಗೆ ಕಷ್ಟಗಳನ್ನು ತೀರಿಸಿದ ಕೃತಜ್ಞತೆಯಿಂದಾಗಿ ಬಾಸ್ ಬಗ್ಗೆ ಕೆಟ್ಟದಾಗಿ ಮಾತನಾಡಲೂ ಆಕೆಗೆ ಆಗುವುದಿಲ್ಲ. ಸೆಕ್ಸ್ ನಂತರ ಹೆಂಗಸರು ತಮ್ಮನ್ನು ನಿಯಂತ್ರಣ ಮಾಡಬಹುದೆಂಬ ಅಗೋಚರ ಭಯದಿಂದ ಬಾಸ್ ಏಕಾಏಕಿ ಆಕೆಯೊಡನೆ ಮಾತು ಬಿಡುತ್ತಾರೆ. ಹಣದ ಅವಶ್ಯಕತೆ ಮತ್ತು ಮಾನ ಹೋಗುವ ಅಂಜಿಕೆಯಿಂದ ಹೆಂಗಸರ ಚೀರಾಟ ನಿಲ್ಲುತ್ತದೆ ಎಂಬ ಸತ್ಯ ಬಾಸ್‌ಗೆ ಗೊತ್ತು. ಅವರು ಬೇರೆ ಹುಡುಗಿಯ ಹುಡುಕಾಟಕ್ಕೆ ಇಳಿಯುತ್ತಾರೆ.
ಸುಖ ನೀಡಿದ ಸುಕುಮಾರ, ಗಡಸುತನದಲ್ಲಿ ನಡೆಸಿಕೊಳ್ಳುವುದು ಮೀನಾಕ್ಷಿಗೆ ಅರ್ಥವಾಗುವುದಿಲ್ಲ. ಮನೋವಿಶ್ಲೇಷಣೆಯ ನಂತರ ಮೀನಾಕ್ಷಿ ನಿಧಾನವಾಗಿ ಮನಸ್ಸನ್ನು ಗಟ್ಟಿಮಾಡಿಕೊಂಡರು. ಈಗವರು ಬೇರೆ ಕೆಲಸದಲ್ಲಿದ್ದಾರೆ.
ಈ ಪ್ರಸಂಗದ ನೆಪದಲ್ಲಿ ಎಲ್ಲ ಹೆಣ್ಣು ಮಕ್ಕಳಿಗೂ ಹೇಳಬಹುದಾದ ಮಾತು: ಬಾಸ್‌ಗಳ ನಡವಳಿಕೆಯಲ್ಲಿನ ಸ್ವಾರ್ಥ ಅರ್ಥಮಾಡಿಕೊಳ್ಳಿ; ಅವರು ಮಾಡಿದ ಸಹಾಯಕ್ಕೆ ಪ್ರಜ್ಞಾಪೂರ್ವಕವಾದ ಕೃತಜ್ಞತೆಯಿದ್ದರೆ ಸಾಕು.
ಡಾ. ಶುಭಾ ಮಧುಸೂದನ್ಚಿಕಿತ್ಸಾ ಮನೋವಿಜ್ಞಾನಿ