Advertisement

ಅಭಿವೃದ್ಧಿಗೆ ಶ್ರಮಿಸಿದ ತೃಪ್ತಿ ಇದೆ

04:26 PM Jul 10, 2020 | Suhan S |

ಚಿಕ್ಕೋಡಿ: ಐದು ವರ್ಷದಅಧಿಕಾರಾವಧಿಯಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ, ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗುವ ಮೂಲಕ ನಾಗರಮುನ್ನೋಳ್ಳಿ ರಾಜ್ಯದಲ್ಲಿ ವಿಶೇಷ ಗಮನ ಸೆಳೆದಿದೆ ಎಂದು ಗ್ರಾ.ಪಂ.ಅಧ್ಯಕ್ಷ ಸಿದ್ದಪ್ಪ ಮರ್ಯಾಯಿ ಹೇಳಿದರು.

Advertisement

ನಾಗರಮುನ್ನೋಳ್ಳಿ ಗ್ರಾಮದಲ್ಲಿ ನಡೆದ ಗ್ರಾ.ಪಂ ಸದಸ್ಯರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು. ಕಳೆದ ಐದು ವರ್ಷದಲ್ಲಿ ಸಮರ್ಪಕ ಕುಡಿಯುವ ನೀರು, ರಸ್ತೆ, ಗಟಾರ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಿರುವ ತೃಪ್ತಿ ಇದೆ. ಕೋವಿಡ್ ತಡೆಗಟ್ಟುವಲ್ಲಿ ಆಶಾ, ಅಂಗನವಾಡಿ, ಗ್ರಾ.ಪಂ ಸಿಬ್ಬಂದಿಗಳು ಸದಸ್ಯರ ಸಹಕಾರದಿಂದ ಜಾಗೃತಿ ಮೂಡಿಸಿದ್ದು, ಗ್ರಾಮಸ್ಥರು ಕೊರೊನಾ ಮುಕ್ತ ಗ್ರಾಮವನ್ನಾಗಿ ರೂಪಿಸಲು ಮುಂದಾಗಬೇಕು. ಯುವಕರಲ್ಲಿ ರಾಜಕೀಯ ಇಚ್ಛಾಶಕ್ತಿ ಹೆಚ್ಚಿದ್ದು, ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಯುವಕರು ರಾಜಕೀಯ ಪ್ರವೇಶ ಮಾಡಬೇಕು ಎಂದರು.

ಹಿರಿಯ ಮುಖಂಡ ರಾವಸಾಹೇಬ ಪಾಟೀಲ ಮಾತನಾಡಿ, ಚುನಾವಣೆ ನಂತರ ರಾಜಕೀಯ ಬಿಟ್ಟು ಎಲ್ಲರೂ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಗ್ರಾ.ಪಂ ಉಪಾಧ್ಯಕ್ಷ ಸುಜಾತ ಪಾಶ್ಚಾಪೂರೆ, ಗ್ರಾಮದ ಮುಖಂಡರಾದ ಎಭ.ಬಿ.ಆಲೂರೆ, ಶಂಕರ ನೇರಲಿ, ವಿನಾಯಕ ಕುಂಭಾರ, ಶಿವಪುತ್ರ ಮನಗೂಳಿ, ಕೆಂಪಣ್ಣಾ ಈಟಿ, ಮಾರುತಿ ಮರ್ಯಾಯಿ, ಶಿವಾನಂದ ಮರ್ಯಾಯಿ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next