Advertisement

ನಿನ್ನ ಕುರಿತು ಗೌರವವಿದೆ, ಆದರೆ ನಂಬಿಕೆ ಇಲ್ಲ…

07:56 PM Nov 18, 2019 | mahesh |

ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಒಬ್ಬ ಗೆಳತಿ ಇರಬೇಕು. ಅವಳೇ ಜೀವನದ ಆಧಾರವಾಗಿಬೇಕು, ಮನಸ್ಸಿನ ಕನ್ನಡಿಗೆ ಸುಂದರವಾದ ಮುಖ ಅವಳಾಗಿರಬೇಕು. ಇದನ್ನೇ, ಜಗತ್ತಿನ ಎಲ್ಲ ಹುಡುಗರೂ ನಿರೀಕ್ಷಿಸುವುದು.

Advertisement

ನಾನು ಕೇಳಿದ್ದು ಇದನ್ನೇ…
ನೀ ಯಾಕಾಗಿ ನನಗೆ ಪರಿಚಯವಾದೆ ಎಂದೇ ಗೊತ್ತಿಲ್ಲ. ನೀ, ಮೊದಲು ನನ್ನ ಮಾತನಾಡಿಸಿದಾಗ, ಹೊಸ ಸಂಭ್ರಮವೊಂದು ನನ್ನನ್ನು ಅವರಿಸಿದಂತಾಗಿತ್ತು. ನಿನ್ನನ್ನು ಇಂಪ್ರಸ್‌ ಮಾಡಲು ಕಾಲೇಜಿನ ಅದೆಷ್ಟು ಮಂದಿ ಪ್ರಯತ್ನಿಸಿದರು ಎಂದು ನನಗೆ ಗೊತ್ತು. ನೀನು ಅವರ ಬಳಿ ತಪ್ಪಿಯೂ ಮಾತನಾಡುತ್ತಿರಲಿಲ್ಲ ಏಕೆ ಎಂದು ಇವತ್ತಿಗೂ ಅರ್ಥವಾಗಿಲ್ಲ. ನಾನು ಮಾಡುವ ಕೆಸಲಕ್ಕೆ ನೀ ನೀಡುತ್ತಿದ ಬೆಂಬಲ, ಪ್ರೊತ್ಸಾಹವನ್ನು ಎಂದೆಂದಿಗೂ ಇಂದಿಗೂ ನಾನು ಮರೆಯಲು ಸಾಧ್ಯವಿಲ್ಲ. ನನ್ನ – ನಿನ್ನ ಮೊದಲ ಕಾಲೇಜು ಕಾರ್ಯಕ್ರಮ ಒಂದರಲ್ಲಿ; ಜ್ಞಾಪಕ ಇದೆಯಾ?

ಮೊದ ಮೊದಲು ಮುದ್ದು ಮಾತುಗಳು, ನವಿರು ನಗೆ ಬೆರೆತು, ಆನಂತರದಲ್ಲಿ ಭಾವ ಬದಲಾಯಿತು. ನಮ್ಮ ನಡುವಿನ ಸಲುಗೆ ಹೆಚ್ಚಾಗಿ, ಕಾಳಜಿ ಮೊಳೆತು, ಚಿಕ್ಕ ಚಿಕ್ಕ ವಿಷಯಕ್ಕೂ ಕೋಪ, ಜಗಳಗಳು ನಡೆಯುತ್ತಿದ್ದವು. ಅದು ಅಲ್ಪದಲ್ಲಿ ಶಮನಗೊಂಡು ಎಂಬಂತೆ ಮತ್ತೆ ಒಟ್ಟು ಸೇರುತ್ತಿದ್ದೆವು.

ಈ ಮಧ್ಯೆಯೇ, ಮನಸ್ಸು ಅನೇಕ ಬಾರಿ ಹೇಳುತ್ತಿತ್ತು, ನಿನ್ನ ಗೆಳತಿಯ ಹೃದಯ ಇನ್ನೊಬ್ಬರನ್ನು ಸೆಳೆಯುತ್ತಿದೆ ಎಂದು. ಆದರೆ ನಾ ನಿನ್ನ ನಂಬಿದೆ. ಅನೇಕರು ನಮ್ಮ ಸಂಬಂಧಕ್ಕೆ ಬೇರೆಯದೇ ಅರ್ಥ ನೀಡಿದರು. ಆದರೂ, ನಾನು ಕುಗ್ಗಲಿಲ್ಲ. ಏಕೆಂದರೆ ನಮ್ಮದು ಸ್ನೇಹಕ್ಕೂ ಮೀರಿದ ಅನುಬಂಧ. ನೀನು ಕಷ್ಟಪಟ್ಟು ಬಂದ ಹುಡುಗಿ, ನಿನ್ನ ಎಲ್ಲ ಕಷ್ಟಗಳನ್ನು ನನ್ನಲ್ಲಿ ಹಂಚಿಕೊಂಡಿದ್ದೀಯ. ಅಂಥವಳು, ಯಾರದೋ ಮಾತು ಕೇಳಿ ನನ್ನ ದೂರ ಮಾಡಿದೆ. ಇಂದಿಗೂ ನಿನ್ನ ಮೇಲೆ ಅಪಾರವಾದ ಗೌರವ ಇದೆ; ಆದರೆ ನಂಬಿಕೆ ಇಲ್ಲ. ಇಂದು ನಿನ್ನ ಬಳಿ ಅನೇಕ ಸ್ನೇಹ ವೃತ್ತ ಇದೆ. ಆ ಎಲ್ಲ ಸ್ನೇಹವೂ ಮೋಸ ಎಂದು ತಿಳಿದಾಗ ತಿಳಿದಾಗ ನೊಂದುಕೊಳ್ಳುವ ಪರಿಸ್ಥಿತಿ ನಿನಗೆ ಬರದಿರಲಿ. ಏಕೆಂದರೆ ನೀ ನಂಬಿರುವ ಗೆಳೆಯರು ನಿನಂಗಿತ ಮೊದಲು ನಾನು ನನಗೂ ಗೆಳೆಯರೇ, ಆದರೆ, ಅವರೆಲ್ಲ ಎಂಥವರು ಎಂದು ನಿನಗಿಂತ ಮೊದಲೇ ಚೆನ್ನಾಗಿ ಅರ್ಥ ಮಾಡಿಕೊಂಡ ನಂತರವೇ ನಿನಗೆ ಎಚ್ಚರಿಕೆಯ ಮಾತು ಹೇಳುತ್ತಿದ್ದೇನೆ. ಪ್ಲೀಸ್‌, ಮೋಸದ ಗೆಳೆತನಕ್ಕೆ ಗುರಿಯಾಗಬೇಡ ಗೆಳತಿ.

ಅಕ್ಷಯ್‌ ಕುಮಾರ್‌ ಪಲ್ಲಮಜಲು

Advertisement
Advertisement

Udayavani is now on Telegram. Click here to join our channel and stay updated with the latest news.

Next