Advertisement

Kerala: ಇಲ್ಲಿ ಸಾಕಷ್ಟು ನೀರಿದೆ, ನಮ್ಮ ರಾಜ್ಯಕ್ಕೆ ಬನ್ನಿ: ಕೇರಳ ಆಹ್ವಾನ

11:14 PM Mar 27, 2024 | Team Udayavani |

ತಿರುವನಂತಪುರ: ಕರ್ನಾಟಕದ ರಾಜಧಾನಿ, ಸಿಲಿಕಾನ್‌ ಸಿಟಿ ಬೆಂಗ ಳೂರಿನಲ್ಲಿ ನೀರಿನ ಸಮಸ್ಯೆ ಎದುರಾ ಗುತ್ತಿ ದ್ದಂತೆಯೇ ನೆರ ರಾಜ್ಯವಾದ ಕೇರಳ ಬೆಂಗಳೂರಿನ ಐಟಿ ಸಂಸ್ಥೆಗಳತ್ತ ಕಣ್ಣು ಹಾಯಿಸಿದೆ. ನಮ್ಮ ರಾಜ್ಯದಲ್ಲಿ ನೀರಿನ ಜತೆಗೆ ಎಲ್ಲ ರೀತಿಯ ಸೌಲಭ್ಯಗಳನ್ನೂ ಒದಗಿಸಿಕೊಡುತ್ತೇವೆ, ಇಲ್ಲಿಯೇ ನಿಮ್ಮ ಕಂಪೆನಿಗಳನ್ನು ತೆರೆಯಿರಿ ಎಂದು ದೊಡ್ಡ ದೊಡ್ಡ ಐಟಿ ಸಂಸ್ಥೆಗಳಿಗೆ ಆಹ್ವಾನ ನೀಡಿದೆ.

Advertisement

ಈ ಕುರಿತಂತೆ ಕೇರಳದ ಕೈಗಾರಿಕೆ ಮತ್ತು ಕಾನೂನು ಸಚಿವರಾದ ಪಿ. ರಾಜೀವ್‌ ಅವರೇ ಖುದ್ದು ಮಾಹಿತಿ ನೀಡಿದ್ದು, “ಬೆಂಗಳೂರಿನಲ್ಲಿ ವಿಪರೀತ ವಾಗಿ ನೀರಿಗೆ ಸಮಸ್ಯೆಯಾಗಿರುವ ವರದಿ ಗಳನ್ನು ನಾವು ಓದಿದ್ದೇವೆ. ಈ ಹಿನ್ನೆಲೆಯಲ್ಲಿ ಐಟಿ ಸಂಸ್ಥೆಗಳಿಗೆ ಪತ್ರ ಬರೆದು ಎಲ್ಲ ಸೌಲಭ್ಯಗಳ ಜತೆಗೆ ನೀರನ್ನೂ ಒದಗಿಸುವುದಾಗಿ ಹೇಳಿದ್ದೇವೆ. ನಮ್ಮ ರಾಜ್ಯದಲ್ಲಿ 44 ನದಿಗಳಿವೆ ಹಾಗಾಗಿ ನೀರಿನ ಸಮಸ್ಯೆಯೂ ಇಲ್ಲ’ ಎಂದಿದ್ದಾರೆ.

ಅಲ್ಲದೇ ಬೆಂಗಳೂರಿನಂತೆಯೇ ನಮ್ಮ ಇಡೀ ರಾಜ್ಯವನ್ನು ಐಟಿ ಕೇಂದ್ರವನ್ನಾಗಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಇದಕ್ಕಾಗಿ ಅಗತ್ಯ ವಾದಂಥ ವ್ಯವಸ್ಥೆಗಳು, ಸೌಲಭ್ಯಗಳೂ ನಮ್ಮಲ್ಲಿ ಇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next