Advertisement

”ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ಬೇರೇನಿಲ್ಲ’

08:47 PM Nov 24, 2019 | Sriram |

ಉಡುಪಿ: ಉದಯವಾಣಿ ಬಳಗದ “ತುಷಾರ’ ಮಾಸಪತ್ರಿಕೆಯು ಕುಂದಾಪುರ- ಬೀಜಾಡಿಯ “ಕಡಲಮನೆ’ ಯಲ್ಲಿ ಆಯೋಜಿಸಿದ್ದ ಒಂದು ದಿನದ ಲೇಖಕಿಯರ ಶಿಬಿರ “ಕೇಳು ಸಖೀ’ಯನ್ನು ಕ್ಯಾಲಿಫೋರ್ನಿಯಾದ ಸಾಹಿತ್ಯಾಂಜಲಿಯ ಸ್ಥಾಪಕಾಧ್ಯಕ್ಷ ಡಾ| ನಾಗ ಐತಾಳ ಶುಕ್ರವಾರ ಉದ್ಘಾಟಿಸಿದರು.

Advertisement

“ನನ್ನ ಅಮ್ಮ’ ಎಂಬ ವಿಷಯದ‌ ಕುರಿತು ಮಾತನಾಡುವುದರ ಮೂಲಕ ವಿಶಿಷ್ಟವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, “ಅಮ್ಮ ಅಂದರೆ ಅಮ್ಮ, ಅಮ್ಮನ ಬಗ್ಗೆ ಏನು ಮಾತನಾಡಲಿ? ಹೇಗೆ ಮಾತನಾಡಲಿ? ಅಮ್ಮ ಎಂದರೆ ಹೆಣ್ಣು, ಹಾಗಾಗಿ, ಹೆಣ್ಣುಮಕ್ಕಳಲ್ಲಿ ಅಮ್ಮಂದಿರನ್ನು ಕಾಣುತ್ತೇವೆ’ ಎಂದರು. “ಜಗತ್ತಿನಲ್ಲಿ ಎಲ್ಲವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಹಾಗೆ ಅಮ್ಮನ ಪ್ರೀತಿಯನ್ನು ಕೂಡ’ ಎಂದು ಹೇಳಿದರು. ಲಕ್ಷ್ಮೀ ಐತಾಳ ಉಪಸ್ಥಿತರಿದ್ದರು.

ಶಿಬಿರದ ಇನ್ನೋರ್ವ ನಿರ್ದೇಶಕಿ ಭುವನೇಶ್ವರಿ ಹೆಗಡೆ ಅವರು ತಾವು ತುಷಾರ ಮಾಸಪತ್ರಿಕೆಯ ಮೂಲಕ ಬರಹಗಾರ್ತಿಯಾಗಿ ಬೆಳಕಿಗೆ ಬಂದ ಸಂದರ್ಭವನ್ನು ನೆನಪಿಸಿಕೊಂಡರು. ಯುವ ಲೇಖಕಿಯರು ಹೇಗೆ ತಮ್ಮ ಅನುಭವಗಳನ್ನು ಬರಹಗಳನ್ನಾಗಿಸಬಹುದು ಎಂಬುವುದರ ಬಗ್ಗೆ ಸಲಹೆ ನೀಡಿದರು.

ತುಷಾರ ಮಾಸಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರು ಮಾರ್ಗದರ್ಶಕಿಯಾಗಿದ್ದ ಶಿಬಿರದಲ್ಲಿ ಲೇಖಕಿಯರಾದ ಸುಶೀಲಾ ಕುಶಾಲನಗರ, ಸಹನಾ ಕಾಂತಬೈಲು, ಸ್ಮಿತಾ ಅಮೃತರಾಜ್‌, ಡಾ| ರಶ್ಮಿ ಕುಂದಾಪುರ, ಸುಧಾ ಅಡುಕಳ, ದೀಪ್ತಿ ಭದ್ರಾವತಿ, ರೇಣುಕಾ ರಮಾನಂದ, ಕಲ್ಪನಾ ಹೆಗಡೆ, ಪಾರ್ವತಿ ಪಿಟಗಿ, ಅನುಪಮಾ ಪ್ರಸಾದ್‌, ರೇಷ್ಮಾ ಭಟ್‌, ಪೂರ್ಣಿಮಾ ಸುರೇಶ್‌, ಪೂರ್ಣಿಮಾ ಕಮಲಶಿಲೆ, ರಾಧಿಕಾ ಮಯ್ಯ, ನಾಗರತ್ನಾ ಹೇಳೆì, ರಾಜಶ್ರೀ ಟಿ. ರೈ, ಸಂಧ್ಯಾ ಹೆಗಡೆ, ಕವಿತಾ ಕೂಡ್ಲು, ಮಧುರಾ ಎಲ್‌. ಭಟ್‌, ವಿದ್ಯಾ ಎ. ಜಿ. ಜಯಶ್ರೀ ಬಿ. ಕದ್ರಿ, ವಸಂತಿ ಶೆಟ್ಟಿ ಬ್ರಹ್ಮಾವರ, ಅಭಿಲಾಷಾ ಸಾಸ್ತಾನ ಇವರು ತಮ್ಮ ಅನುಭವಗಳನ್ನು ಅಭಿವ್ಯಕ್ತಿಗೊಳಿಸುವ ಮೂಲಕ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸುಮಂಗಲಾ ಮತ್ತು ಸರೋಜಿನಿ ಶಿಬಿರದ ಸಂಯೋಜಕಿಯರಾಗಿದ್ದರು.

ಅರ್ಥಪೂರ್ಣ ಕಾರ್ಯಕ್ರಮ
ಶಿಬಿರದ ನಿರ್ದೇಶಕಿಯಾದ ವೈದೇಹಿ ಮಾತನಾಡುತ್ತ, “ಎಲ್ಲರೂ ಜತೆ ಸೇರಿ ಅನೌಪಚಾರಿಕವಾಗಿ ಮಾತನಾಡುವಾಗ ಆಗುವ ಆನಂದ ಔಪಚಾರಿಕವಾದ ಉಪನ್ಯಾಸಗಳಲ್ಲಿ ಆಗುವುದಿಲ್ಲ. ಎಲ್ಲರೂ ಅವರವರ ಮನಸ್ಸನ್ನು ತೆರೆದುಕೊಳ್ಳುವುದಕ್ಕೆ ಕಡಲತೀರಕ್ಕಿಂತ ಪ್ರಶಸ್ತವಾದ ಸ್ಥಳ ಬೇರೆ ಇಲ್ಲ. ಉದಯವಾಣಿ ಬಳಗವು ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಯೋಜಿಸಿದೆ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next