Advertisement

ಹತ್ತಿರದಲ್ಲೇ ಡ್ಯಾಂ ಇದ್ದರೂ ಕುಡಿಯಲು ನೀರಿಲ್ಲ !

02:09 PM May 05, 2018 | |

ಮಳವೂರ: ಹತ್ತಿರದಲ್ಲೇ ಇದೆ ವೆಂಟೆಡ್‌ ಡ್ಯಾಂ. ಆದರೂ ಕುಡಿಯುವ ನೀರಿಗೆ ಎದುರಾಗಿದೆ ತತ್ವಾರ. ಮಳವೂರು ವೆಂಟೆಡ್‌ ಡ್ಯಾಂ ಮಳವೂರು ಗ್ರಾ. ಪಂ. ವ್ಯಾಪ್ತಿಯಲ್ಲಿದ್ದರೂ ಇಲ್ಲಿನ ಕೆಂಜಾರಿನ ಮೂರನೇ ವಾರ್ಡ್‌ ಪ್ರದೇಶದ ಸುಮಾರು 200 ಮನೆಗಳಿಗೆ ಕುಡಿ ಯಲು ಟ್ಯಾಂಕರ್‌ ನೀರು ಸರಬರಾಜು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

Advertisement

ಫೆಬ್ರವರಿ ತಿಂಗಳಿಂದಲೇ ಈ ಪ್ರದೇಶದವರಿಗೆ ನೀರಿನ ಸಮಸ್ಯೆ ಎದುರಾಗಿತ್ತು. ಈಗ ಹೆಚ್ಚಿನ ಬಾವಿಗಳಲ್ಲಿ ನೀರಿಲ್ಲವಾಗಿದೆ.

ಎಲ್ಲೆಡೆ ಚುನಾವಣ ಕಾವು ಏರಿದರೆ ಇಲ್ಲಿಯ ನಿವಾಸಿಗಳಿಗೆ ಮಾತ್ರ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಸಮೀಪ ದಲ್ಲಿಯೇ ಗುರುಪುರ ನದಿ ಹರಿಯುತ್ತಿದ್ದರೂ, ಹಿನ್ನೀರಿನಿಂದಾಗಿ ಬಾವಿ ನೀರು ಕೂಡ ಉಪ್ಪಾಗಿದ್ದು, ಬಳಸಲು ಯೋಗ್ಯವಾಗಿಲ್ಲ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ಕೆಂಜಾರು ಮೂರನೇ ವಾರ್ಡ್‌ ಪ್ರದೇಶದ ಪೇಜಾವರ ಮಠ, ಪಡ್ಪು ಶಾಲೆ, ಗುಡ್ಡೆ, ನಡುಪಾಲು, ಮೂಡು ಬಾಳಿಕೆ ಕಾಲೋನಿ, ಬಡಗು ಮನೆ ಕಾಲೋನಿ, ಅಗ್ರಹಾರ, ಕೊಪ್ಪಳ ಪ್ರದೇಶದ 200 ಮನೆಗಳಿಗೆ ನೀರಿನ ಸಮಸ್ಯೆ ಎದುರಾಗಿದೆ.

ಓವರ್‌ಹೆಡ್‌ ಟ್ಯಾಂಕ್‌ಗೆ 4 ವರ್ಷ
ಈ ಪ್ರದೇಶದ ಜನರಿಗೆ 1 ಲಕ್ಷ ಲೀಟರ್‌ ಸಾಮರ್ಥ್ಯದ ಒವರ್‌ಹೆಡ್‌ ಟ್ಯಾಂಕ್‌ ನಿರ್ಮಾಣವಾಗಿ 4 ವರ್ಷಗಳಾಯಿತು. ಮನೆಮನೆ ಪೈಪ್‌ಗ್ ಳೂ ಈಗಾಗಲೇ ಬಂದಿ ವೆ. ಆದರೆ ಸಂಪರ್ಕ ಮಾತ್ರ ನೀರಿಲ್ಲದೆ ಆಗಿಲ್ಲ.

Advertisement

ವೆಂಟೆಡ್‌ ಡ್ಯಾಂ ಸಂಪರ್ಕ ಇನ್ನೂ ಆಗಿಲ್ಲ
ಮಳವೂರು ವೆಂಟೆಡ್‌ ಡ್ಯಾಂನ ಪೈಪ್‌ ಲೈನ್‌ಗಳು ಜೋಕಟ್ಟೆಯ ಕಂಭತ್ತಿ ಬಂಡ ಸಾಲೆ ರೈಲ್ವೇ ಕ್ರಾಸಿಂಗ್‌ ತನಕ ಬಂದಿದೆ. ರೈಲ್ವೇ ಹಳಿಗಳಿಂದ ಪೈಪ್‌ಲೈನ್‌ಗಳು ಹಾದು ಹೋಗಲು ರೈಲ್ವೇ ಇಲಾಖೆಯ ಅನುಮತಿಬೇಕಾಗಿದೆ. ಈಗಾಗಲೇ ಎರಡೂ ಬದಿ ಕುಡಿ ಯುವ ನೀರಿನ ಪೈಪ್‌ ಗಳನ್ನು ಹಾಕಲಾಗಿದೆ. ಅನುಮತಿ ಸಿಗುವವರೆಗೆ ವೆಂಟೆಡ್‌ ಡ್ಯಾಂ ನೀರಿನ ಭಾಗ್ಯ ಈ ಪ್ರದೇಶದ ಜನರಿಗೆ ಸಿಗುವುದು ಕಷ್ಟ.

ಅನುಮತಿಗೆ ಮನವಿ
ಕೆಂಜಾರು ಗ್ರಾಮದ ಹೆಚ್ಚಿನ ಕುಡಿಯುವ ನೀರಿನ ಪೈಪ್‌ಲೈನ್‌ಗಳ ಕಾಮಗಾರಿ ಮುಗಿದಿದೆ. ರೈಲ್ವೇ ಕ್ರಾಸಿಂಗ್‌ ಬಳಿ ಪೈಪ್‌ಗಳನ್ನು ಜೋಡಣೆ ಮಾತ್ರ ಬಾಕಿ ಉಳಿದಿದೆ. ಅನುಮತಿಗಾಗಿ ಮನವಿ ಸಲ್ಲಿಸಲಾಗಿದೆ.
-ಪ್ರಭಾಕರ
ಎಂಜಿನಿಯರ್ 

ಟ್ಯಾಂಕರ್‌ ಮೂಲಕ ನೀರಿನ ಸರಬರಾಜು
ಈಗಾಗಲೇ ಕುಡಿಯುವ ನೀರಿನ ಬಗ್ಗೆ ತಾಲೂಕು ಪಂಚಾಯತ್‌ಗೆ ಮನವಿ ಮಾಡಲಾಗಿದೆ. ಅನುಮತಿ ದೊರೆತ
ತತ್‌ಕ್ಷಣ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುವುದು.
– ವಿಶ್ವನಾಥ ಮಳವೂರು ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next