ಮಳವೂರು: ಮಳವೂರು ಮತ್ತು ಕೆಂಜಾರು ಗ್ರಾಮಗಳನ್ನೊಳಗೊಂಡ ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯಲ್ಲಿ ಗುರುಪುರ ನದಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಳವೂರು ವೆಂಟೆಡ್ ಡ್ಯಾಂನಿಂದಾಗಿ ಗ್ರಾಮ ಪಂಚಾಯತ್‌ನ ಅಂತರ್ಜಲ ವೃದ್ಧಿಗೆ ಕಾರಣವಾಗಿದೆ.ಅದರೂ ಕೆಲವೆಡೆ ಕೊಳವೆ ಬಾವಿ ಗಳಲ್ಲಿ ನೀರು ಕಡಿಮೆ ಯಾಗಿದೆ ಇದರಿಂದಾಗಿ ನೀರಿನ ಸಮಸ್ಯೆಗಳು ಕಂಡು ಬಂದಿವೆ.
ಒಟ್ಟು ಜನಸಂಖ್ಯೆ 10,700, ಕುಟು ಂಬ ಗಳು 2,825. ಒಟ್ಟು 1274 .98 ಹೆಕ್ಟೇರ್ ವಿಸ್ತೀರ್ಣ ವಿದೆ. 7 ಓವರ್‌ಹೆಡ್ ಟ್ಯಾಂಕ್‌ಗಳು, 7 ಜಿಎಸ್‌ಎಲ್‌ಆರ್ ಟ್ಯಾಂಕ್‌ಗಳ ಮೂಲಕ ಗ್ರಾಮಕ್ಕೆ ನೀರು ಸರಬ ರಾಜು ಆಗು ತ್ತಿದೆ. ಗುರು ಪುರ ನದಿ ಗ್ರಾಮ ಪಂಚಾಯತ್ ವ್ಯಾಪ್ತಿ ಯಲ್ಲಿ ಹರಿ ಯುತ್ತಿದ್ದು, ಮಳ ವೂರು ವೆಂಟೆಡ್ ಡ್ಯಾಂ, 12 ಕೆರೆ ಗಳು, 28 ಕೊಳವೆ ಬಾವಿಗಳು, 8 ಬಾವಿಗಳು ನೀರಿನ ಸಂಪನ್ಮೂಲಗಳು..
ಹೊಸ ಕಿಂಡಿ ಅಣೆಕಟ್ಟು
ಮಳವೂರು ವೆಂಟೆಡ್ ಡ್ಯಾಂನಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ 11ಟ್ಯಾಂಕ್‌ಗಳಿಗೆ. ಎರಡು ದಿನಕ್ಕೊಮ್ಮೆ ಈ ನೀರು ಸರಬರಾಜು ಆಗುತ್ತಿದೆ. ಈ ಬಾರಿ ಅಡ್ಮ ಪ್ರದೇಶದಲ್ಲಿ ಹೊಸ ಕಿಂಡಿ ಅಣೆಕಟ್ಟು ಕಟ್ಟಿ, ಹಲಗೆ ಹಾಕಲಾಗಿದೆ. ತಾತ್ತಡಿ ಕೆರೆ ಅಭಿವೃದ್ಧಿಗೆ ಈಗಾಗಲೇ ಮನವಿ ಮಾಡಲಾಗಿದೆ.ಮಳವೂರು ಕೆರೆ ಅಭಿವೃದ್ಧಿಗೆ ಮುಡಾಕ್ಕೆ ಮನವಿ ಮಾಡಲಾಗಿದೆ. ಎಪ್ರಿಲ್, ಮೇ ತಿಂಗಳಲ್ಲಿ ಪೇಜಾವರ, ಪಡು³ ಪ್ರದೇಶದಲ್ಲಿ ನೀರಿನ ಸಮಸ್ಯೆ ಇದೆ. ಬಾವಿಯಲ್ಲಿ ಉಪ್ಪು ನೀರು ಬರುವುದರಿಂದ ತೊಂದರೆ ಆಗಿದೆ. ಅದಲ್ಲದೆ ಮಳವೂರು ವೆಂಟೆಡ್ ಡ್ಯಾಂನ ನೀರು ಈ ಪ್ರದೇಶಕ್ಕೆ ಇನ್ನೂ ಸರಬರಾಜು ಮಾಡಲಾಗಿಲ್ಲ.
ಹೊಸ ಕೊಳವೆ ಬಾವಿ ಯೋಜನೆಗೆ ಸಿದ್ಧತೆ
ಕರಂಬಾರು ಮಸೀದಿ ಬಳಿ,ಅಡ್ಮಗುಡ್ಡೆ ಪ್ರದೇಶದ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಇಲ್ಲಿ ಮಳವೂರು ವೆಂಟೆಡ್ ಡ್ಯಾಂನ ನೀರು ಸರಬರಾಜು ಮಾಡಲು ಟ್ಯಾಂಕ್‌ಗಳ ಸಮಸ್ಯೆ ಇದೆ. ಕರಂಬಾರು ಪಾಂಚಕೋಡಿಯಲ್ಲಿಯೂ ನೀರಿನ ಸಮಸ್ಯೆ ಇದೆ. ಟ್ಯಾಂಕ್, ಪೈಪ್ ಲೈನ್‌ಗಳಿಗೆ ಅನುದಾನ ಇಡಲಾಗಿದೆ. ಕಲ್ಲೋಡಿ ಪ್ರದೇಶದಲ್ಲಿ ನೀರಿನ ಪೈಪ್‌ಲೈನ್, ಟ್ಯಾಂಕ್ ಗಳು ಇಲ್ಲ. ಈ ಬಗ್ಗೆ ಜಿ. ಪಂ. ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ.
-ಗಣೇಶ್ ಅರ್ಬಿರಾ, ಅಧ್ಯಕ್ಷರು ಮಳವೂರು. ಗ್ರಾ.ಪಂ
ಮೂರು ಹೊಸ ಕಿಂಡಿ ಅಣೆಕಟ್ಟು ನಿರ್ಮಾಣ ಈಗ ನೀರಿನ ಸಮಸ್ಯೆ ಇಲ್ಲ.ಕೆಲವೆಡೆ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ.ಇದರಿಂದ ನೀರಿನ ಸಮಸ್ಯೆ ಬರಬಹುದು.ಜಿಲ್ಲಾಧಿಕಾರಿಯವರಿಗೆ ಮನವಿ ನೀಡಲು ನಿರ್ಧರಿಸಲಾಗಿದೆ.ಕೊಳವೆ ಬಾವಿ ಜಲಮರುಪೂರಣವನ್ನು ನರೇಗಾ ಯೋಜನೆಯಡಿಯಲ್ಲಿ ಮಾಡಲಾಗುತ್ತದೆ.
-ವೆಂಕಟರಮಣ ಪ್ರಕಾಶ್, ಪಿಡಿಒ ಮಳವೂರುಗ್ರಾ.ಪಂ.
ಸುಬ್ರಾಯ ನಾಯಕ್