Advertisement

ಅರಕಲಗೂಡಿನಲ್ಲಿ ನೀರಿಲ್ಲದೇ ಜನರ ಪರದಾಟ

12:15 PM May 29, 2019 | Team Udayavani |

ಅರಕಲಗೂಡು: ಪಟ್ಟಣಲ್ಲಿ ನೀರಿಗಾಗಿ ಹಾಹಾಕಾರವುಂಟಾಗಿದ್ದು, ಸಾರ್ವಜನಿಕರು ಟ್ಯಾಂಕರ್‌ ನೀರಿಗೆ ಬಕಪಕ್ಷಿಗಳಂತೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಸುಟ್ಟು ಹೋಗಿರುವ ಟೀಸಿ: ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಗೊರೂರು ನೀರು ಶುದ್ಧೀಕರಣ ಘಟಕದ ವಿದ್ಯುತ್‌ ಪರಿವರ್ತಕ ಸುಟ್ಟು ಹೋಗಿರುವ ಕಾರಣ ಕುಡಿಯುವ ನೀರನ್ನು ನೀಡಲಾಗುತ್ತಿಲ್ಲ, ಇದರಿಂದ ಪಟ್ಟಣದ ನಿವಾಸಿಗಳಿಗೆ ತೊಂದರೆಯಾಗಿದ್ದು, ನೀರಿಗಾಗಿ ಕ್ಯಾನ್‌ ಹಿಡಿದು ಅಕ್ಕ ಪಕ್ಕದ ಗ್ರಾಮಗಳಿಗೆ ತೆರಳಿ ಅಲ್ಲಿಯ ಶುದ್ಧ ಕುಡಿಯುವ ನೀರನ್ನು ಆಶ್ರಯಿಸಿದ್ದಾರೆ.

ಒಂದು ವಾರ ನೀರಿಲ್ಲ: ಪಟ್ಟಣದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ನೀರಿಗಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಟ್ಯಾಂಕರ್‌ನಲ್ಲಿ ಸರಬರಾಜು ಮಾಡುತ್ತಿರುವ ನೀರನ್ನು ಹಿಡಿಯಲು ವಾರ್ಡ್‌ಗಳಲ್ಲಿ ಮಹಿಳೆಯರ ಕಿತ್ತಾಟ ನಡೆಯುತ್ತಿದೆ. ಇಂತಹ ಸ್ಥಿತಿ ಸುಮಾರು 07-08 ವರ್ಷಗಳ ಹಿಂದೆ ಉಂಟಾಗಿದ್ದು ಬಿಟ್ಟರೆ ಇಲ್ಲಿಯವರೆಗೆ ಇಂತಹ ತೊಂದರೆ ಸಾರ್ವಜನಿಕರಿಗೆ ಎದುರಾಗಿರಲಿಲ್ಲ. ಈ ತೊಂದರೆ ಸುಮಾರು 7 ದಿವಸಗಳ ಕಾಲ ಇರುತ್ತದೆ ಎಂದು ಅಧಿಕಾರಿಗಳು ವಾಹನಗಳಲ್ಲಿ ಪ್ರಚಾರ ಮಾಡಿಸುತ್ತಿದ್ದಾರೆ.

ಸಾರ್ವಜನಿಕರ ಆಕ್ರೋಶ: ಜಿಲ್ಲಾಡಳಿತ ಕುಡಿಯುವ ನೀರಿಗೆ ತೊಂದರೆ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಿದೆ. ಇಂತದರಲ್ಲಿ ಪಟ್ಟಣದ ನೀರು ಸರಬರಾಜು ಘಟಕದ ವಿದ್ಯುತ್‌ ಟೀಸಿ ಬದಲಾಯಿಸಲು ವಾರ ಕಾಲಾವಕಾಶ ಬೇಕೆ? ಈ ಕೂಡಲೇ ಇತ್ತ ಗಮನ ನೀಡಿ ತಕ್ಷಣದಲ್ಲಿ ಕುಡಿಯುವ ನೀರಿನ ತೊಂದರೆ ನಿವಾರಿಸುವಂತೆ ಸಾರ್ವಜನಿಕರು ತಾಲೂಕಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next