Advertisement

ಏಕರೂಪ ವ್ಯಾಪ್ತಿಯಲ್ಲಿ ಬುಡಕಟ್ಟು ಸಮುದಾಯವಿಲ್ಲ

10:03 PM Jul 28, 2023 | Team Udayavani |

ನವದೆಹಲಿ: ಕೇಂದ್ರ ಸರ್ಕಾರ ತನ್ನ ಅತ್ಯಂತ ಮಹತ್ವಾಕಾಂಕ್ಷೆಯ ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ನಡುವೆ ಮೂಲಗಳು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದು, ಬುಡಕಟ್ಟು ಜನಾಂಗಗಳ ಆಚರಣೆಗಳನ್ನು ಏಕರೂಪದ ವ್ಯಾಪ್ತಿಗೆ ತರುವುದಿಲ್ಲ, ಹಾಗೆಯೇ ಲಿವ್‌ಇನ್‌ ಸಂಬಂಧಕ್ಕೂ ಕೈಹಾಕುವುದಿಲ್ಲ ಎನ್ನಲಾಗಿದೆ. ವಿಶೇಷವೆಂದರೆ ಮುಸ್ಲಿಮ್‌ ಮಹಿಳೆಯರು ಏಕರೂಪಕ್ಕೆ ವ್ಯಾಪಕ ಬೆಂಬಲ ನೀಡಿದ್ದಾರೆಂಬ ಮಾಹಿತಿಯೂ ಹೊರಬಿದ್ದಿದೆ.
ಪ್ರಸ್ತುತ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಈ ಬಗ್ಗೆ ಮಸೂದೆ ಬರಬಹುದು ಎಂದು ಊಹಿಸಲಾಗಿತ್ತು.

Advertisement

ಅದು ಸಾಧ್ಯವಿಲ್ಲವಾಗಿರುವುದರಿಂದ ಮುಂದಿನ ಅಧಿವೇಶನದಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ. ಏಕರೂಪ ಸಂಹಿತೆಯ ಸಂಬಂಧ ಕೇಂದ್ರ ಸರ್ಕಾರ ಇದುವರೆಗೆ 70 ಲಕ್ಷ ಸಲಹೆಗಳನ್ನು ಸ್ವೀಕರಿಸಿದೆ. ಇದರ ನಡುವೆ ಈ ಬಗ್ಗೆ ಅನಗತ್ಯವಾಗಿ ಗೊಂದಲಗಳನ್ನು ಹುಟ್ಟು ಹಾಕಲಾಗುತ್ತಿದೆ. ಲಿಂಗ ಸಮಾನತೆ ಮತ್ತು ಕೌಟುಂಬಿಕ ಸಾಮರಸ್ಯೆ ತರುವುದೇ ಇದರ ಉದ್ದೇಶ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸಂವಿಧಾನದ ವಿಧಿ 371 ಮತ್ತು ಶೆಡ್ನೂಲ್‌ 5, 6ರಡಿ ಬುಡಕಟ್ಟು ಜನಾಂಗಗಳಿಗೆ ಈಗಾಗಲೇ ರಕ್ಷಣೆ ನೀಡಲಾಗಿದೆ. ಹಾಗಾಗಿ ಅವರು ಏಕರೂಪದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಇನ್ನು ಲಿವ್‌ ಇನ್‌ ಸಂಬಂಧವನ್ನು ಈ ವ್ಯಾಪ್ತಿಗೆ ತರುವ ಸಂಭಾವ್ಯತೆಯಿಲ್ಲ, ಇದರಲ್ಲಿ ಬಹಳ ಕಾನೂನು ಸಮಸ್ಯೆಗಳು ಉದ್ಭವವಾಗುತ್ತವೆ ಎಂದು ಮೂಲಗಳು ಹೇಳಿವೆ.
ಮುಸ್ಲಿಮ್‌ ಮಹಿಳೆಯರ ಭಾರೀ ಬೆಂಬಲ: ಮುಸ್ಲಿಮ್‌ ಮಹಿಳೆಯರು ಬಹುಪತ್ನಿತ್ವದಿಂದ ಬಹಳ ತೊಂದರೆಗೊಳಗಾಗಿರುವುದರಿಂದ ಏಕರೂಪ ಸಂಹಿತೆಯನ್ನು ಬಯಸುತ್ತಿದ್ದಾರೆ. ಬಹುಪತ್ನಿತ್ವವನ್ನು ಅಕ್ರಮ ಎಂದು ಪರಿಗಣಿಸಲು, ಅದನ್ನು ಧಾರ್ಮಿಕ ಕ್ರಿಯಾವಿಧಿ ಎಂದು ಭಾವಿಸುವ ಬದಲು ಇಬ್ಬರು ವಯಸ್ಕರ ನಡುವಿನ ಒಪ್ಪಂದ ಎಂದು ಪರಿಗಣಿಸಲು ಸಲಹೆ ನೀಡಲಾಗಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next