Advertisement

ಪಠ್ಯಪುಸ್ತಕ ಇಲ್ಲದೇ ಪಿಯು ವಿದ್ಯಾರ್ಥಿಗಳ ಪರದಾಟ

11:19 AM Aug 09, 2017 | |

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ವ್ಯಾಪ್ತಿಯ ಕಾಲೇಜುಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿ ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸಿಕ್ಕಿಲ್ಲ.  ವಾಣಿಜ್ಯ ಹಾಗೂ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪಠ್ಯಪುಸ್ತಕಕ್ಕೆ ಬೇಡಿಕೆ ಹೆಚ್ಚಿದ್ದು, ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿಲ್ಲ. ವಾಣಿಜ್ಯ ವಿಭಾಗಕ್ಕೆ ಈ ವರ್ಷದಿಂದ ಎನ್‌ಸಿಇಆರ್‌ಟಿ ಪಠ್ಯವನ್ನು ಅಳವಡಿಸಿರುವುದರಿಂದ ಹೊಸ ಪಠ್ಯ ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆಯಾಗದೇ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕರಲ್ಲಿ ಗೊಂದಲ
ಸೃಷ್ಟಿಯಾಗಿದೆ. ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿ ಸೇರಿದಂತೆ ಭಾಷಾ ವಿಷಯದ ಪಠ್ಯಪುಸ್ತಕದ ಜತೆಗೆ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ ಕೆಲವು ವಿಷಯದ ಪಠ್ಯ ಪುಸ್ತಕ ವಿದ್ಯಾರ್ಥಿಗಳ ಕೈ ಸೇರಿಲ್ಲ. ಬೇಡಿಕೆಯಷ್ಟು ಪುಸ್ತಕ ಮಾರುಕಟ್ಟೆಗೆ ಬರುತ್ತಿಲ್ಲ.

Advertisement

ಮಾರುಕಟ್ಟೆಗೆ ಪುಸ್ತಕ ಬಂದ ಒಂದೆರಡು ದಿನದಲ್ಲಿ ಸಂಪೂರ್ಣ ಖಾಲಿಯಾಗಿರುತ್ತದೆ. ಮತ್ತೆ ಹತ್ತರಿಂದ ಹದಿನೈದು ದಿನ ಕಾಯಬೇಕಾದ ಪರಿಸ್ಥಿತಿ ಇದೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ಎನ್‌ಸಿಇಆರ್‌ಟಿ ಪಠ್ಯಕ್ರಮ ಇರುವುದರಿಂದ ಪಠ್ಯಪುಸ್ತಕ ಇಲ್ಲದೇ ಪಾಠ ಮಾಡಲು ಸಾಧ್ಯವಿಲ್ಲ ಎಂದು ಉಪನ್ಯಾಸಕರು ಕೈಚೆಲ್ಲಿದ್ದಾರೆ.

ವೆಬ್‌ಸೈಟ್‌ಲ್ಲಿ ಲಭ್ಯ
ಪಿಯುಸಿ ಪಠ್ಯಪುಸ್ತಕಗಳು ಇಲಾಖೆಯ ವೆಬ್‌ಸೈಟ್‌ //kar.puc.nic.in ನಲ್ಲಿ ಪಠ್ಯಪುಸ್ತಕಗಳು ಲಭ್ಯವಿದೆ. ಮುದ್ರಿತ ಪಠ್ಯಪುಸ್ತಕಗಳು ಸಿಗುವವರೆಗೆ ವೆಬ್‌ಸೈಟಲ್ಲಿ ಇರುವ ಪುಸ್ತಕಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಬಳಸಬಹುದು. ಜೊತೆಗೆ ಇಲಾಖೆಯ ವೆಬ್‌ಸೈಟಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಮುದ್ರಿಸಲ್ಪಟ್ಟ ಪಿಯುಸಿ ಪಠ್ಯಪುಸ್ತಕ ಲಭ್ಯವಿರುವ ಅಂಗಡಿಯ ವಿಳಾಸದ ಜತೆಗೆ ದೂರವಾಣಿ ಸಂಖ್ಯೆ ನಮೂದಿಸಲಾಗಿದೆ. 
ವಿಳಾಸ ನೋಡಿಕೊಂಡು ಹೋಗಿ ತೆಗೆದುಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next