Advertisement

ದೂರದೂರಿನಲ್ಲಿ ಪರೀಕ್ಷಾ ಕೇಂದ್ರ ಬೇಡ: ಮಾನವ ಹಕ್ಕು ಆಯೋಗ

08:24 PM Jul 17, 2019 | Team Udayavani |

ಕಾಸರಗೋಡು: ಪ್ರೊಬೇಷನ್‌ ಅಧಿಕಾರಿ ಶ್ರೇಣಿ ಎರಡು ಹುದ್ದೆಗೆ ಲೋಕ ಸೇವಾ ಆಯೋಗ ನಡೆಸುತ್ತಿರುವ ಪರೀಕ್ಷೆಗೆ ಜಿಲ್ಲೆಯ ಪರೀûಾರ್ಥಿಗಳಿಗೆ ತೃಶ್ಶೂರು, ಪಾಲಕ್ಕಾಡ್‌ಗಳಲ್ಲಿ ಪರೀಕ್ಷೆ ಕೇಂದ್ರ ನಿಗದಿ ಪಡಿಸಿರುವ ವಿಚಾರದಲ್ಲಿ ರಾಜ್ಯ ಮಾನವ ಹಕ್ಕು ಆಯೋಗ ಸ್ಪಷ್ಟೀಕರಣ ಬಯಸಿದೆ.

Advertisement

ಜಿಲ್ಲೆಯಲ್ಲಿಯಾ ಸಮೀಪದ ಜಿಲ್ಲೆಗಳಲ್ಲಿ ಪರೀûಾ ಕೇಂದ್ರಗಳನ್ನು ನಿಗದಿಪಡಿಸುವುದು ಬಿಟ್ಟು, ಬಹಳ ದೂರದಲ್ಲಿ ಕೇಂದ್ರ ಒದಗಿಸಿರುವುದು ಉದ್ಯೋಗಾ ರ್ಥಿಗಳ ಸಂಕಷ್ಟಕ್ಕೆ ಕಾರಣವಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಾನವಹಕ್ಕು ಆಯೋಗ ಸದಸ್ಯ ಕೆ. ಮೋಹನ ಕುಮಾರ್‌ ಪಿ.ಎಸ್‌.ಸಿ. ಕಾರ್ಯದರ್ಶಿ ಅವರಲ್ಲಿ ಈ ಸಂಬಂಧ ಸ್ಪಷ್ಟೀಕರಣ ಆಗ್ರಹಿಸಿದ್ದಾರೆ.

ಕಾಸರಗೋಡು ಸರಕಾರಿ ಅತಿಥಿ ಗೃಹದಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಕೆ. ಮೋಹನ್‌ ಕುಮಾರ್‌ ಈ ವಿಚಾರ ಪ್ರಕಟಿಸಿದರು. ಈ ರೀತಿ ಪರೀûಾ ಕೇಂದ್ರಗಳನ್ನು ದೂರದೂರುಗಳಲ್ಲಿ ನಿಗದಿ ಪಡಿಸಲಾಗುತ್ತಿರುವ ಪರಿಣಾಮ ಜಿಲ್ಲೆಯಿಂದ ಸರಕಾರಿ ಪರೀಕ್ಷೆಗಳಿಗೆ ಹಾಜರಾಗುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದು ಉದ್ಯೋಗಾರ್ಥಿಗಳ ಉತ್ಸಾಹ ಕಡಿಮೆಗೊಳಿಸಿ ದಂತಾಗುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪುಲ್ಲೂರು-ಪೆರಿಯ ಗ್ರಾ. ಪಂ. ಮಂಜೂರು ಮಾಡಿರುವ ಬಸ್‌ ಮಹಾಲಕ್ಷ್ಮೀಪುರಕ್ಕೆ ಸೂಕ್ತ ಹಾದಿ ಯಿದ್ದೂ. ಅಲ್ಲಿಯ ವರೆಗೆ ಬಾರದೆ ಎರಡು ಕಿ.ಮೀ. ದೂರದ ಚಟ್ಟಂಚಾಲ್‌ವರೆಗೆ ಮಾತ್ರ ಬಂದು ತೆರಳುವುದು ಸಮಸ್ಯೆಯಾಗಿದೆ. ಜತೆಗೆ ಆರ್ಥಿಕವಾಗಿ ಬಡವಳಾದ ತಾವು ಆಟೋ ಸಹಿತ ವಾಹನದಲ್ಲಿ ಪ್ರತಿದಿನ ಚಟ್ಟಂಚಾಲ್‌ವರೆಗೆ ತೆರಳುವುದು ಕಷ್ಟಸಾಧ್ಯ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಘಟನೆ ಕಲಿಕೆಯಲ್ಲಿ ಆಸಕ್ತಿ ಹೊಂದಿರುವ ಪುತ್ರನಿಗೆ ಮಾನಸಿಕ ತೊಳಲಾಟಕ್ಕೆ ಕಾರಣವಾಗಿದೆ ಎಂದು ದೂರುದಾತೆ ತಿಳಿಸಿದ್ದಾರೆ. ಅಹವಾಲು ಸ್ವೀಕಾರ ಸಭೆಯಲ್ಲಿ ಒಟ್ಟು 39 ದೂರುಗಳ ಪರಿಶೀಲನೆ ನಡೆಸಲಾಗಿದ್ದು, 11 ಅಹವಾಲುಗಳಿಗೆ ತೀರ್ಪು ನೀಡಲಾಗಿದೆ. ಮುಂದಿನ ಸಭೆ ಆ. 8ರಂದು ನಡೆಯಲಿದೆ ಎಂದು ಅ ಧಿಕಾರಿಗಳು ತಿಳಿಸಿದರು.

ಕಾನೂನಿನ ತಾಂತ್ರಿಕತೆ ತಳಹದಿಯಾದರೆ ಸಾಲದು
ಕಾನೂನಿನ ತಾಂತ್ರಿಕತೆಯನ್ನು ಮಾತ್ರ ತಳಹದಿ ಯಾಗಿರಿಸಿ ಅರ್ಹರಿಗೆ ಮುಂಗಡಪಟ್ಟಿಯ ಪಡಿತರ ಚೀಟಿ ನಿಷೇ ಧಿಸುವುದು ಸರಿಯಲ್ಲ ಎಂದು ರಾಜ್ಯ ಮಾನವಹಕ್ಕು ಆಯೋಗದ ಸದಸ್ಯ ಎಂ.ಮೋಹನ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ವಿಶೇಷಚೇತನರಾದ ಇಬ್ಬರು ಹೆಣ್ಣು ಮಕ್ಕಳು, ರೋಗಿಯಾಗಿರುವ ಪತಿ ಯನ್ನು ಹೊಂದಿರುವ ಕಾಂಞಂಗಾಡ್‌ ನಿವಾಸಿ ಮಹಿಳೆ ಯೊಬ್ಬರು ಈ ಸಂಬಂಧ ನೀಡಿರುವ ದೂರಿನ ಪರಿಶೀಲನೆ ಅವರು ನಡೆಸಿದರು. ಮನೆಯ ವಿಸ್ತೀರ್ಣ ಒಂದು ಸಾವಿರ ಚದರ ಅಡಿಗಿಂತ ಅ ಧಿಕ ಇರುವ ಕಾರಣ ಬಿ.ಪಿ.ಎಲ್‌. ಪಡಿತರ ಚೀಟಿ ನಿಷೇ ಧಿಸಲಾಗಿದೆ ಎಂದು ಮಹಿಳೆ ದೂರು ನೀಡಿದ್ದರು.

ಸಾಮಾಜಿಕ ನ್ಯಾಯ ಜಿಲ್ಲಾಧಿಕಾರಿ ನೀಡಿರುವ ವರದಿ ಪ್ರಕಾರ ಈ ಮಹಿಳೆಯ ಮನೆಮಂದಿ ಬಿ.ಪಿ.ಎಲ್‌. ಪಟ್ಟಿಗೆ ಅರ್ಹರಾಗಿರುವುದು ಖಚಿತಗೊಂಡಿದೆ. ಸಾಮಾಜಿಕ ಹಿನ್ನೆಲೆಯನ್ನೂ ಗಮನಿಸಿ ಸಂಬಂಧಪಟ್ಟ ಸಿಬಂದಿ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಮೋಹನ್‌ ಕುಮಾರ್‌ ತಿಳಿಸಿದರು.

ಬಸ್‌ ಬರುವುದಿಲ್ಲ
ಬಡ್ಸ್‌ ಶಾಲೆಯಲ್ಲಿ ಕಲಿಯುತ್ತಿರುವ ವಿಶೇಷ ಚೇತನ ಪುತ್ರ ಪಂಚಾಯತ್‌ ಮಂಜೂರು ಮಾಡಿರುವ ಬಸ್‌ ಮನೆ ವರೆಗೆ ಆಗಮಿಸದೇ ಇರುವ ಪರಿಣಾಮ ಶಾಲೆಗೆ ತೆರಳದಂಥ ದುಃಸ್ಥಿತಿ ನಿರ್ಮಾಣವಾಗಿದೆ ಎಂದು ತಾಯಿಯೊಬ್ಬರು ದೂರು ನೀಡಿದ್ದು, ಈ ಸಂಬಂಧ ವರದಿ ಸಲ್ಲಿಸುವಂತೆ ಆಯೋಗವು ಜಿಲ್ಲಾಧಿಕಾರಿ ಮತ್ತು ಗ್ರಾಮ ಪಂಚಾಯತ್‌ಗೆ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next