ಬಾಗಲಕೋಟೆ: ಕ್ಷೇತ್ರದ ಜನರು ಗದ್ದಿಗೌಡರನ್ನು ಮೂರು ಬಾರಿ ಆಯ್ಕೆ ಮಾಡಿ ಸಂಸತ್‌ಗೆ ಕಳುಹಿಸಿದ್ದಾರೆ. ಅವರು
ಲೋಕಸಭಾ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ. ಮಹತ್ವದಾಗಿ ನರಗುಂದದ ರೈತರ ಹೋರಾಟಕ್ಕೆ ಬೆಂಬಲಿಸಿದ್ದಾರಾ ! ಅವರ ನೋವು ನಲಿವಿಗೆ ಭಾಗಿಗಳಾಗಿದ್ದಾರೆ ಎಂಬುದನ್ನು ಎಲ್ಲರೂ ಅರಿತುಕೊಂಡು ಮತದಾನ ಮಾಡಬೇಕು ಎಂದು ಕಾಂಗ್ರೆಸ್ -ಜೆಡಿಎಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಹೇಳಿದರು.
ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ
ಅವರು ಮಾತನಾಡಿದರು.
ಸಂಸದರು ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಮೋದಿ ನೋಡಿ ವೋಟ್ ಹಾಕಿ ಎಂದು ಐದು ವರ್ಷಗಳ ನಂತರ ಮತ
ಕೇಳಲು ಬರುತ್ತಿದ್ದಾರೆ. ಮತದಾರರು ಮುರ್ಖರಲ್ಲ. ಮೋದಿಯವರು ನೋಡಿ ವೋಟ್ ಹಾಕಿದರೆ ಅಭಿವೃದ್ಧಿ ಆಗಲಿಲ್ಲ. ಜನರು ಜಾಗೃತರಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಜನರ ಬದಲಾವಣೆಗೆ ಉತ್ತಮರನ್ನು ಗುರುತಿಸಿ
ಆಯ್ಕೆ ಮಾಡಬೇಕು. ನಿಮ್ಮ ಪರವಾದ ದನಿಎತ್ತುವೆ. ಎಂಟು ಕ್ಷೇತ್ರ ಬಂದರೂ ನರಗುಂದ ಸಮಸ್ಯೆಗಳಿಗೆ ಪರಿಹಾರಕ್ಕೆ ಕಂಕಣಬದ್ದರಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ, ಬಿ.ಆರ್. ಯಾವಗಲ್, ಮುಖಂಡರಾದ ನವೀನ ಶೆಟ್ಟಿ, ಪವನ
ಯಾವಗಲ್, ವಿಠ್ಠಲ ಸಿಂಧೆ, ರಾಜು ಕಲಾಲ ಪಾಲ್ಗೊಂಡಿದ್ದರು.
ನಾನು ಈ ಭಾಗದ ಶಾಸಕನಾಗಿದ್ದಾಗ, ಮಹದಾಯಿ ವಿಚಾರವನ್ನು ನರೇಂದ್ರ ಮೋದಿ ಅವರನ್ನು ಬಿಜೆಪಿ ಶಾಸಕರು, ಸಂಸದರೊಂದಿಗೆ ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಒತ್ತಾಯಿಸಿದ್ದೇವು. ಆದರೆ, ಮೋದಿಯವರು ಗಮನಹರಿಸಲಿಲ್ಲ. ಅಲ್ಲದೆ ಸಂಸದರು ರೈತರ ಹೋರಾಟ ನಡೆಸಲಿಲ್ಲ. ಇಂತವರಿಂದ ಕ್ಷೇತ್ರ ಅಭಿವೃದ್ಧಿ ಸಾಧ್ಯವಿಲ್ಲ. ಆದ್ದರಿಂದ ವೀಣಾ ಕಾಶಪ್ಪನವರಗೆ ಮತ ನೀಡಬೇಕು.
ಬಿ.ಆರ್. ಯಾವಗಲ್, ಮಾಜಿ ಶಾಸಕ