Advertisement
ಗುಡಿಬಂಡೆ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆ, ಬಾಗೇಪಲ್ಲಿ ತಾಲೂಕಿನಮೊರಾರ್ಜಿ ಪದವಿ ಪೂರ್ವ ವಸತಿ ಕಾಲೇಜಿನಲ್ಲಿತೆರೆದಿರುವ ಕೋವಿಡ್ ಕೇರ್ ಕೇಂದ್ರಗಳಿಗೆ ಮತ್ತುಶಿಡ್ಲಘಟ್ಟ, ಬಾಗೇಪಲ್ಲಿ, ಗುಡಿಬಂಡೆ ತಾಲೂಕುಕೇಂದ್ರಗಳ ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿ,ಬಾಗೇಪಲ್ಲಿ ಆಸ್ಪತ್ರೆಯ 13, ಕೋವಿಡ್ ಕೇಂದ್ರದ 5,ಶಿಡ್ಲಘಟ್ಟ ಆಸ್ಪತ್ರೆಯ 13, ಗುಡಿಬಂಡೆ ಆಸ್ಪತ್ರೆಯ 4ಕೋವಿಡ್ ಸೋಂಕಿತರೊಂದಿಗೆ ವಿಡಿಯೋ ಸಂವಾದ ನಡೆಸಿ ಆರೋಗ್ಯ, ಯೋಗಕ್ಷೇಮ, ಆಸ್ಪತ್ರೆಯಲ್ಲಿ ಅವರಿಗೆ ನೀಡುತ್ತಿರುವ ಆಹಾರದ ಗುಣಮಟ್ಟ, ನೀರು, ಔಷಧಿ ಮತ್ತು ಶುಚಿತ್ವದ ಬಗ್ಗೆ ವಿಚಾರಿಸಿದರು.
Related Articles
Advertisement
ಡಾ.ಕಿಶನ್, ಡಾ.ವಿಜಯಲಕ್ಷ್ಮೀ , ಗುಡಿಬಂಡೆ, ಶಿಡ್ಲಘಟ್ಟ, ಬಾಗೇಪಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ಕನಿಷ 10 ಜನರಿಗೆ ದಂಡ ವಿಧಿಸಿ :
ಹಳ್ಳಿಗಳಲ್ಲಿ ಜನರು ಮಾಸ್ಕ್ ಹಾಕುತ್ತಿಲ್ಲ, ಅವರಿಗೆ ಕಡ್ಡಾಯವಾಗಿ ದಂಡ ಹಾಕಬೇಕು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿದಿನ ಕನಿಷ್ಠ 10 ಜನರಿಗೆ ದಂಡ ವಿ ಧಿಸಬೇಕು, ಪ್ರತಿ ನಗರಪ್ರದೇಶಗಳಲ್ಲಿ ಪ್ರತಿ ವಾರ್ಡ್, ಪ್ರತಿ ಗ್ರಾಮಕ್ಕೆ ಒಂದು ಟಾಸ್ಕ್ಫೋರ್ಸ್ ಸಮಿತಿ, ನೋಡಲ್ ಅ ಧಿಕಾರಿ ನೇಮಿಸಲಾಗಿದೆ. ಈಟಾಸ್ಕ್ ಫೋರ್ಸ್ ಸಮಿತಿ ಯೋಜನೆ ರೂಪಿಸಿಕೊಂಡು ಪ್ರತಿಮನೆಗೆ ಭೇಟಿ ನೀಡಿ ಎಷ್ಟು ಜನರಿಗೆ ಲಸಿಕೆ ಹಾಕಲಾಗಿದೆ, ಕೋವಿಡ್ ಕೇಸು ಎಷ್ಟು, ಸಕ್ರಿಯ ಎಷ್ಟು ಎಂಬ ಮಾಹಿತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಲತಾ ಹೇಳಿದರು.
ಕೋವಿಡ್ ಸೋಂಕು ತಗುಲಿದವರ ಪ್ರಥಮ, ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಿ ಹೋಂ ಕೊರಟೈನ್‌ನಲ್ಲಿ ಇರುವಂತೆ
ನೋಡಿಕೊಳ್ಳಬೇಕು. ಅದಕ್ಕಾಗಿ ಪ್ರತ್ಯೇಕ ಹೋಂ ಐಸೋಲೇಷನ್ ತಂಡವನ್ನು ರಚಿಸಿ ಪ್ರಥಮ, ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ವಹಿಸಬೇಕು. ಆಶಾ, ಅಂಗನವಾಡಿಕಾರ್ಯಕರ್ತರು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮ ಸಹಾಯಕರು, ಸಿಬ್ಬಂದಿ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಣ ಕ್ರಮ ಜರುಗಿಸಬೇಕು ಎಂದರು.
ಹೋಂ ಕೊರಂಟೈನ್ ಇರಲು ಇಚ್ಛಿಸದವರ ಮೇಲೆ ಪ್ರಕರಣ :
ಲಸಿಕೆ ಜೊತೆಗೆ ಗಂಟಲು ದ್ರವ ಪರೀಕ್ಷೆಗೆ ಹೆಚ್ಚೆಚ್ಚು ಜನರನ್ನು ಒಳಪಡಿಸಬೇಕು,ಯಾವುದೇ ಕಾರಣಕ್ಕೂ ಕೋವಿಡ್ ಸಾವು ಸಂಭವಿಸದಂತೆ ಮುನ್ನೆಚ್ಚರಿಕಾಕ್ರಮಗಳನ್ನು ವಹಿಸಬೇಕು, ಕೋವಿಡ್‌ಸೋಂಕಿತರ ಪ್ರಾಥಮಿಕ ಸಂಪರ್ಕಿತರುಹೋಂಕ್ವಾರಟೈನ್‌ನಲ್ಲಿ ಇರಲು ವಿರೋಧಿ ಸಿದರೆ ಅಂತವರ ಮೇಲೆ ಪ್ರಕರಣ ದಾಖಲಿಸಬೇಕು. ಅವರೆಲ್ಲರೂಪ್ರತ್ಯೇಕವಾಗಿ ವಾಸಿಸುವಂತೆ ನೋಡಿಕೊಳ್ಳಬೇಕು ಎಂದು ಬಾಗೇಪಲ್ಲಿ ತಾಲೂಕು ಕೋವಿಡ್ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲತಾ ಸೂಚಿಸಿದರು.