Advertisement

ಜಿಲ್ಲೆಯಲ್ಲಿ ರೆಮಿಡಿಸಿವರ್‌, ಆಮ್ಲಜನಕ ಕೊರತೆ ಇಲ್ಲ

07:21 PM Apr 20, 2021 | Team Udayavani |

ರಾಮನಗರ: ಕೋವಿಡ್ ಸೋಂಕಿತರ ಚಿಕಿತ್ಸೆಗೆ ರೆಮಿಡಿಸಿವರ್‌ ಔಷಧ ಮತ್ತು ಆಮ್ಲಜನಕ ಜಿಲ್ಲೆಯಲ್ಲಿ ಲಭ್ಯವಿದ್ದು, ಯಾವ ತೊಂದರೆಯೂ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್‌ ತಿಳಿಸಿದರು.

Advertisement

ನಗರದಲ್ಲಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 567 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿ ವಿಟಿ ಸರಾಸರಿ ಶೇ.3.9 ಇದೆ. ಕಂದಾಯ ಭವನದ ಕೋವಿಡ್‌ ಆಸ್ಪತ್ರೆಯಲ್ಲಿ 153 ಮಂದಿ, ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ 26, ಲಕ್ಷಣ ರಹಿತ 312 ರೋಗಿ ಗಳಿಗೆ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಚಿಕಿತ್ಸೆ ದೊರೆಯುತ್ತಿದೆ ಎಂದು ವಿವರಿಸಿದರು.

ಸ್ವಯಂ ಪ್ರೇರಿತರಾಗಿ ಪರೀಕ್ಷೆಗೆ ಮನವಿ: ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ ಪಾಸಿಟಿವ್‌ ಬಂದವರಿಗೆ ಹೋಮ್  ಕ್ವಾರಂಟೈನ್‌ಗೆ ಅವಕಾಶ ನೀಡಿಲ್ಲ, ಮುಂದಿನ ದಿನಗಳಲ್ಲಿ ಪ್ರಕರಣ ಹೆಚ್ಚದಲ್ಲಿ ಅವಕಾಶ ನೀಡಲಾಗುವುದು. ಜಿಲ್ಲೆಯಲ್ಲಿ ಶೇ.93 ರೋಗಿಗಳು ಗುಣಮುಖರಾಗುತ್ತಿದ್ದಾರೆ ಎಂದು ಹೇಳಿದರು.

ನಿಯಮ ಪಾಲಿಸದಿದ್ದರೆ ಅಂಗಡಿಗೆ ಬೀಗ: ಜೀವ ಮತ್ತು ಜೀವನೋಪಾಯ ಕೂಡ ಮುಖ್ಯ ಎಂದುಸರ್ಕಾರ ಅಂಗಡಿ ಮುಂಗಟ್ಟು, ವಾಣಿಜ್ಯ ಚಟುವಟಿಕೆ ಗಳಿಗೆ ಅವಕಾಶ ನೀಡಿದೆ. ಆದರೆ, ಮಾಲಿಕರುಕೋವಿಡ್‌ ನಿಯಮಾವಳಿ ಪಾಲಿಸಬೇಕು. ಇಲ್ಲದಿದ್ರೆ ಬೀಗಮುದ್ರೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಮಾಸ್ಕ್ ಧರಿಸದವರಿಂದ 11 ಲಕ್ಷ ವಸೂಲಿ: ಏ.1ರಿಂದ 18 ರವರೆಗೆ ಜಿಲ್ಲೆಯಲ್ಲಿ ಮಾಸ್ಕ್ ಧರಿಸದೆ ಇರುವ 11,863 ಜನರಿಂದ 11,86,300 ರೂ.ದಂಡ ವಸೂಲಿ ಮಾಡಲಾಗಿದೆ. ಕೋವಿಡ್‌ ಆರಂಭವಾದಾಗಿನಿಂದ ಈವರೆಗೆ ಒಟ್ಟು 57,04,850 ರೂ. ದಂಡ ವಸೂಲಿ ಮಾಡಲಾಗಿದೆ ಎಂದರು.

Advertisement

ಲಸಿಕೆ ಶೇ.45 ಸಾಧನೆ: ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ 1,37,971 ನಾಗರಿಕರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಶೇ.45 ಗುರಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ 3 ದಿನಗಳಿಗೆ ಆಗುವಷ್ಟು 1,9000 ಡೋಸ್‌ ಲಸಿಕೆ ಲಭ್ಯವಿದೆ. ಬೇಡಿಕೆಗೆ ಅನುಗುಣವಾಗಿ ಕೇಂದ್ರಕಚೇರಿಯಿಂದ ಲಸಿಕೆ ಪಡೆಯಲಾಗುವುದು. ಇದ ರಿಂದ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂದು ವಿವರಿಸಿದರು. ಜಿಪಂ ಸಿಇಒ ಇಕ್ರಂಮಾತನಾಡಿ, ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಸ್ವತ್ಛತೆ ಹಾಗೂ ಕಸ ವಿಲೇವಾರಿಗೆ ಕ್ರಮ ವಹಿಸಲಾಗುವುದು ಎಂದರು. ಗೋಷ್ಠಿಯಲ್ಲಿ ಎಸ್ಪಿ ಗಿರೀಶ್‌, ಎಡೀಸಿಜವರೇ ಗೌಡ, ಡಿಎಚ್‌ಒ ಡಾ.ನಿರಂಜನ್‌, ಆರ್‌.ಸಿ. ಎಚ್‌ ಅಧಿಕಾರಿ ಡಾ.ಪದ್ಮಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next