Advertisement
ಕೋವಿಡ್ ನಿರ್ವಹಣೆ ವ್ಯವಸ್ಥೆ ಪರಿಶೀಲನೆಗಾಗಿನಗರಕ್ಕೆ ಭೇಟಿ ನೀಡಿದ್ದ ಅವರು, ಸುದ್ದಿಗಾರರೊಂದಿಗೆಮಾತನಾಡಿದರು. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇದೆ ಎಂದು ಸಂಸದಡಿ.ಕೆ.ಸುರೇಶ್‌ರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಹೀಗಾಗಿ ಆಕ್ಸಿಜನ್‌ಬೆಡ್ ಅಳವಡಿಸಲು ಜಿಲ್ಲಾಡಳಿತ ಮುಂದಾಗಿದೆ ಎಂದರು.
Related Articles
Advertisement
ಗ್ರಾಮೀಣ ಪ್ರದೇಶಗಳಲ್ಲಿ ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ವೈದ್ಯಕೀಯ ಉಪಚಾರಕ್ಕೆ ವ್ಯವಸ್ಥೆನಡೆಯಲಿದೆ ಎಂದರು.
ಸ್ವಾಬ್ ಪರೀಕ್ಷೆ ಕಡಿಮೆಯಾಗಿಲ್ಲ:ಜಿಲ್ಲೆಯಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಕಡಿಮೆ ಮಾಡಿಲ್ಲ. ಸರಾಸರಿ ದಿನವೊಂದಕ್ಕೆ1500 ಪರೀಕ್ಷೆ ನಡೆಯುತ್ತಿದೆ. ಅಲ್ಲದೆ ಸೋಂಕು ಲಕ್ಷಣ ಉಳ್ಳವರಿಗೆ ತಕ್ಷಣ ರ್ಯಾಪಿಡ್ ಆಂಟಿಜನ್ ಟೆಸ್ಟ್ ಅನ್ನುಶೇ.30ಕ್ಕೇರಿಸಲು ಸೂಚಿಸಲಾಗಿದೆ. ಕೋವಿಡ್ ಸೋಂಕಿಗೆ ಬೇಕಾದ ಚಿಕಿತ್ಸೆ,ಔಷಧ ಮುಂತಾದ ಎಲ್ಲಾ ಸವಲತ್ತು ಒದಗಿಸಲಾಗುವುದೆಂದರು. ಸಚಿವರೊಂದಿಗೆ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಜಿಪಂ ಸಿಇಒಇಕ್ರಂ, ಡಿಎಚ್‌ಒ ಡಾ.ನಿರಂಜನ್,ಆರ್‌ಸಿಎಚ್ ಅಧಿಕಾರಿ ಡಾ.ಪದ್ಮಾ, ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುರುಳೀ ಧರ್‌ಮತ್ತಿತರರಿದ್ದರು.