Advertisement
ನಾಡ: ತ್ರಿಕೋನ ಸ್ಪರ್ಧೆನಾಡಗುಡ್ಡೆಯಂಗಡಿಯಿಂದ ಸೇನಾಪುರ ಗ್ರಾಮ ಬೇರ್ಪಟ್ಟಿದ್ದು, ಇದರಿಂದ 25 ಸದಸ್ಯ ಬಲದ ಪಂ.ನಲ್ಲಿ ಈಗ 19 ಸದಸ್ಯ ಸ್ಥಾನಗಳಷ್ಟೇ ಉಳಿದಿವೆ. 4 ವಾರ್ಡ್‌ಗಳಿವೆ. ಕಳೆದ ಬಾರಿ 13ರಲ್ಲಿ ಕಾಂಗ್ರೆಸ್, 8 ರಲ್ಲಿ ಬಿಜೆಪಿ ಹಾಗೂ 4ರಲ್ಲಿ ಕಮ್ಯೂನಿಸ್ಟ್ ಬೆಂಬಲಿತರು ಗೆದ್ದಿದ್ದರು. ಈ ಬಾರಿಯೂ ಹೆಚ್ಚಿನ ಕಡೆಗಳಲ್ಲಿ ಕಮ್ಯೂನಿಸ್ಟ್ ಪಕ್ಷದ ಬೆಂಬಲಿತರಿದ್ದಾರೆ. ಹಾಗಾಗಿ ತ್ರಿಕೋನ ಸ್ಪರ್ಧೆಯೂ ಆಗಬಹುದು. ಬಿಜೆಪಿಗೆ ಬಂಡಾಯದ ಬಿಸಿ ತಟ್ಟುವಂತಿದೆ. ಕೆಲವರು ಕಾಂಗ್ರೆಸ್‌ನತ್ತ ಮುಖ ಹಾಕಿ ಕುಳಿತಿ ದ್ದಾರೆ. ಪ್ರಮುಖ ರಸ್ತೆಗಳು ಹದಗೆಟ್ಟು ದುರಸ್ತಿಯಾಗದಿರುವ ಕಾರಣ ಗ್ರಾಮಸ್ಥರಲ್ಲಿ ಅಸಮಾಧಾನ ಕಂಡು ಬರುತ್ತಿದೆ.
ಕಾಲ್ತೊಡು ಗ್ರಾ.ಪಂ. ವ್ಯಾಪ್ತಿ ಯಲ್ಲಿ 5 ವಾರ್ಡ್‌ಗಳಿದ್ದು, 13 ಸದಸ್ಯ ಸ್ಥಾನಗಳಿವೆ. ಕಳೆದ ಬಾರಿ ಇಲ್ಲಿ 11 ರಲ್ಲಿ ಕಾಂಗ್ರೆಸ್ ಹಾಗೂ ಇಬ್ಬರು ಬಿಜೆಪಿ ಬೆಂಬಲಿತರು ಚುನಾಯಿತರಾಗಿದ್ದರು. ಈ ಬಾರಿ ಕಾಂಗ್ರೆಸ್ ಅಧಿಕಾರವನ್ನು ಉಳಿಸಲು ಕಾರ್ಯತಂತ್ರ ರೂಪಿಸಿದೆ. ಬಿಜೆಪಿ ಅದರ ವಿರುದ್ಧ ರಣತಂತ್ರ ಹೆಣೆಯುತ್ತಿದೆ. ತಾಲೂಕು ಕೇಂದ್ರವಾದ ಬೈಂದೂರಿನಿಂದ ಕಾಲೊ¤àಡಿಗೆ ನೇರ ಬಸ್ ಸಂಪರ್ಕವಿಲ್ಲ. ಗ್ರಾಮೀಣ ರಸ್ತೆಗಳು ಹಾಳಾಗಿವೆ. ಡೀಮ್ಡ್ ಫಾರೆಸ್ಟ್‌ನಿಂದ ಹಕ್ಕುಪತ್ರ ಸಿಗುತ್ತಿಲ್ಲ. ಹೇರೂರು: ಸಮಸ್ಯೆ- ಸಂಕಷ್ಟ
ಹೇರೂರು ಗ್ರಾ.ಪಂ. ವ್ಯಾಪ್ತಿಯಲ್ಲಿ 5 ವಾರ್ಡ್‌ಗಳಿದ್ದು, 13 ಸದಸ್ಯ ಸ್ಥಾನಗಳಿವೆ. ಕಳೆದ ಬಾರಿ 9 ರಲ್ಲಿ ಕಾಂಗ್ರೆಸ್ ಹಾಗೂ 4 ರಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿದ್ದರು. ಈ ಬಾರಿಯೂ ಈ ಎರಡು ಪಕ್ಷಗಳ ಬೆಂಬಲಿತರ ಮಧ್ಯೆಯೇ ಪೈಪೋಟಿ ಇದ್ದಂತಿದೆ. ಹೇರೂರು ಗ್ರಾಮದ ಯರುಕೋಣೆಯಲ್ಲಿನ ಅಂಗನವಾಡಿ ಕಟ್ಟಡ ಬಿದ್ದು, 15 ವರ್ಷಗಳಾಗಿವೆ. ಮನವಿ ಸಲ್ಲಿಸಿದರೂ ಪುನರ್ ನಿರ್ಮಾಣಗೊಂಡಿಲ್ಲ. ಈ ಅಂಗನವಾಡಿ ಕೇಂದ್ರವನ್ನು ಪೇಟೆಯಿಂದ ಸುಮಾರು 4 ಕಿ.ಮೀ. ದೂರದ ಆಲಗದ್ದೆ ಕೇರಿಗೆ ಸ್ಥಳಾಂತರಿಸಲಾಗಿದೆ. ಈ ಸಮಸ್ಯೆ ಬಗೆಹರಿಯಬೇಕು. ಉಳಿದಂತೆ ರಸ್ತೆ ಸಮಸ್ಯೆ ಇದ್ದದ್ದೆ.
Related Articles
ಕೆರ್ಗಾಲು ಹಾಗೂ ನಂದನವನ ಗ್ರಾಮಗಳನ್ನೊಳಗೊಂಡ ಗ್ರಾ.ಪಂಚಾಯತೇ ಕೆರ್ಗಾಲು. ಇಲ್ಲಿ 4 ವಾರ್ಡ್‌ಗಳಿದ್ದು, 12 ಸದಸ್ಯ ಸ್ಥಾನಗಳಿವೆ. 2015ರ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಬೆಂಬಲಿತರು ಎಲ್ಲವನ್ನೂ ಗೆದ್ದಿದ್ದರು. ಈ ಬಾರಿಯೂ ಅದೇ ಹುಮ್ಮಸ್ಸು ಕಾಂಗ್ರೆಸ್‌ಗೆ. ಆದರೆ ಬಿಜೆಪಿಯೂ ಚೆಕ್‌ವೆುàಟ್ ಕೊಡಲು ಸಿದ್ಧವಾಗುತ್ತಿದೆ. ಕಳೆದ ಬಾರಿ ಪಕ್ಷೇತರರಾಗಿ ಗೆದ್ದು, ಬಳಿಕ ಕಾಂಗ್ರೆಸ್ ಬೆಂಬಲಿಸಿದವರೊಬ್ಬರು ಈಗ ಬಿಜೆಪಿ ಪಾಳಯದಲ್ಲಿದ್ದಾರೆ. ಪಡಿತರಕ್ಕಾಗಿ ಕಿ.ಮೀ. ಗಟ್ಟಲೇ ಅಲೆಯಬೇಕಾದ ಸ್ಥಿತಿ ಗ್ರಾಮಸ್ಥರದ್ದು.
Advertisement
ಕಿರಿಮಂಜೇಶ್ವರ: ಒಂದೆಡೆ ಪಕ್ಷೇತರರ ಕಾರುಬಾರುಕಿರಿಮಂಜೇಶ್ವರದಲ್ಲಿ 5 ವಾರ್ಡ್‌ಗಳಿದ್ದು, 19 ಸದಸ್ಯ ಸ್ಥಾನಗಳಿವೆ. ಕಳೆದ ಬಾರಿ 17 ಕಡೆ ಬಿಜೆಪಿ ಹಾಗೂ ಎರಡರಲ್ಲಿ ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದರು. ಈ ಬಾರಿ ಎಲ್ಲೆಡೆ ಎರಡು ಪಕ್ಷಗಳ ಮಧ್ಯೆ ಸ್ಪರ್ಧೆಯ ಲಕ್ಷಣವಿದ್ದು, ಒಂದು ವಾರ್ಡ್‌ನಲ್ಲಿ ಮಾತ್ರ 3-4 ಪಕ್ಷೇತರರು ಸ್ಪರ್ಧಿಸಿ ಕುತೂಹಲ ಮೂಡಿಸಿದ್ದಾರೆ. ಇಲ್ಲಿ ಕೊಡೇರಿ ಮೀನುಗಾರಿಕಾ ಬಂದರು ಸಮಸ್ಯೆ, ಮೀನು ಮಾರಾಟದ ಸಮಸ್ಯೆ ಪ್ರಮುಖವಾಗಿದೆ. ಮರವಂತೆ: ತ್ರಿಕೋನ ಹಣಾಹಣಿ
ಮರವಂತೆಯಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ – ಬಿಜೆಪಿ- ಸ್ವಾಭಿಮಾನಿ ಪಕ್ಷೇತರ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡುವಂತಿದೆ. 5 ವಾರ್ಡ್‌ಗಳಿದ್ದು, 14 ಸದಸ್ಯ ಸ್ಥಾನಗಳಿವೆ. ಕಳೆದ ಬಾರಿ 13ರಲ್ಲಿ ಬಿಜೆಪಿ ಬೆಂಬಲಿತರು ಜಯಗಳಿಸಿದ್ದರೆ, ಒಂದು ಕಡೆ ಕಾಂಗ್ರೆಸ್ ಬೆಂಬಲಿತರು ಅವಿರೋಧವಾಗಿ ಆಯ್ಕೆ ಯಾಗಿದ್ದರು. ಈ ಬಾರಿ ಸ್ವಾಭಿಮಾನಿ ಪಕ್ಷೇತರ ಸಹ ಅಖಾಡಕ್ಕಿಳಿದಿದ್ದು, ಎಲ್ಲ ಕಡೆಗಳಲ್ಲಿ ತನ್ನ ಬೆಂಬಲಿತರನ್ನು ಕಣಕ್ಕಿಳಿಸಿದೆ. ಮೀನುಗಾರಿಕಾ ರಸ್ತೆ ಅವ್ಯವಸ್ಥೆ, ಬಂದರು ಸಮಸ್ಯೆ ಪ್ರಮುಖ. ಕಂಬದಕೋಣೆ: ನೇರ ಹಣಾಹಣಿ
ಕಂಬದಕೋಣೆಯಲ್ಲಿ ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿ ಸಾಧ್ಯತೆ ಹೆಚ್ಚಿದೆ. ಇಲ್ಲಿ 5 ವಾರ್ಡ್‌ಗಳಿದ್ದು, 13 ಸದಸ್ಯ ಸ್ಥಾನಗಳಿವೆ. ಕಳೆದ ಬಾರಿ 12ರಲ್ಲಿ ಗೆದ್ದ ಕಾಂಗ್ರೆಸ್ ಬೆಂಬಲಿತರು ಗದ್ದುಗೆಗೆ ಏರಿದ್ದರು. 1 ಬಿಜೆಪಿ ಬೆಂಬಲಿತರ ಪಾಲಾಗಿತ್ತು. ಈ ಬಾರಿ ಬಿಜೆಪಿ ಹಲವೆಡೆ ಪೈಪೋಟಿ ಕೊಡಲು ಸಿದ್ಧತೆ ನಡೆಸಿದೆ. ನೀರಿನ ಸಮಸ್ಯೆ ಒಂದಾದರೆ, ಇಲ್ಲಿರುವ ದಲಿತ ಸಮುದಾಯದವರಿಗೆ ಹಕ್ಕುಪತ್ರ, ಮೂಲ ಸೌಕರ್ಯ ಒದಗಿಸಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ನಾವುಂದ: ದ್ವಿಪಕ್ಷೀಯ ಸ್ಪರ್ಧೆ
ನಾವುಂದದಲ್ಲಿ 5 ವಾರ್ಡ್‌ಗಳಿದ್ದು, 15 ಸದಸ್ಯ ಸ್ಥಾನ ಗಳಿವೆ. ಕಳೆದ ಬಾರಿ 9 ರಲ್ಲಿ ಬಿಜೆಪಿ ಹಾಗೂ 6 ರಲ್ಲಿ ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದರು. ಇಲ್ಲಿ ಈ ಬಾರಿಯೂ ದ್ವಿಪಕ್ಷೀಯ ಸ್ಪರ್ಧೆ ಏರ್ಪಟ್ಟಿದೆ. ಪ್ರಮುಖ ವಾಗಿ ಮಳೆಗಾಲದಲ್ಲಿ ಸಾಲುºಡಾ ಮತ್ತಿತರ ಪ್ರದೇಶ ಗಳು ನೆರೆಗೆ ತುತ್ತಾಗುತ್ತಿದ್ದು, ಇದಕ್ಕೊಂದು ಶಾಶ್ವತ ಪರಿಹಾರ ಬೇಕಿದೆ ಎನ್ನುವುದು ಗ್ರಾಮಸ್ಥರ ಬೇಡಿಕೆ.