Advertisement
ಜಿಲ್ಲೆಯಲ್ಲಿ 16 ಸಾವಿರ ಲಸಿಕೆ ದಾಸ್ತಾನು ಇದ್ದು, 8ವಾರ ಕಾದಿರುವವರಿಗೆ 61 ಪ್ರಾಥಮಿಕ ಆರೋಗ್ಯಕೇಂದ್ರ ದಲ್ಲಿ ಲಸಿಕೆ ಲಭ್ಯವಿದೆ. 71 ಕೇಂದ್ರಗಳಲ್ಲಿ ಲಸಿಕೆನೀಡ ಲಾಗುತ್ತಿದೆ. 2ನೇ ಡೋಸ್ ಪಡೆಯಲು ಕಳೆದ 8ವಾರಗಳಿಂದ ಕಾಯುತ್ತಿದ್ದವರಿಗೆ ಲಸಿಕೆ ನೀಡಲುಪ್ರಥಮ ಆದ್ಯತೆ ನೀಡಲಾಗುತ್ತಿದೆ.
Related Articles
Advertisement
ದಾಖಲಾತಿ ಅಭಿಯಾನ: ಜಿಲ್ಲೆಯಲ್ಲಿ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಪಣತೊಟ್ಟಿರುವಜಿಲ್ಲಾ ಕಾರಿ ಆರ್.ಲತಾ ಮತ್ತು ಅವರ ತಂಡದಸದಸ್ಯರು ವ್ಯಾಪಕ ಪ್ರಚಾರ ಮತ್ತು ಅರಿವು ಮೂಡಿಸುತ್ತಿದ್ದಾರೆ ಅದರ ಜೊತೆಗೆ ಪ್ರತಿಯೊಬ್ಬ ಅಂಗನವಾಡಿಕಾರ್ಯಕರ್ತರು ಮತ್ತು ಅವರ ಜೊತೆಗೆ ಶಿಕ್ಷಕರಿಗೆ ಜವಾಬ್ದಾರಿ ಹಾಕಿ ಮನೆ ಮನೆಗೆ ತೆರಳಿ ಮನೆಯಲ್ಲಿಎಷ್ಟು ಜನರಿದ್ದಾರೆ 18 ರಿಂದ 45 ವರ್ಷ ವಯಸ್ಸಿನಎಷ್ಟು ಮಂದಿ ಇದ್ದಾರೆಯೆಂದು ಮಾಹಿತಿ ಕಲೆ ಹಾಕಿಎಷ್ಟು ಜನ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದುಮಾಹಿತಿ ಪಡೆಯಲು ಸರ್ವೇ ಕಾರ್ಯ ನಡೆಸುತ್ತಿದ್ದಾರೆ ಸರ್ವೇ ವೇಳೆಯಲ್ಲಿ ಕೆಲವರು ಲಸಿಕೆ ಪಡೆದುಕೊಂಡಿದ್ದೇವೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಮೈಸೂರು ಮತ್ತು ಬೆಳಗಾವಿ ಜಿಲ್ಲೆಯನಂತರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಲಸಿಕೆ ನೀಡುವಂತಹಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದುಹೀಗಾಗಿ ಲಸಿಕೆ ಸರಬರಾಜುನಲ್ಲಿ ಯಾವುದೇ ರೀತಿಯವ್ಯತ್ಯಯವಾಗುತ್ತಿಲ್ಲ ಜಿಲ್ಲೆಗೆ ಅಗತ್ಯವಾಗಿರುವ ಲಸಿಕೆಪೂರೈಕೆ ಆಗುತ್ತಿದೆ ಜಿಲ್ಲೆಯಲ್ಲಿ ಲಸಿಕೆ ಪಡೆದುಕೊಳ್ಳಲುನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯಆಡಳಿತ ಮತ್ತು ಜಿಲ್ಲಾಡಳಿತ ಮೂಲಕ ವ್ಯಾಪಕವಾಗಿಅರಿವು ಮತ್ತು ಜಾಗೃತಿ ಮೂಡಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಲಸಿಕಾ ಅಭಿಯಾನ ನಡೆಯುತ್ತಿದೆ. ಮೊದಲ ಡೋಸ್ ಪಡೆದಿರುವವರಿಗೆನಿಗ ದಿತ ಅವ ಧಿಯಲ್ಲಿ ಪಡೆದುಕೊಳ್ಳಲು ಸಲಹೆ ನೀಡುತ್ತಿದ್ದೇವೆ. ಜಿಲ್ಲೆಯ ಪ್ರತಿ ಪ್ರಾಥಮಿಕಆರೋಗ್ಯ ಕೇಂದ್ರ, ಲಸಿಕಾ ಕೇಂದ್ರಗಳಲ್ಲಿ 2ನೇ ಡೋಸ್ ನೀಡುತ್ತಿದ್ದೇವೆ. ಫ್ರಂಟ್‌ಲೆçನ್ ವರ್ಕರ್ಈಗಾಗಲೇ 2ನೇ ಡೋಸ್ ಪಡೆದುಕೊಂಡಿದ್ದಾರೆ. ಇನ್ನೂ 45 ವರ್ಷ ಮೇಲ್ಪಟ್ಟವರುಪಡೆದುಕೊಳ್ಳುತ್ತಿದ್ದಾರೆ. ಲಸಿಕೆಗೆ ಯಾವುದೇ ರೀತಿಯ ಕೊರತೆಯಿಲ್ಲ, ವ್ಯವಸ್ಥಿತವಾಗಿಕೊಡುತ್ತಿದ್ದೇವೆ. ಜಿಲ್ಲೆ ಲಸಿಕಾ ಅಭಿಯಾನದಲ್ಲಿ ರಾಜ್ಯದಲ್ಲೇ 3ನೇ ಸ್ಥಾನ ಪಡೆದಿದೆ.
ಆರ್.ಲತಾ, ಜಿಲ್ಲಾಧಿ ಕಾರಿ, ಚಿಕ್ಕಬಳ್ಳಾಪುರ.
ಎಂ.ಎ.ತಮೀಮ್ ಪಾಷ