Advertisement

ಸ್ಥಾನ ನೀಡದಿದ್ದರೆ ಕುರುಬರ ಮತವಿಲ್ಲ

11:28 AM Jan 08, 2018 | |

ಕಲಬುರಗಿ: ಬರುವ ಏಪ್ರಿಲ್‌ ತಿಂಗಳಿನಲ್ಲಿ ನಡೆಯುವ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಹೈದ್ರಾಬಾದ್‌ ಕರ್ನಾಟಕ ಭಾಗದ ಸ್ಥಾನಗಳಲ್ಲಿ ಒಂದೂ ಸ್ಥಾನದ ನೀಡದ ಪಕ್ಷಗಳಿಗೆ ಕುರುಬ ಸಮಾಜದ ಮತಗಳಿಲ್ಲ ಎಂದು ಸಮಾಜದ ಮುಖಂಡರು, ನಾಯಕರು ಹಾಗೂ ಧಾರ್ಮಿಕ ಗುರುಗಳು ಘೋಷಿಸಿದ್ದಾರೆ.

Advertisement

ರವಿವಾರ ನಗರದ ಸಾರ್ವಜನಿಕ ಉದ್ಯಾನವನದ ವೀರಶೈವ ಕಲ್ಯಾಣ ಮಂಟಪದ ವಿಶಾಲವಾದ ಎದುರಿನ ಸ್ಥಳದಲ್ಲಿ ನಡೆದ ಕುರುಬ, ಗೊಂಡ, ಕಾಡು ಕುರುಬ ಬೃಹತ್‌ ಜನ ಜಾಗೃತಿ ಸಮಾವೇಶದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ| ರಾಜೇಂದ್ರ ವೈ ಸಣ್ಣಕ್ಕಿ, ತಿಂಥಣಿ ಕನಕಗುರು ಪೀಠದ ಸಿದ್ಧರಾಮನಂದಪುರಿ ಮಹಾಸ್ವಾಮಿಗಳು ಮತ್ತಿತರರು ಕುರುಬ ಸಮಾಜವನ್ನೇ ಬರೀ ಮತ ಬ್ಯಾಂಕ್‌ ಮಾಡಿಕೊಂಡರೆ ಸಾಲದು ಒಂದು ಸ್ಥಾನ ನೀಡುವುದರ ಮುಖಾಂತರ ಅವಕಾಶ ನೀಡಬೇಕು. 

ಇಲ್ಲದ್ದಿದ್ದರೆ ಸಮಾಜದ ಮತಗಳಿಂದ ದೂರವಾಗ ಬೇಕಾಗುತ್ತದೆ ಎಂದು ಅಭಿಪ್ರಾಯ ಪ್ರಕಟಿಸಿದರು. ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಈ ಮೂರು ಪಕ್ಷಗಳು ಈ ಭಾಗದ ಸಮಾಜದೊಬ್ಬರಿಗೆ ಟಿಕೆಟ್‌ ನೀಡಬೇಕು. ಇದಕ್ಕೆ ಕಾಂಗ್ರೆಸ್‌ ಪಕ್ಷವೂ ಹೊರತಾಗಿಲ್ಲ. ಕಾಂಗ್ರೆಸ್‌ ಪಕ್ಷವೂ ಟಿಕೆಟ್‌ ನೀಡದೇ ಇದ್ದಲ್ಲಿ ದೂರ ಉಳಿಯಲು ಸಮಾಜ ಹಿಂದೇಟು ಹಾಕದು ಎಂದು ಹೇಳಿದ ದ್ಧರಾಮನಂದಪುರಿ ಶ್ರೀಗಳು ಹಾಗೂ ಡಾ| ಸಣ್ಣಕ್ಕಿ ಅವರು, ಕಲಬುರಗಿ ದಕ್ಷಿಣದಿಂದ ದಿಲೀಪ ಪಾಟೀಲ ಅವರಿಗೆ ಕಾಂಗ್ರೆಸ್‌ ಪಕ್ಷವು ಟಿಕೆಟ್‌ ನೀಡಬೇಕು. ಟಿಕೆಟ್‌ ದೊರೆತಲ್ಲಿ ಸಮಾಜದವರೊಬ್ಬರು ಜನಪ್ರತಿನಿಧಿಯಾಗಲು ಸಾಧ್ಯವಾಗುತ್ತದೆ ಎಂದು ಆಗ್ರಹಿಸಿದರು.

ತಿಂಥಣಿಯ ಕನಕ ಗುರುಪೀಠದ ಸಿದ್ದರಾಮ ನಂದಪುರಿ ಮಹಾಸ್ವಾಮೀಜಿ, ಕರ್ನಾಟಕ ಪ್ರದೇಶ ಕುರುಬ ಸಂಘದ ರಾಜ್ಯಾಧ್ಯಕ್ಷ ಡಾ| ರಾಜೇಂದ್ರ ಸಣ್ಣಕ್ಕಿ ಅವರಲ್ಲದೇ ಪ್ರಧಾನ ಕಾರ್ಯದರ್ಶಿ ಕೆ.ಎಂ, ರಾಮಚಂದ್ರಪ್ಪ, ಉಪಾಧ್ಯಕ್ಷ ರಾಮಕೃಷ್ಣಪ್ಪ, ಜಿಲ್ಲಾಧ್ಯಕ್ಷ ತಿಪ್ಪಣ್ಣ ಗುಂಡಗುರ್ತಿ ಬಳಬಟ್ಟಿ, ತುಮಕೂರಿನ ನಿಕೇತರಾಜ್‌ ಮಾತನಾಡಿ, ಈ ಸಮಾವೇಶದ ಮೂಲಕ ಕಲಬುರಗಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಕುರುಬರಿಗೆ ಟಿಕೆಟ್‌ ನೀಡಲೇಬೇಕೆಂದು ಎಂದು ಒಕ್ಕೊರಲಿನಿಂದ ಆಗ್ರಹಿಸಿದರಲ್ಲದೇ ಕುರುಬರಿಗೆ ಟಿಕೇಟ್‌ ನೀಡದೆ ಹೋದರೆ, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ. ಹಿಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾರೆಂದೆ ಕುರುಬರು ಬೆಂಬಲಿಸಿದರು. ಈಗಲೂ ಅಷ್ಟೆ. ನಮ್ಮವರಿಗೆ ಟಿಕೆಟ್‌ ನೀಡಬೇಕು. ಇಲ್ಲದೆ ಹೋದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಚ್ಚರಿಕೆ ನೀಡಿದರು.

ಜಿಪಂ ಸದಸ್ಯ ಹಾಗೂ ಸಮಾಜದ ಯುವ ನಾಯಕ ದಿಲೀಪ್‌ ಆರ್‌.ಪಾಟೀಲ್‌ ಧ್ವಜಾರೋಹಣ ನೆರವೇರಿಸಿ, ಒಗ್ಗಟ್ಟು ಹಾಗೂ ಹೋರಾಟದಿಂದ ಸೌಲಭ್ಯ ಪಡೆಯಲು ಸಾಧ್ಯ ಎಂಬುದನ್ನು ಸಮಾಜದ ಎಲ್ಲರೂ ಮನಗಾಣಬೇಕೆಂದರು. ಕುರುಬ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪಣ್ಣ ಗುಂಡಗುರ್ತಿ ಬಳಬಟ್ಟಿ ಅಧ್ಯಕ್ಷತೆ ವಹಿಸಿ, ಕುರುಬ, ಗೊಂಡ ಹಾಗೂ ಕಾಡು ಕುರುಬ ಸಮಾದಜವರಿಗೆ ಕಲಬುರಗಿ, ಬೀದರ್‌ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಎಸ್‌ಟಿ ಪ್ರಮಾಣ ಪತ್ರ ನೀಡಬೇಕೆಂದರು ಅಧಿಕಾರಿಗಳು ನೀಡುತ್ತಿಲ್ಲ. ಇದರ ವಿರುದ್ಧ ಸಮಾಜದವರೆಲ್ಲರೂ ಬೀದಿಗಿಳಿದು ಶಕ್ತಿ ತೋರಿಸಬೇಕಾಗಿದೆ ಎಂದು ಹೇಳಿದರು.

Advertisement

ಬಸವಪಟ್ಟಣದ ಭೀರಲಿಂಗೇಶ್ವರ ಪೀಠಾಧಿಪತಿ ಮರೆಪ್ಪ ಮುತ್ಯಾ, ಫ‌ರಹತಾಬಾದನ ಹುಣಚೇಶ್ವರ ಪೀಠಾಧಿಪರಿ ಹುಣಚಿರಾಯ ಮುತ್ಯಾ, ಸಿರನೂರಿನ ಬೀರಲಿಂಗೇಶ್ವರ ಮಠದ ಚಂದ್ರು ಮುತ್ಯಾ, ಹೂಡಾ ಹಯ್ನಾಳ ಸಿದ್ದೇಶ್ವರ ಪೀಠದ ಮರೆಪ್ಪ ಮುತ್ಯಾ, ಗೌರ ಗ್ರಾಮದ ಅಭಿನವ ಯಲ್ಲಾಲಿಂಗ ಮಹಾರಾಜರು, ಮೇಳಕುಂದಾ ಮಾಳಿಂಗರಾಯ ದೇವಸ್ಥಾನದ ಮಹಾದೇವಪ್ಪ ಮುತ್ಯಾ, ಸಂಗೋಳಗಿ ಬೀರಲಿಂಗೇಶ್ವರ ದೇವಸ್ಥಾನ ವೀರಣ್ಣ ಮುತ್ಯಾ, ಸಿದ್ದಯ್ಯ ಶರಣರು ಸಮ್ಮುಖ ವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಮಚಂದ್ರಪ್ಪ, ಕಾರ್ಯಾಧ್ಯಕ್ಷ ಎಂ.ವಿ.ಸೋಮಶೇಖರ, ಮಲ್ಲಿಕಾರ್ಜುನ ಪೂಜಾರಿ, ಜಿಪಂ ಸದಸ್ಯೆ ರತ್ನವ್ವ ಕಲ್ಲೂರ ಬಡದಾಳ, ಮಹೇಶ ಧರಿ, ಈರಣ್ಣ ಝಳಕಿ, ಹಣಮಂತ ಬರಗಾಲಿ, ಸುದಿಷ್ಣಾಬಾಯಿ ಮದರಿ, ಕಾರ್ಯಾಧ್ಯಕ್ಷ ಗಿರೆಪ್ಪ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಡಾ.ಬಾಬು ಪೂಜಾರಿ, ನೌಕರರ ಸಂಘದ ರಾಜೇಶ ನೀಲಹಳ್ಳಿ, ಮುಖಂಡರಾದ ಧರ್ಮಣ್ಣ ದೊಡ್ಡಮನಿ, ಲಿಂಗರಾಜ ಬಿರಾದಾರ, ಬೈಲಪ್ಪ ನೆಲೋಗಿ, ಪ್ರಭು ಜುಮ್ಮಣ್ಣಾ, ರಾಜೇಶ ನೀಲಹಳ್ಳಿ, ಮಂಜುಳಾ ಸಾತನೂರ, ಸೂರ್ಯಕಾಂತ ಪೂಜಾರಿ, ಸಾವಿರಪ್ಪ ಪೂಜಾರಿ, ಡಾ.ಪಾಂಡುರಂಗ ಪೂಜಾರಿ, ಹಣಮಂತ ಪೂಜಾರಿ, ದೇವೇಂದ್ರಪ್ಪ ನಾಯಕೋಡಿ, ಮಲ್ಲಪ್ಪ ಬೀರಾಪುರ, ತುಕಾರಾಮ ವಗ್ಗೆ, ಜುಮ್ಮಣ್ಣ ಕೊಂಚೂರು,ನಿಂಗಣ್ಣ ಭಂಡಾರಿ, ಸತೀಶ ಹಾಬಾಳ, ವಸಂತ ಬನ್ನೂರಕರ್‌, ನಾಗೇಂದ್ರ ಪೂಜಾರಿ, ಮಲ್ಲಣ್ಣ ಇಟಗಿ, ಈರಣ್ಣ ಝಳಕಿ, ರವಿಗೊಂಡ ಕಟ್ಟಿ, ಗಣಪತಿ ಮಿಣಜಗಿ, ದೇವೇಂದ್ರಪ್ಪ ಕಾಳಗಿ, ನಾಗೇಂದ್ರಪ್ಪ ಪೂಜಾರಿ ಇದ್ದರು. 

ಕಾರ್ಯದರ್ಶಿ ಡಾ| ಬಾಬುರಾವ್‌ ಹಾಗರಗುಂಡಗಿ ನಿರೂಪಿಸಿ ವಂದಿಸಿದರು. ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ್ದ ಹಾಲುಮತ ಸಮಾಜದವರು ಪಾಲ್ಗೊಂಡಿದ್ದರು. ಸಮಾವೇಶದ ಬಳಿಕ ವೇದಿಕೆಯಲ್ಲಿ ಸ್ವಾಮೀಜಿಗಳಿಗೆ ಹೇಮಲತಾ ಡಾ| ಅಮರೇಶ ಕೊಲ್ಲೂರ, ತನುಜಾ ಶಿವಕುಮಾರ ಬೇಳಕೇರಿ, ವಿಜಯಾ ಸಾಯಿಕುಮಾರ ರುಸ್ತಂಪುರ, ಸ್ಪರ್ಶ ಆಸ್ಪತ್ರೆಯ ಲಲಿತಾಬಾಯಿ ಈರಣ್ಣ ಧರೆಪ್ಪಗೋಳ ಅವರಿಂದ ತುಲಾಭಾರ ನೆರವೇರಿತು. ಸಮಾವೇಶಕ್ಕೂ ಮುನ್ನ ನಗರದ ನೆಹರು ಗಂಜ್‌ ,ಸೂಪರ್‌ ಮಾರ್ಕೇಟ್‌ ಮಾರ್ಗವಾಗಿ ಸಮಾವೇಶ ನಡೆಯುವ ಸ್ಥಳದವರೆಗೂ ಬೃಹತ್‌ ಮೆರವಣಿಗೆ ನಡೆಸಲಾಯಿತು

ಖರ್ಗೆಯವರೇ ನಮ್ಮವರನ್ನೂ ಬೆಳೆಸಿ ತನಗೆ ಬಂದಿದ್ದ ಸಿಎಂ ಪದವಿಯನ್ನೇ ತಿರಸ್ಕರಿಸಿದ್ದ ಕರ್ನಾಟಕದ ಗಾಂಧಿ ಎನಿಸಿಕೊಂಡಿದ್ದ ಹಾಲುಮತದ ಕೋಳೂರು ಮಲ್ಲಪ್ಪನವರೇ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಳೆಸಿದ್ದಾರೆ. ಆಗ ನಮ್ಮವರು ಬೆಳೆಸಿದ್ದಾರೆ, ಈಗ ಖರ್ಗೆಯವರು ನಮ್ಮವರನ್ನು ಕಲಬುರಗಿ-ಯಾದಗಿರಿ ಜಿಲ್ಲೆಯಲ್ಲಿ ಕುರುಬರ ವ್ಯಕ್ತಿಯೊಬ್ಬರು ಶಾಸಕರಾಗುವಂತೆ ಮಾಡಲು ಮುಂದಾಗಬೇಕು.

 ಡಾ| ರಾಜೇಂದ್ರ ಸಣ್ಣಕ್ಕಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ  ಹೋರಾಟ ನಿಲ್ಲದು ಒಗ್ಗಟ್ಟು ಹಾಗೂ ಹೋರಾಟದಿಂದ ಸೌಲಭ್ಯ ಪಡೆಯಲು ಸಾಧ್ಯ ಎಂಬುದನ್ನು ಮನಗಂಡು ಈ ಬೃಹತ್‌ ಸಮಾವೇಶಕ್ಕೆ ಮುಂದಾಗಲಾಗಿದೆ. ಈ ಹೋರಾಟ ಬರೀ ಸಮಾವೇಶಕ್ಕೆ ಸಿಮೀತವಾಗಲ್ಲ. ಹೋರಾಟ ಮುಂದೆಯೂ ಮುಂದುವರಿಯುತ್ತದೆ. ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ. ಕುರುಬ, ಗೊಂಡ, ಕಾಡುಕುರುವ ಎಸ್ಟಿ ಪ್ರಮಾಣ ಪತ್ರ ಪಡೆದುಕೊಳ್ಳುವ ಹೋರಾಟ ಮಾಡುತ್ತೇವೆ.  ದಿಲೀಪ ಪಾಟೀಲ, ಜಿಪಂ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next