Advertisement
ಈ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸದಿರಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ, ಇವರೆಲ್ಲರೂ ಇನ್ನೂ ಒಂದು ವರ್ಷ ಕಾಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
Related Articles
Advertisement
ಅಲ್ಲದೆ ಪರೀಕ್ಷೆ ನಡೆಸಲು ಕನಿಷ್ಠ 2 ತಿಂಗಳು ಬೇಕಾಗುತ್ತದೆ. ನಂತರ ಫಲಿತಾಂಶ ನೀಡಲು 15 ದಿನ ಬೇಕು. ಎಲ್ಲ ಪ್ರಕ್ರಿಯೆಗೆ ಎರಡೂವರೆ ತಿಂಗಳು ಬೇಕಾಗುವುದರಿಂದ ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪದವಿ ಅಥವಾ ಬೇರೆ ಶಿಕ್ಷಣಕ್ಕೆ ಈ ವರ್ಷ ಸೇರಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪೂರಕ ಪರೀಕ್ಷೆ ನಡೆಸದಿರಲು ನಿರ್ಧರಿಸಲಾಗಿದೆ ಎಂದು ಖಚಿತ ಮೂಲಗಳು ತಿಳಿಸಿವೆ.
ಒಂದು ವರ್ಷ ವ್ಯರ್ಥಖಾಸಗಿ ಅಭ್ಯರ್ಥಿಗಳಲ್ಲಿ ಅನೇಕರು ಹುದ್ದೆಯಲ್ಲಿ ಪ್ರಮೋಷನ್ ಸೇರಿದಂತೆ ಔದ್ಯೋಗಿಕ ಕಾರಣಕ್ಕಾಗಿ ಪರೀಕ್ಷೆ ಬರೆದಿರುತ್ತಾರೆ. ಆದರೆ, ಪುನರಾವರ್ತಿತ ಹಾಗೂ ಹೊಸ ಅಭ್ಯರ್ಥಿಗಳಲ್ಲಿ ಶೈಕ್ಷಣಿಕ ವರ್ಷ ಮುಂದುವರಿಸುವವರೇ ಹೆಚ್ಚಿರುತ್ತಾರೆ. ಈಗ ಇವ ರಿಗೆ ಪೂರಕ ಪರೀ ಕ್ಷೆಯ ಅವ ಕಾಶ ಸಿಗದ ಕಾರಣ ಅನುತ್ತೀರ್ಣರಾದವರು ಒಂದು ವರ್ಷ ಕಾಯಲೇಬೇಕು. 2021-22ನೇ ಸಾಲಿನಲ್ಲಿ ಈ ವಿದ್ಯಾರ್ಥಿಗಳಿಗೆ ಪದವಿ ಅಥವಾ ಯಾವುದೇ ಕೋರ್ಸ್ ದ್ವಿತೀಯ ಪಿಯುಸಿ ಫಲಿತಾಂಶದ ಆಧಾರದಲ್ಲಿ ಸೇರಲು ಸಾಧ್ಯವಿಲ್ಲ. ಹೀಗಾಗಿ ಒಂದು ವರ್ಷ ವ್ಯರ್ಥ್ಯವಾಗಲಿದೆ ಎಂದು ಪಿಯು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಮತ್ತು ಸರ್ಕಾರದಿಂದ ಈವರೆಗೆ ಯಾವುದೇ ಸೂಚನೆ ಬರದೇ ಇರುವುದರಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಮಾಡುವುದು ಅನುಮಾನ. ಪೂರಕ ಪರೀಕ್ಷೆ ಮಾಡಿದರೂ, ವಿದ್ಯಾರ್ಥಿಗಳಿಗೆ 2021-22ನೇ ಸಾಲಿಗೆ ದಾಖಲಾತಿ ಪಡೆಯುವುದು ಕಷ್ಟವಾಗಲಿದೆ.
-ಆರ್.ಸ್ನೇಹಲ್, ನಿರ್ದೇಶಕಿ, ಪಿಯು ಇಲಾಖೆ -ರಾಜು ಖಾರ್ವಿ ಕೊಡೇರಿ