Advertisement

ರಾಜ್ಯದಲ್ಲಿನ್ನು ಮೂಢನಂಬಿಕೆ ಆಚರಣೆಗಳಿಗೆ ಅವಕಾಶವಿಲ್ಲ

11:00 PM Jan 22, 2020 | Lakshmi GovindaRaj |

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರೂಪಿಸಲಾಗಿದ್ದ ವಿವಾದಾತ್ಮಕ ಮೂಢ ನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿ ರಾಜ್ಯದ ಬಿಜೆಪಿ ಸರ್ಕಾರ ಆದೇಶ ಹೊರಡಿಸಿದೆ. ಆಗಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅಮಾನವೀಯ, ದುಷ್ಟ ಪದ್ದತಿಗಳು, ಮಾಟ ಮಂತ್ರ ಮತ್ತು ವಾಮಾಚಾರ ನಿಯಂತ್ರಿಸುವ ಮಸೂದೆ- 2017ಅನ್ನು ಜಾರಿಗೊಳಿಸಲು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು. ಬಿಜೆಪಿ ಸರ್ಕಾರ ಈ ಕಾಯ್ದೆಯನ್ನು ಯಾವುದೇ ಬದಲಾವಣೆಯಿಲ್ಲದೇ 2020 ಜನವರಿ 4ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಿದ್ದು, ಶೀಘ್ರವೇ ಕರ್ನಾಟಕ ರಾಜ್ಯಪತ್ರ ಹೊರಡಿಸಲಿದೆ.

Advertisement

ಏನೇನು ನಿಷೇಧ?
-ಎಂಜಲೆಲೆಯ ಮೇಲೆ ಉರುಳುವ ಮಡೆ ಸ್ನಾನ
-ಸಿಡಿ ಹಾಯುವುದು, ಬೆತ್ತಲೆ ಸೇವೆ
-ಋತುಮತಿಯಾದಾಗ ಅಥವಾ ಗರ್ಭಿಣಿಯನ್ನು ಊರ ಹೊರಗಿಡುವ ಪದ್ಧತಿ
-ವಶೀಕರಣ, ವಾಮಾಚಾರ

Advertisement

Udayavani is now on Telegram. Click here to join our channel and stay updated with the latest news.

Next