Advertisement

ಭಿನ್ನ ಕೋಮಿನ ದಂಪತಿಗೆ ರೂಂ ಇಲ್ಲ!; ಹೊಟೇಲ್‌ನಲ್ಲಿ ತೀವ್ರ ವಾಗ್ವಾದ 

11:31 AM Jul 05, 2017 | Team Udayavani |

ಬೆಂಗಳೂರು: ಅನ್ಯ ಕೋಮಿನ ದಂಪತಿಗೆ ಹೊಟೇಲ್‌ ರೂಂ ನೀಡಲು ನಿರಾಕರಿಸಿದ್ದು ತೀವ್ರ ವಾಗ್ವಾದಕ್ಕೆ ಕಾರಣವಾದ ಘಟನೆ ಜೆ.ಸಿ.ರಸ್ತೆಯ ಸುಧಾಮನಗರದ ಲಾಡ್ಜ್ ವೊಂದರಲ್ಲಿ ನಡೆದಿದೆ. 

Advertisement

ಕೇರಳದಿಂದ ಬೆಂಗಳೂರಿಗೆ ಇಂಟರ್ವ್ಯೂಗೆಂದು ಬಂದಿದ್ದ ಶಫೀಲ್‌ ಸುಬೈದಾ ಹಕಿಂ ಮತ್ತು ದಿವ್ಯಾ ದಂಪತಿ ಹೊಟೇಲ್‌ಗೆ  ಆಗಮಿಸಿ ರೂಂ ಕೇಳಿದ್ದಾರೆ. ಈ ವೇಳೆ ಪೊಲೀಸರ ನಿಯಮದಂತೆ ರೂಂ ಪಡೆಯಲು ಹೊಟೇಲ್‌ ಸಿಬಂದಿ ಗುರುತಿನ ಚೀಟಿ ಕೇಳಿದ್ದಾರೆ. 

ಇಬ್ಬರ ಗುರುತು ಚೀಟಿ ನೋಡಿದ ಬಳಿಕ ಇಬ್ಬರಿಗೂ ಒಂದೇ ರೂಂ ನೀಡಲು ನಿರಾಕರಿಸಿದ್ದಾರೆ. ಯಾಕೆ ಎಂದು ಕಾರಣ ಕೇಳಿದ್ದಕ್ಕೆ ನೀವಿಬ್ಬರು ಭಿನ್ನ ಕೋಮಿನ ದಂಪತಿಗಳು ಹೀಗಾಗಿ ಒಂದೇ ರೂಂ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಹೊಟೇಲ್‌ ಸಿಬಂದಿಯ ಹೇಳಿಕೆಯಿಂದ ಕೆಂಡಮಂಡಲವಾದ ದಂಪತಿಗಳು ತೀವ್ರ ವಾಗ್ವಾದ ನಡೆಸಿ ಗಲಾಟೆ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಈ ಬಗ್ಗೆ ಯಾವುದೇ ಪ್ರಕರಣ ದಾಖಲಾದ ಬಗ್ಗೆ ವರದಿಯಾಗಿಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next