Advertisement

ಎಂದಿಗೂ ಬತ್ತದ ಈ ಕೆರೆಗೆ ದಾಖಲಾತಿಯೇ ಇಲ್ಲ!

05:00 PM Dec 02, 2019 | Team Udayavani |

ಎಚ್‌.ಡಿ.ಕೋಟೆ: ನಾಲ್ಕೈದು ಗ್ರಾಮಗಳ ಜೀವ ನಾಡಿಯಾಗಿರುವ ಟೈಗರ್‌ಬ್ಲಾಕ್‌ ನ ಚನ್ನಯ್ಯನ ಕಟ್ಟೆಕೆರೆ ಅಸ್ತಿತ್ವ ಕಳೆದುಕೊಳ್ಳು ಭೀತಿ ಎದುರಾಗಿದ್ದು, ತ್ವರಿತವಾಗಿ ಕೆರೆ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಈ ಕೆರೆ ವಿಶೇಷ ಎಂದರೆ ಎಂದಿಗೂ ಬತ್ತುವುದಿಲ್ಲ. ಜನ ಜಾನುವಾರುಗಳಿಗೆ ನೀರಿನ ದಾಹ ಇಂಗಿಸುತ್ತಿದೆ.

Advertisement

ಮೈಸೂರು ಒಡೆಯರ್‌ ಕಾಲದ ತಾಲೂಕಿನ ಚನ್ನಯ್ಯನಕಟ್ಟೆ ಕೆರೆಜಾಗ ರಕ್ಷಣೆಗೆ ಅಧಿಕಾರಿಗಳುಹಾಗೂ ಜನಪ್ರತಿನಿಧಿಗಳು ಮುಂದಾಗದ ಹಿನ್ನೆಲೆಯಲ್ಲಿಇಂದಿಗೂ ಕೆರೆ ಜಾಗಕ್ಕೆ ಪಹಣಿ ಪತ್ರ (ಆರ್‌ಟಿಸಿ) ಇಲ್ಲ.ಕೆರೆ ವಿಸ್ತೀರ್ಣ ಎಷ್ಟಿದೆ, ಎಷ್ಟು ಒತ್ತುವರಿಯಾಗಿದೆ ಎಂಬುದು ತಿಳಿದಿಲ್ಲ. ಕೆರೆಗೆ ಅಗತ್ಯ ದಾಖಲಾತಿಗಳನ್ನು ಒದಗಿಸಿದರೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆಗ್ರಾಮಸ್ಥರೇ ಅಭಿವೃದ್ಧಿಪಡಿಸಿಕೊಳ್ಳುತ್ತಾರೆ. ದಾಖಲೆ,ವಿಸ್ತೀಣ, ಒತ್ತುವರಿ ತೆರವುಗಳನ್ನು ತಾಲೂಕು ಆಡಳಿತ ಜರೂರಾಗಿ ಮಾಡಬೇಕಿದೆ ಎಂಬುದು ಈ ಭಾಗದ ಹಳ್ಳಿಗಳ ಜನರ ಆಗ್ರಹವಾಗಿದೆ.

ಟೈಗರ್‌ಬ್ಲಾಕ್‌: ಎಚ್‌.ಡಿ.ಕೋಟೆ ತಾಲೂಕು ಕೇಂದ್ರಸ್ಥಾನದಿಂದ ಕೇವಲ 6 ಕಿ.ಮೀ. ಅಂತರದಲ್ಲಿ ಟೈಗರ್‌ಬ್ಲಾಕ್‌ ಇದ್ದು, ಹೆಸರೇ ಹೇಳುವಂತೆ ಇದು ಹಿಂದೆ ಹುಲಿಗಳ ಅವಾಸ ಸ್ಥಾನವಾಗಿತ್ತು. ಮೈಸೂರುಒಡೆಯರು ವನ್ಯಜೀವಿಗಳ ಬೇಟೆಗೆ ಅಗಮಿಸುತ್ತಿದ್ದಾಗ, ವನ್ಯಜೀವಿಗಳು ನೀರಿನ ದಾಹ ನೀಗಿಸಿಕೊಳ್ಳುವ ಸಲುವಾಗಿ ಈಗಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಟೈಗರ್‌ ಬ್ಲಾಕ್‌ ಹೊರವಲಯದ ಚನ್ನಯ್ಯನಕಟ್ಟೆ ಕೆರೆಯನ್ನು ನಿರ್ಮಾಣ ಮಾಡಲಾಗಿತ್ತು. ಅಂದಿನ ಕಾಲದ ಕಲ್ಲುಗಳಿಂದ ರೀಟ್‌ಮೆಂಟ್‌ನಿಂದ ಕೆರೆ ಏರಿಕೂಡ ನಿರ್ಮಾಣ ಮಾಡಿರುವುದಕ್ಕೆ ಕುರುಹುಗಳು ಇವೆ.

8.10 ಎಕರೆ ವಿಸ್ತೀರ್ಣ: ಟೈಗರ್‌ಬ್ಲಾಕ್‌ ಸರ್ವೆ ನಂ46ರಲ್ಲಿ 8.10 ಎಕರೆ ವಿಸ್ತೀರ್ಣದ ಕೆರೆ ಜಾಗವುಸಂಪೂರ್ಣ ನೀರಿನಿಂದ ಆವರಿಸಿದ್ದು, ಇಲ್ಲಿ ತಾವರೆ ಹೂವು ನಳನಳಿಸುತ್ತ ಪ್ರಕೃತಿ ಸೌಂದರ್ಯವನ್ನು ಮೈದುಂಬಿಕೊಂಡಿದೆ. 1969ನೇ ಸಾಲಿನಲ್ಲಿ ಸರ್ವೆನಕಾಶೆಯಂತೆ ಈ ಜಾಗವು ಕೆರೆ ಎಂದು ನಮೂದಾಗಿದೆ. ಅಲ್ಲದೇ ಟೈಗರ್‌ಬ್ಲಾಕ್‌ ಗ್ರಾಮದ ಹಲವುಮಂದಿಗೆ 1996ರಲ್ಲಿ ಮೀನು ಸಾಕಾಣಿಕೆಗೆ ತರಬೇತಿನೀಡಿದ ಸರ್ಕಾರದ ವತಿಯಂದಲೇ ಚನ್ನಯ್ಯನಕಟ್ಟೆ ಕೆರೆಯಲ್ಲಿ ಮೀನು ಮರಿ ಸಾಕಾಣಿಕೆಗೆ ಅನುಮತಿ ನೀಡಿರುವ ದಾಖಲಾತಿಗಳು ಕೂಡ ಇವೆ.

ದಾಖಲೆ: 2011ರಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಕಾರ್ಯಾಲಯುದ ಸಂಖ್ಯೆ ನಂ.ಜಿ./ಒತ್ತುವರಿ/ ಸಿಆರ್‌/35/10-11ಜ್ಞಾಪನ ಪತ್ರದ ಹಾಗೂ ತಹಶೀಲ್ದಾರ್‌ ಕಚೇರಿ ಜ್ಞಾಪನ ಸಂಖ್ಯೆ ಎಲ್‌.ಎನ್‌.ಡಿ.12/15/10-11 ಆದೇಶದಂತೆ ಈ ಸ್ಥಳದ ಸರ್ವೆ ನಡೆಸಿ ಮತ್ತೂಮ್ಮೆ ನಕಾಶೆ ತಯಾರಿಸಲಾಗಿದೆ. ಚನ್ನಯ್ಯನಕಟ್ಟೆ ಕೆರೆ ಭರ್ತಿಯಾಗಲು ತಾರಕನಾಲೆಯಿಂದ ಸಂಪರ್ಕ ಕಲ್ಪಿಸಲಾಗಿದೆ.

Advertisement

ಕೆರೆ ಉಳಿಸಿ: ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು,ಕೆರೆ ಅಭಿವೃದ್ಧಿಗೆ ಸಂಘ ಸಂಸ್ಥೆಗಳು ಆಸಕ್ತರಾಗಿದ್ದರೂ ಆರ್‌ಟಿಸಿ ದಾಖಲೆ ಇಲ್ಲದ ಕಾರಣ ಇಲ್ಲದ ಕಾರಣಹಿಂದೇಟು ಹಾಕುತ್ತಿವೆ. ಗ್ರಾಮದ ಜನ ಜಾನುವಾರುಗಳ ಜೀವನಾಡಿಯಾಗಿರುವ ಚನ್ನಯ್ಯನಕಟ್ಟೆ ಕೆರೆ ಜಾಗಕ್ಕೆ ತಹಶೀಲ್ದಾರ್‌ ಸೇರಿದಂತೆ ಉಪವಿಭಾಗಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕೆರೆಜಾಗವನ್ನು ಕೆರೆಯನ್ನಾಗಿಯೇ ಉಳಿಸಬೇಕೆಂದು ಪರಿಸರವಾದಿ ಕ್ಷೀರಸಾಗರ್‌, ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಪಿ. ಆರ್‌.ಪಳನಿಸ್ವಾಮಿ, ಭೀಮನಹಳ್ಳಿ ಮಹದೇವು, ಜೆ.ಪಿ.ನಾಗರಾಜು ಸೇರಿದಂತೆ ನಾಲ್ಕೈದು ಗ್ರಾಮಗಳ ಜನರು ಆಗ್ರಹಿಸಿದ್ದಾರೆ.

 

-ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next