ಮದ್ದೂರು: ರಾಯಣ್ಣ ಬ್ರಿಗೇಡ್ ರಾಜಕೀಯ ವೇದಿಕೆಯಲ್ಲ. ಅದು ಪಕ್ಷ ಸಂಘಟನೆಗೆ ಸೀಮಿತವಾಗಿರುತ್ತದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಮೈಸೂರಿಗೆ ತೆರಳುವ ಮುನ್ನ ನಗರದಲ್ಲಿ ಮಾತನಾಡಿ, ರಾಯಣ್ಣ ಬ್ರಿಗೇಡ್ ಚಟುವಟಿಕೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಅದರ ಪಾಡಿಗೆ ಅದು ನಡೆಯುತ್ತಾ ಇರುತ್ತದೆ. ರಾಜಕೀಯ ವೇದಿಕೆಯಾಗಿ ಕಾರ್ಯನಿರ್ವಹಿಸದೆ ಸಂಘಟನೆಗೆ ಪೂರಕವಾಗಿ ಕೆಲಸ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.
“ನೀವು ಮತ್ತು ಯಡಿಯೂರಪ್ಪನವರು ಜಗಳವಾಡುತ್ತಿದ್ದರೆ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವೇ?’, ಎಂದು ಕೇಳಿದಾಗ, “ಯಾರ ಮನೆಯಲ್ಲಿ ಜಗಳ ಇಲ್ಲ ಹೇಳಿÅà? ನಿಮ್ಮ ಮನೆಯಲ್ಲಿಲ್ಲವೇ. ಅದೇ ರೀತಿ ನಮ್ಮ ಮನೆಯಲ್ಲೂ ಇದೆ. ನಮ್ಮಲ್ಲಿ ಜಗಳ ಸ್ವಲ್ಪ ಹೆಚ್ಚಾಗಿರಬಹುದು. ಅದನ್ನು ಮನೆಯೊಳಗೆ ಸರಿಪಡಿಸಿಕೊಳ್ಳುತ್ತೇವೆ’ ಎಂದರು.
ಪಕ್ಷದಲ್ಲಿ ಏಕತೆ ಮತ್ತು ಸಕ್ರಿಯತೆ ನಮ್ಮ ಮಂತ್ರವಾಗಬೇಕು. ಇದಕ್ಕಾಗಿ ಇನ್ನೊಬ್ಬರ ಪ್ರತಿಭೆ, ಕೌಶಲ್ಯಗಳನ್ನು ಗುರುತಿಸಿ ಪಕ್ಷದ ಕೆಲಸಕ್ಕೆ ಜೋಡಿಸಿಕೊಂಡು, ಪ್ರಧಾನಿ ನರೇಂದ್ರ ಮೋದಿ ಅವರಂತೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುವ ಸರ್ಕಾರ ಬರಬೇಕು.
-ಅನಂತಕುಮಾರ್, ಕೇಂದ್ರ ಸಚಿವ