Advertisement

“ಕರುಣಾಕರ ರೆಡ್ಡಿ  ಜತೆ ಸಂಧಾನ ಪ್ರಶ್ನೆಯೇ ಇಲ್ಲ’

03:45 AM Apr 20, 2017 | Team Udayavani |

ರಾಯಚೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಯಲ್ಲೇ ಇದ್ದಾರೆ. ಕೆಲ ವೈಯಕ್ತಿಕ ಸಮಸ್ಯೆಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿಲ್ಲ. ಸಮಸ್ಯೆಗಳ ಪರಿಹಾರದ ಬಳಿಕ ಪಕ್ಷ ಸಂಘಟನೆಗೆ ಮುಂದಾಗಲಿದ್ದಾರೆ ಎಂದು ಸಂಸದ ಬಿ.ಶ್ರೀರಾಮುಲು ತಿಳಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಸಿಂಧನೂರು ಹಾಗೂ ರಾಯಚೂರು ವಿಧಾನಸಭಾ ಕ್ಷೇತ್ರಗಳಲ್ಲಿ ಜನಾರ್ದನ ರೆಡ್ಡಿ ಸ್ಪರ್ದಿಸಲಿದ್ದಾರೆ ಎಂಬುದು ಊಹಾಪೋಹ.ಅವರು ಚುನಾವಣಾ ರಾಜಕೀಯಕ್ಕೆ ಬರುವುದಿಲ್ಲ.

Advertisement

ನೇರ ನಿಷ್ಠುರ ನಡೆಯ ಅವರಿಗೆ ರಾಜಕೀಯ ಸಲ್ಲುವುದಿಲ್ಲ. ನಮಗೆ ಅನುಭವ ಇರುವುದರಿಂದ ನಾವು ಚುನಾವಣಾ ರಾಜಕೀಯದಲ್ಲಿದ್ದೇವೆ ಎಂದರು. ತಮ್ಮ ಹಾಗೂ ಕರುಣಾಕರ ರೆಡ್ಡಿ ನಡುವಿನ ಭಿನ್ನಾಭಿಪ್ರಾಯ ಮುಗಿಯುವುದಿಲ್ಲ. ಹಾಗೆಯೇ ಇರುತ್ತದೆ. ಸಂಧಾನದ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿಯಾಗಬೇಕು ಎಂಬುದರಲ್ಲಿ ತಪ್ಪಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತಾವು ಉಪ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಲ್ಲ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿಯೇ ಮುಂದುವರಿಯುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next