Advertisement

ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

05:40 PM Feb 06, 2021 | Team Udayavani |

ಬೆಂಗಳೂರು: ನಾಯಕತ್ವ ಬದಲಾವಣೆ ಬಿಜೆಪಿಯಲ್ಲಿಲ್ಲ, ಕಾಂಗ್ರೆಸ್ ನಲ್ಲಿ ಇರಬಹುದು. ಶಾಸಕರು ಯಾವುದೇ ನೋವು, ಗೊಂದಲ, ಆಕ್ಷೇಪಗಳಿದ್ದರೆ ಮುಖ್ಯಮಂತ್ರಿಯವರಲ್ಲಿ ಅಥವಾ ಕೇಂದ್ರದ ನಾಯಕರಲ್ಲಿ ಹೇಳಿಕೊಳ್ಳಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

Advertisement

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಮಾಡುವುದಿದ್ದರೆ ಮಾಧ್ಯಮಕ್ಕೆ ಮಾಹಿತಿ ನೀಡಿಯೇ ಮಾಡ್ತುತ್ತೇವೆ. ಆದರೆ ಸದ್ಯಕ್ಕಂತೂ ಯಾವುದೇ ಬದಲಾವಣೆ ಇಲ್ಲ. ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ ಎಂದರು.

ಯಾವುದೇ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಯಾರೋ ಒಬ್ಬರು ಅಥವಾ ಇಬ್ಬರು  ಹೇಳಿಕೆ ಕೊಡುತ್ತಿದ್ದಾರೆ. ಆ ಬಗ್ಗೆ ರಾಜ್ಯಾಕ್ಷರು ಹಾಗೂ ಸಂಬಂಧಿಸಿದ ನಾಯಕರು ಗಮನ ಹರಿಸಿದ್ದಾರೆ ಎಂದರು.

ಇದನ್ನೂ ಓದಿ:ಜಗದೀಶ್ ಅಧಿಕಾರಿ ಕ್ಷಮೆ ಯಾಚಿಸದಿದ್ದರೆ ಬಿಲ್ಲವರಾದ ನಾವು ‘ತಾಂಟಲು’ ಸಿದ್ದ: ಪ್ರತಿಭಾ ಕುಳಾಯಿ

ಕೃಷಿ ಕಾಯ್ದೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ: ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ಕಾಯ್ದೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದ ಅವರು, ಕಾಯ್ದೆಯ ಯಾವ ಸೆಕ್ಷನ್ ನಲ್ಲಿ ಲೋಪ ಇದೆ ಎಂದು ಹೇಳಲಿ, ಅದನ್ನು ಸರಿಪಡಿಸಲು ಸಿದ್ಧರಿದ್ದೇವೆ. ಕಾಯ್ದೆ ಹಿಂಪಡೆಯಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಲ್ಲಿ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಕೇಂದ್ರ ಬಜೆಟ್ ಗೆ ಆ ರೀತಿ ಟೀಕೆ ಮಾಡಿದ್ದಾರೆ.  ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೆ ಫೈಟ್ ಇದೆ. ದೇಶದಲ್ಲಿ ಕಾಂಗ್ರೆಸ್ ಗೆ ವಿಪಕ್ಷ ಸ್ಥಾನ ಶಾಶ್ವತ ಎಂದು ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next