Advertisement

ಉರ್ದು ಶಾಲೆ ಮುಚ್ಚುವ ಪ್ರಶ್ನೆಯೇ ಇಲ್ಲ: ಸಚಿವ ಬಿ.ಸಿ.ನಾಗೇಶ್

11:21 AM Apr 22, 2022 | Team Udayavani |

ಚಿಕ್ಕಮಗಳೂರು: ಉರ್ದು ಶಾಲೆ ಮುಚ್ಚುವ ಪ್ರಶ್ನೆಯೇ ಇಲ್ಲ. ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಒಂಟಿ ಶಾಲೆಗಳನ್ನು ವಿಲೀನ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.

Advertisement

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಿಕೆ ಹಾಗೂ ಮಕ್ಕಳ ನಡುವೆ ಪ್ರತಿಸ್ಪರ್ಧೆ, ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಗಳ ವಿಲೀನ ಮಾಡಲಾಗುವುದು. ಯಾವುದೇ ಶಾಲೆಗಳನ್ನು ಮುಚ್ಚುವುದಿಲ್ಲ. ಕನ್ನಡ ಶಾಲೆ, ಉರ್ದು, ಮರಾಠಿ, ತಮಿಳು ಶಾಲೆ ಯಾವುದೇ ಇದ್ದರೂ ಸಹ ವಿಲೀನ ಮಾಡಲಾಗುವುದು ಎಂದರು.

ಇದನ್ನೂ ಓದಿ:ಉಡುಪಿ ಕಾಲೇಜಿನಲ್ಲಿ ಹೈಡ್ರಾಮಾ: ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಒತ್ತಾಯ; ಅವಕಾಶ ನಿರಾಕರಣೆ

ಪಿಯುಸಿ ಪರೀಕ್ಷೆಯ ಬಗ್ಗೆ ಮಕ್ಕಳು ತುಂಬಾ ವಿಶ್ವಾಸದಲ್ಲಿದ್ದಾರೆ. ರಾಜ್ಯದಲ್ಲಿ ಬಾಲಕರು ಬಾಲಕಿಯರು ಸಮಪಾಲು ಬರೆಯುತ್ತಿದ್ದಾರೆ. ಅಧಿಕಾರಿಗಳ ಮೇಲೆ ವಿಶ್ವಾಸವಿದೆ, ಪರೀಕ್ಷೆ ಉತ್ತಮವಾಗಿ ನಡೆಯುತ್ತದೆ ಎಂದರು.

ಎರಡು ವರ್ಷದಿಂದ ಮಕ್ಕಳಿಗೆ ಪರೀಕ್ಷೆ ಇರಲಿಲ್ಲ. ಎಲ್ಲಾ ಮಕ್ಕಳು ಧೈರ್ಯದಿಂದಿದ್ದಾರೆ. ಪಿಯುಸಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ಮಕ್ಕಳಿಗೂ ಶುಭಕೋರುತ್ತೇನೆ ಎಂದು ಸಚಿವ ನಾಗೇಶ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next