Advertisement

ಶಿಕ್ಷಣ ಸಾಲ ಮನ್ನಾದ ಪ್ರಸ್ತಾಪ ಇಲ್ಲ

09:59 AM Dec 10, 2019 | Team Udayavani |

ಹೊಸದಿಲ್ಲಿ: ಶಿಕ್ಷಣ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾವ ಸರಕಾರದ ಮುಂದೆ ಇಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಕಳೆದ 3 ವರ್ಷಗಳಲ್ಲಿ 2016-17ರಿಂದ 2019ರ ಮಾರ್ಚ್‌ ವರೆಗೆ ಕಳೆದ ಬಾಕಿ ಇರುವ ಶಿಕ್ಷಣ ಸಾಲಗಳ ಮೊತ್ತ 67,685.59 ರೂ. ನಿಂದ 2019ರ ಸೆಪ್ಟೆಂಬರ್‌ನಲ್ಲಿ 75,450.68 ಕೋಟಿ ರೂ. ಗೆ ಏರಿಕೆಯಾಗಿದೆ. ಸಾಲದ ಕುರಿತು ಸಾರ್ವಜನಿಕ ವಲಯದ ಬ್ಯಾಂಕುಗಳು ಮಾಹಿತಿ ಒದಗಿಸಿದೆ ಎಂದು ಹಣಕಾಸು ಸಚಿವೆ ನಿರ್ಮಳಾ ಸೀತಾರಾಮನ್‌ ಅವರು ಲೋಕಸಭೆಗೆ ಹೇಳಿದ್ದಾರೆ.

Advertisement

ತಮ್ಮ ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಾಲವನ್ನು ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ಯಾವುದೇ ಘಟನೆಗಳು ನಮ್ಮ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ವರದಿಯಾಗಿಲ್ಲ. ಈಗಾಗಲೇ ನೀಡಲಾಗಿರುವ ಸಾಲಗಳನ್ನು ಮರುಪಾವತಿಯಾಗುವಂತೆ ಬ್ಯಾಂಕುಗಳು ನೋಡಿಕೊಳ್ಳಬೇಕು. ಇದಕ್ಕೆ ನೀವು ತುಂಬಾ ಒತ್ತಡ ಹೇರಬೇಡಿ. ಒತ್ತಡ ಹೇರದೇ ವಿದ್ಯಾರ್ಥಿಗಳು ಸಾಲವನ್ನು ತೀರಿಸುವಂತೆ ನೋಡಿಕೊಳ್ಳಿ ಎಂದು ಸಚಿವರು ಬ್ಯಾಂಕ್‌ಗೆ ಸೂಚಿಸಿದ್ದಾಗಿ ಹೇಳಿದ್ದಾರೆ.

ವಿದ್ಯಾರ್ಥಿ ಜೀವನಕ್ಕೆ ಮಾಡಲಾದ ಸಾಲವನ್ನು ತಾವು ಉದ್ಯೋಗ ಕ್ಷೇತ್ರಕ್ಕೆ ತೆರಳಿದ ಬಳಿಕ ಅವರೇ ತೀರಿಸಿಬೇಕು. ಇದನ್ನು ಯಾವುದೇ ಕಾರಣಕ್ಕೆ ಸರಕಾರ ಮರುಪಾತಿ ಮಾಡುವುದು ಅಥವ ಮನ್ನಾ ಮಾಡುವ ಯೋಜನೆ ಇಲ್ಲ ಎಂದು ಅವರು ಹೇಳಿದ್ದಾರೆ. ನಿರುದ್ಯೋಗ ಸಮಸ್ಯೆ ಕಾರಣ ಶೈಕ್ಷಣಿಕ ಸಾಲಗಳು ಮನ್ನಾ ಮಾಡಬೇನ್ನುವ ಆಗ್ರಹಗಳು ಅಲ್ಲಲ್ಲಿ ಕೇಳಿ ಬರುತ್ತಿದೆ. ಈ ಮಧ್ಯೆ ಸರಕಾರದ ಮುಂದೆ ಅತಂಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಚಿವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next