Advertisement
ಹಣಕಾಸಿನ ಸಮಸ್ಯೆ ಇರುವ ಕಾರಣದಿಂದ ಪಶ್ಚಿಮಬಂಗಾಳದ ಟೀಸ್ತ ಬ್ಯಾರೇಜ್ ಅಣೆಕಟ್ಟು ಪೂರ್ಣಗೊಳ್ಳುತ್ತಿಲ್ಲ. ಕೇಂದ್ರದ ಸರಕಾರ ಹಣಕಾಸಿನ ನೆರವನ್ನು ಸರಿಯಾಗಿ ನೀಡುತ್ತಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಸಂಸದರು ಆಗ್ರಹಿಸಿದ್ದರು. ಈ ಕುರಿತು ನೀರಾವರಿ ಸಚಿವಾಲಯವನ್ನು ಸಮವರ್ತಿ ಪಟ್ಟಿಗೆ ಸೇರಿಸಬೇಕು ಎಂದು ಕೆಲವು ಸಂಸದರು ಆಗ್ರಹಿಸಿದ್ದರು.
ದೇಶದಲ್ಲಿ ಸುಲಭ ಅಧಿಕಾರಕ್ಕಾಗಿ ಹಲವು ವಿಂಗಡನೆಗಳನ್ನು ಸಂವಿಧಾನಬದ್ಧವಾಗಿ ಮಾಡಲಾಗಿದೆ. ಸಂಯುಕ್ತ ರಾಷ್ಟ್ರ ಪದ್ಧತಿಗೆ ಅನುಗುಣವಾಗಿ 248ನೇ ವಿಧಿಯ ಅನ್ವಯ ಸಂವಿಧಾನವು ಕೇಂದ್ರ-ರಾಜ್ಯಗಳ ನಡುವೆ ಅಧಿಕಾರಗಳನ್ನು ಹಂಚಿಕೊಟ್ಟಿದೆ. ಈ ಆಧಿಕಾರಗಳನ್ನು ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಹಾಗು ಸಮವರ್ತಿ ಪಟ್ಟಿಗಳಾಗಿ ವಿಂಗಡಿಸಲಾಗಿದೆ.
Related Articles
Advertisement
ಕೇಂದ್ರ ಪಟ್ಟಿಕೇಂದ್ರ ಪಟ್ಟಿಯಲ್ಲಿ 99 ವಿಷಯಗಳಿದ್ದು ಇವುಗಳ ಬಗ್ಗೆ ಕಾನೂನುಗಳನ್ನು ರಚಿಸುವ ಸಂಪೂರ್ಣ ಅಧಿಕಾರವು ಕೇಂದ್ರ ಸಂಸತ್ತಿಗೆ ಮಾತ್ರ ನೀಡಲಾಗಿದೆ. ಮುಖ್ಯವಾಗಿ ರಕ್ಷಣೆ, ವಿದೇಶ ಸೇವೆ, ಒಪ್ಪಂದಗಳು, ಯುದ್ದ ಹಾಗೂ ಶಾಂತಿ, ನಾಗರಿಕತೆ, ರೈಲ್ವೇ, ಹಡಗು ಮತ್ತು ವಿಮಾನಯಾನ, ಅಂಚೆ-ತಂತಿ, ದೂರವಾಣಿ, ಹಣ-ಚಲಾವಣೆ, ವಿದೇಶ ಸಾಲ, ವಿದೇಶ ವ್ಯಾಪಾರ, ರಿಸರ್ವ್ ಬ್ಯಾಂಕ್, ಅಂತಾರಾಜ್ಯ ವ್ಯಾಪಾರ, ವಾಣಿಜ್ಯ,ಬ್ಯಾಂಕಿಂಗ್, ವಿಮೆ, ಚುನಾವಣೆಗಳು ಇತ್ಯಾದಿಗಳನ್ನು ಕೇಂದ್ರ ಸರಕಾರ ನೋಡಿಕೊಳ್ಳುತ್ತದೆ. ರಾಜ್ಯ ಪಟ್ಟಿ
ರಾಜ್ಯ ಪಟ್ಟಿಯಲ್ಲಿ 61 ವಿಷಯಗಳಿದ್ದು ರಾಜ್ಯ ಶಾಸಕಾಂಗಗಳಿಗೆ ಸ್ವತಂತ್ರವಾಗಿ ಈ ವಿಷಯಗಳ ಬಗ್ಗೆ ಕಾನೂನುಗಳನ್ನು ರಚಿಸುವ ಅಧಿಕಾರವಿದೆ. ಸಾರ್ವಜನಿಕ ಶಾಂತಿ, ಪೊಲೀಸ್, ನ್ಯಾಯದ ಅಡಳಿತ, ಜೈಲುಗಳು, ಸœಳೀಯ ಸರಕಾರಗಳು, ಸಾರ್ವಜನಿಕ ಆರೋಗ್ಯ, ನಿರ್ಮಲೀಕರಣ, ಗ್ರಂಥಾಲಯಗಳು, ನೀರು ಸರಬರಾಜು, ನೀರಾವರಿ, ಮೀನುಗಾರಿಕೆ, ಸಿನಿಮಾ ಮಂದಿರಗಳು, ಸœಳೀಯ ಚುನಾವಣೆಗಳು, ಕಂದಾಯ ಇತ್ಯಾದಿಗಳನ್ನು ನೋಡಿಕೊಳ್ಳುವ ಜಬಾಬ್ದಾರಿಗಳನ್ನು ರಾಜ್ಯಕ್ಕೆ ವಹಿಸಲಾಗಿದೆ. ಸಮವರ್ತಿ ಪಟ್ಟಿ
ಈ ಪಟ್ಟಿಯಲ್ಲಿ 51 ವಿಷಯಗಳಿದ್ದು ಇವುಗಳ ಮೇಲೆ ಸಂಸತ್ತು ಹಾಗು ರಾಜ್ಯ ಶಾಸಕಾಂಗಗಳು ಕಾನೂನು ರಚಿಸುವ ಆಧಿಕಾರ ಪಡೆದಿವೆ. ರಾಜ್ಯದ ಭದ್ರತೆ, ವಿವಾಹ, ವಿವಾಹ ವಿಚ್ಛೇದನ, ಅಸ್ತಿಯ ವರ್ಗಾವಣೆ, ಒಕ್ಕುಲುತನ, ಭೂಮಿ, ನಿಕ್ಷೇಪ, ನ್ಯಾಯಾಲಯ ನಿಂದನೆ, ಕಲಬೆರಕೆ, ಸಾಮಾಜಿಕ ಹಾಗು ಆರ್ಥಿಕ ಯೋಜನೆ, ಸಾಮಾಜಿಕ ಭದ್ರತೆ, ಶಿಕ್ಷಣ, ಅರಣ್ಯ, ವೈದ್ಯಕೀಯ ಹಾಗು ಇತರ ವೃತ್ತಿಗಳು. ಬೆಲೆನಿಯಂತ್ರಣ, ಕಾರ್ಖಾನೆಗಳು, ವಿದ್ಯುತ್ತ್ ಶಕ್ತಿ, ಸಮಾಚಾರ ಪತ್ರಿಕೆಗಳು, ಪುಸ್ತಕ ಹಾಗು ಮುದ್ರಣ ಮುಂತಾದವುಗಳನ್ನು ಈ ಎರಡೂ ಸರಕಾರಗಳು ನಿಯಂತ್ರಿಸಬಹುದಾಗಿದೆ. ಇಲ್ಲಿಯೂ ಕೇಂದ್ರದ ಪಾಲು ಹೆಚ್ಚು ಇರುತ್ತದೆ.