ಹೌದು.. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪೈಕಿ 384 ಕಾಲೇಜಿನಲ್ಲಿ ಪ್ರಾಂಶುಪಾಲರೇ ಇಲ್ಲ. ಶಿಕ್ಷಣ ಸಂಸ್ಥೆಗೆ ಮುಖ್ಯಸ್ಥರೇ ಇಲ್ಲವಾದರೆ ಗುಣಮಟ್ಟ ಹೇಗಿರುತ್ತದೆ ಎಂಬುದನ್ನು ಸುಲಭವಾಗಿ ಗ್ರಹಿಸಬಹುದು.
Advertisement
ಸರ್ಕಾರಿ ಪದವಿ ಕಾಲೇಜಿನ ಸ್ಥಿತಿಯೂ ಅದೇ ಆಗಿದೆ. ಶೈಕ್ಷಣಿಕ ಗುಣಮಟ್ಟ ಕಾಯ್ದು ಕೊಳ್ಳುವ ಜತೆಗೆ ಆಡಳಿತಾತ್ಮಕ ಅಂಶಗಳನ್ನು ನೋಡಿಕೊಳ್ಳಲು ಕಾಲೇಜಿಗೆ ಪ್ರಾಂಶುಪಾಲರ ಅಗತ್ಯ ಇರುತ್ತದೆ. ಆದರೆ, ಸರ್ಕಾರಿ ಕಾಲೇಜಿನಲ್ಲೇ ಪ್ರಾಂಶುಪಾಲರು ಇಲ್ಲಾ ಎಂದರೆ, ಪದವಿ ಶಿಕ್ಷಣದ ವ್ಯವಸ್ಥೆ ಹೇಗಿದೆ ಎಂಬುದನ್ನು ಊಹಿಸಿಕೊಳ್ಳಬಹುದು.