Advertisement

ಸ್ವತಂತ್ರ ಧರ್ಮ ವಿಚಾರದಲ್ಲಿ ರಾಜಕೀಯ ಇಲ್ಲ: ಸಿಎಂ

06:25 AM Dec 25, 2017 | Team Udayavani |

ಹಾವೇರಿ: ಲಿಂಗಾಯತ ಸ್ವತಂತ್ರ ಧರ್ಮದ ವಿಚಾರವಾಗಿ ಸರ್ಕಾರದ ವತಿಯಿಂದ ಏನು ಮಾಡಬೇಕೋ ಅದನ್ನೆಲ್ಲ ಮಾಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮ ವಿಷಯಕ್ಕೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಅವರನ್ನೆಲ್ಲ ಒಟ್ಟಾಗಿ ಬರಲು ಹೇಳಿದ್ದೆ. ಅವರು ಬಂದಿಲ್ಲ. ಅದಕ್ಕೆ ಬೇರೆ ಆಯ್ಕೆ ಇಲ್ಲ ಎಂದರು. ಈ ವಿಷಯಕ್ಕೆ ಸಂಬಂಧಿಸಿ ಬಂದಿದ್ದ ಎಲ್ಲ 5 ಅರ್ಜಿಗಳನ್ನು ಅಲ್ಪಸಂಖ್ಯಾತರ ಆಯೋಗಕ್ಕೆ ಕಳಿಸಿದ್ದೇನೆ.

ಉಳಿದದ್ದು ಆಯೋಗಕ್ಕೆ ಬಿಟ್ಟ ವಿಚಾರ. ಸರ್ಕಾರದ ವತಿಯಿಂದ ಏನು ಕೆಲಸ ಮಾಡಬೇಕೋ ಅದನ್ನು ನಾವು ಮಾಡಿದ್ದೇವೆ ಎಂದ
ಅವರು, ಶಾಮನೂರ ಶಿವಶಂಕರಪ್ಪ ಈ ವಿಚಾರವಾಗಿ ಏನು ಹೇಳಿದ್ದರೂ ಅದು ಅವರ ವೈಯಕ್ತಿಕ ವಿಚಾರ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next